ದೆಹಲಿಯ ಕರ್ತವ್ಯ ಪಥದಲ್ಲಿ 75ನೇ ಗಣರಾಜ್ಯೋತ್ಸವ ಪರೇಡ್: ನೇರಪ್ರಸಾರ
🎬 Watch Now: Feature Video
Published : Jan 26, 2024, 10:12 AM IST
|Updated : Jan 26, 2024, 12:51 PM IST
ನವದೆಹಲಿ: ಭಾರತ ಇಂದು 75ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. 1950ರ ಜನವರಿ 26ರಂದು ಸಂವಿಧಾನ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದು ದೇಶ ಗಣರಾಜ್ಯವಾಗಿತ್ತು. ಹೀಗಾಗಿ ಈ ದಿನವನ್ನು ಅತ್ಯಂತ ಸಂಭ್ರಮ, ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥದಲ್ಲಿ ಮಿಲಿಟರಿ ಶಕ್ತಿ, ಮಹಿಳಾ ಸಬಲೀಕರಣ, ಸಂಸ್ಕೃತಿ ಹಾಗು ಪರಂಪರೆಯನ್ನು ಬಿಂಬಿಸುವ ಪರೇಡ್ ನಡೆಯುತ್ತಿದೆ. ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.ಎರಡು ದಿನಗಳ ಭಾರತ ಭೇಟಿ ಆರಂಭಿಸಿರುವ ಮ್ಯಾಕ್ರಾನ್ ಗುರುವಾರ ರಾಜಸ್ಥಾನದ ಜೈಪುರಕ್ಕೆ ಬಂದಿಳಿದಿದ್ದರು.
ಇಂದಿನ ಪರೇಡ್‌ನಲ್ಲಿ ಫ್ರಾನ್ಸ್‌ನ ಸೇನಾ ತುಕಡಿಯೂ ಭಾಗವಹಿಸುತ್ತಿದೆ. 95 ಸದಸ್ಯರ ಕವಾಯತು ತಂಡ ಮತ್ತು 33 ಸದಸ್ಯರ ಬ್ಯಾಂಡ್ ತುಕಡಿಯು ಕರ್ತವ್ಯ ಪಥದಲ್ಲಿ ಸಾಗುತ್ತಿದೆ. ಗಣರಾಜ್ಯೋತ್ಸವದ ಮುನ್ನಾದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮುರ್ಮು ಅವರು ಪರೇಡ್ ಮೆರವಣಿಗೆಯಲ್ಲಿ ಸಾಗುತ್ತಿರುವ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸುತ್ತಿದ್ದಾರೆ.
ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ, ಪೊಲೀಸ್ ಮತ್ತು ಅರೆಸೈನಿಕ ಸಿಬ್ಬಂದಿ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಈ ಪರೇಡ್ ಸುಮಾರು 90 ನಿಮಿಷಗಳ ಕಾಲ ನಡೆಯಲಿದೆ.
ಇದನ್ನೂ ಓದಿ: ರಾಮಮಂದಿರವು ಭಾರತೀಯ ಪರಂಪರೆಯ ಮರು ಶೋಧದ ಪ್ರತೀಕ: ರಾಷ್ಟ್ರಪತಿ ಬಣ್ಣನೆ