ETV Bharat / technology

ಮೊಬೈಲ್​ ಸೆಕ್ಯುರಿಟಿ ಬಗ್ಗೆ ನಿಮಗೆ ಭಯವೇ?: ಹೀಗೆ ಮಾಡಿದಲ್ಲಿ ಸೈಬರ್​ ದಾಳಿಯಿಂದ ನಿಮ್ಮ ಫೋನ್​ ಫುಲ್​ ಸೇಫ್​! - Mobile Security Tips - MOBILE SECURITY TIPS

ಗೂಗಲ್​ ಪ್ಲೇ ಸ್ಟೋರ್​ನಿಂದ ಅಪ್ಲಿಕೇಶನ್​ಗಳನ್ನು ಡೌನ್​ಲೋಡ್​ ಮಾಡುತ್ತಿದ್ದೀರಾ? ಹಾಗಾದರೆ ಡೌನ್​ಲೋಡ್​ ಮಾಡುವ ಮುನ್ನ ಎಚ್ಚರಿಕೆ ವಹಿಸುವಂತೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ ಸಲಹೆ ನೀಡಿದೆ.

Worried about mobile security? If you do this, you will be completely safe from cyber attacks!
ಮೊಬೈಲ್​ ಸೆಕ್ಯುರಿಟಿ ಬಗ್ಗೆ ಭಯವೇ?: ಹೀಗೆ ಮಾಡಿದಲ್ಲಿ ಸೈಬರ್​ ದಾಳಿಯಿಂದ ಫುಲ್​ ಸೇಫ್​! (ETV Bharat)
author img

By ETV Bharat Karnataka Team

Published : Jun 7, 2024, 10:50 AM IST

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್​ ಫೋನ್​ ಬಳಕೆ ಸಾಕಷ್ಟು ಹೆಚ್ಚಾಗಿದೆ. ವೈಯಕ್ತಿಕ ಅಗತ್ಯಗಳಿಂದ ಬ್ಯಾಂಕಿಂಗ್​ ಸೇವೆಗಳವರೆಗೆ ಅನೇಕ ಜನರು ಸ್ಮಾರ್ಟ್​ ಫೋನ್​ಗಳನ್ನೇ ಅವಲಂಬಿಸಿದ್ದಾರೆ. ಅದೇ ಸಮಯಕ್ಕೆ ಸೈಬರ್​ ದಾಳಿಗಳೂ ಹೆಚ್ಚಾಗುತ್ತಿವೆ. ಈ ಬಗ್ಗೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ ಮಹತ್ವದ ದಾಖಲೆಯೊಂದನ್ನು ಬಿಡುಗಡೆ ಮಾಡಿದೆ. ಈ ಡಾಕ್ಯುಮೆಂಟ್​ನಲ್ಲಿ ಸೈಬರ್​ ದಾಳಿಯ ವಿರುದ್ಧ ನಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬಹುದು ಎನ್ನುವ ಕುರಿತು ಪ್ರಮುಖ ಸಲಹೆಗಳನ್ನು ನೀಡಲಾಗಿದೆ. ಆ ಕುರಿತು ಮಾಹಿತಿ ಇಲ್ಲಿದೆ.

ಮೊಬೈಲ್​ ಸೆಕ್ಯುರಿಟಿ ಟಿಪ್ಸ್​: ನೀವು Android ಅಥವಾ iPhone ಬಳಸುತ್ತಿದ್ದೀರಾ? ನಿಮ್ಮ ಫೋನ್ ಸುರಕ್ಷಿತವಾಗಿದೆಯಾ ಎನ್ನುವ ಭಯ ನಿಮ್ಮಲ್ಲಿದೆಯಾ? ಹಾಗಾದರೆ ನಿಮ್ಮ ಫೋನ್​ಗಳನ್ನು ಸುರಕ್ಷಿತವಾಗಿಡಬೇಕಾದರೆ, ಅವುಗಳನ್ನು ಪ್ರತಿ ವಾರ ರಿಸ್ರಾರ್ಟ್​ ಮಾಡುತ್ತಿರಬೇಕು ಎಂದು ಅಮೆರಿಕನ್​ ರಾಷ್ಟ್ರೀಯ ಭದ್ರತಾ ಸಂಸ್ಥೆ (NSA) ಸಲಹೆ ನೀಡಿದೆ. ಸೈಬರ್​ ದಾಳಿಕೋರರಿಂದ ಸ್ಮಾರ್ಟ್​ಫೋನ್​ಗಳನ್ನು ಸುರಕ್ಷಿತವಾಗಿಡಲು ಅನುಸರಿಸಬೇಕಾದ ವಿಧಾನಗಳನ್ನು ವಿವರಿಸುವ ಕೆಲವು ವರ್ಷಗಳ ಹಿಂದೆ ಸಿದ್ಧಪಡಿಸಿದ ದಾಖಲೆಯನ್ನು NSA ಇತ್ತೀಚೆಗೆ ಬಿಡುಗಡೆ ಮಾಡಿದೆ.

ಸೈಬರ್​ ದಾಳಿ ಹಾಗೂ ಮಾಲ್​ವೇರ್​ಗಳಿಂದ ತಪ್ಪಿಸಿಕೊಳ್ಳಲು ಮೊಬೈಲ್​ ಬಳಕೆದಾರರು ವಾರಕ್ಕೊಮ್ಮೆ ತಮ್ಮ ಸ್ಮಾರ್ಟ್​ಫೋನ್​ಗಳನ್ನು ರಿಸ್ಟಾರ್ಟ್​ ಮಾಡಬೇಕೆಂದು NSA ಆ ದಾಖಲೆಯಲ್ಲಿ ಸೂಚಿಸಿದೆ ಎಂದು ಫೋರ್ಬ್ಸ್​ ನಿಯತಕಾಲಿಕೆ ವರದಿ ಮಾಡಿದೆ. 2010ರ ದಶಕದ ಆರಂಭದಲ್ಲಿ ತಯಾರಿಸಲಾದ ಫೋನ್​ಗಳು, ವಿಶೇಷವಾಗಿ ಹೋಮ್​ಬಟನ್​ ಹೊಂದಿರುವ ಐಫೋನ್​ಗಳು ಮತ್ತು ಕೆಲವು Samsung Galaxy ಸಾಧನಗಳನ್ನು ಉಲ್ಲೇಖಿಸಿ, ಎನ್​ಎಸ್​ಎ ಈ ಸಲಹೆಯನ್ನು ನೀಡಿದೆ. ಇದು ಅಮೂಲ್ಯವಾದ ಸಲಹೆಯಾಗಿದ್ದು, ಸ್ಮಾರ್ಟ್​ಫೋನ್​ಗಳನ್ನು ರಿಸ್ಟಾರ್ಟ್​ ಮಾಡುವುದರಿಂದ ಕನಿಷ್ಠ ಕೆಲವು ಸೈಬರ್​ ಅಟ್ಯಾಕ್​ಗಳನ್ನು ತಡೆಬಹುದು ಎಂದು ಮ್ಯಾಗಜಿನ್​ ಹೇಳಿದೆ.

ಎನ್​ಎಸ್​ಎ ಡಾಕ್ಯುಮೆಂಟ್​ನಲ್ಲಿ, ಅಟೋ ರಿಸ್ಟಾರ್ಟ್​ ಆಯ್ಕೆ ಮತ್ತು ಸ್ಮಾರ್ಟ್​ಫೋನ್​ಗಳ ಬಯೋಮೆಟ್ರಿಕ್​ ಲಾಕ್​ ಮತ್ತು ಜೊತೆಗೆ ಬೇರೆ ಚಾರ್ಜಿಂಗ್​ ಕೇಬಲ್​ಗಳನ್ನು ಬಳಸುವ ಬದಲು ಅದರದ್ದೇ ಮೂಲ ಚಾರ್ಜಿಂಗ್​ ಕೇಬಲ್​ಗಳನ್ನು ಬಳಸಬೇಕು ಎಂದು ಉಲ್ಲೇಖಿಸಲಾಗಿದೆ. ಮೊಬೈಲ್​ಗಳನ್ನು ಆಗಾಗ್ಗೆ ರಿಸ್ಟಾರ್ಟ್​ ಮಾಡುವುದರಿಂದ ಮೆಮೊರಿ ಸೋರಿಕೆ ಮತ್ತು ದೋಷಯುಕ್ತ ಅಪ್ಲಿಕೇಶನ್​ಗಳ ಪ್ರವೇಶವನ್ನು ತಡೆಯಬಹುದು. ವಾರಕ್ಕೊಮ್ಮೆ ರಿಸ್ಟಾರ್ಟ್​ ಮಾಡಲು ನೀವು ಮರೆತರೆ, ಇನ್ನೊಂದು ಆಯ್ಕೆಯೂ ಇದೆ. ಸೆಟ್ಟಿಂಗ್​ಗಳಲ್ಲಿ built-in option ಸೆಟ್​ ಮಾಡಿದರೆ, ನೀವು ಸೆಟ್​ ಮಾಡಿದ ವೇಳಾಪಟ್ಟಿಯ ಪ್ರಕಾರ ನಿಮ್ಮ ಫೋನ್​ ರಿಸ್ಟಾರ್ಟ್​ ಆಗುತ್ತದೆ. ಆಗ ನಿಮ್ಮ ಫೋನ್​ ಹೆಚ್ಚು ಸುರಕ್ಷಿತವಾಗಿರುತ್ತದೆ.

ನಕಲಿ ಟೆಲಿಗ್ರಾಮ್​ ಹಾಗೂ ಸಿಗ್ನಲ್​ ಅಪ್ಲಿಕೇಶನ್​ಗಳಿಂದ ಜಾಗರೂಕರಾಗಿರಿ, ಸೈಬರ್​ ಅಪರಾಧಿಗಳು ಪ್ರತಿದಿನ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಲೇ ಇದ್ದಾರೆ. ಗೂಗಲ್​ ಪ್ಲೇ ಸ್ಟೋರ್​ನಲ್ಲಿ ನಕಲಿ ಟೆಲಿಗ್ರಾಮ್​ ಹಾಗೂ ಸಿಗ್ನಲ್​ ಅಪ್ಲಿಕೇಶನ್​ಗಳನ್ನೂ ಸೈಬರ್​ ಅಪರಾಧಿಗಳು ತುರುಕಿದ್ದಾರೆ. ಇವುಗಳ ಮೂಲ ಅಪ್ಲಿಕೇಶನ್​ಗಳನ್ನೇ ಹೋಲುತ್ತವೆ. ಆದ್ದರಿಂದ ಬಳಕೆದಾರರಿಗೆ ಅವುಗಳನ್ನು ಗುರುತಿಸುವುದು ತುಂಬಾ ಕಷ್ಟ. ಈ ಹಿನ್ನೆಲೆಯಲ್ಲಿ ಎಲ್ಲಾ ಆ್ಯಂಡ್ರಾಯ್ಡ್​ ಬಳಕೆದಾರರೂ ತುಂಬಾ ಜಾಗರೂಕರಾಗಿರಬೇಕು ಎಂದು ತಾಂತ್ರಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಟೆಲಿಗ್ರಾಮ್​ ಮತ್ತು ಸಿಗ್ನಲ್​ ಅಪ್ಲಿಕೇಶನ್​ಗಳು WhatsApp ನಂತಹ ಮೆಸೇಂಜರ್​ನಂತಹ ಅಪ್ಲಿಕೇಶನ್​ಗಳಾಗಿವೆ. ಇವುಗಳನ್ನು ಬಳಸುವವರ ಸಂಖ್ಯೆಯೂ ಬಹಳ ದೊಡ್ಡದಿದೆ. ಅದಕ್ಕಾಗಿಯೇ ಸೈಬರ್​ ಅಪರಾಧಿಗಳು ಅವರನ್ನೇ ಗುರಿಯಾಗಿಸುತ್ತಾರೆ. ಟೆಲಿಗ್ರಾಮ್​ ಮತ್ತು ಸಿಗ್ನಲ್​ ಅಪ್ಲಿಕೇಶನ್​ಗಳಿಗೆ ಸಂಬಂಧಿಸಿದ ನಕಲಿ ಮತ್ತು ಕ್ಲೋನಿಂಗ್​ ಅಪ್ಲಿಕೇಶನ್​ಗಳನ್ನು ಕ್ರಿಯೇಟ್​ ಮಾಡಿ, ಅವುಗಳನ್ನು ಗೂಗಲ್​ ಪ್ಲೇಸ್ಟೋರ್​ನಲ್ಲಿ ಇರಿಸಲಾಗಿದೆ. ಕ್ಯಾಸ್ಪರ್​ಸ್ಕೈ ಸೈಬರ್​ ಭದ್ರತಾ ತಜ್ಞರು ಈ ಲಕ್ಷಾಂತರ ನಕಲಿ ಅಪ್ಲಿಕೇಶನ್​ಗಳನ್ನು ಈಗಾಗಲೇ ಗೂಗಲ್​ ಪ್ಲೇಸ್ಟೋರ್​ನಿಂದ ಡೌನ್​ಲೋಡ್​ ಮಾಡಲಾಗಿದೆ ಎಂಬುದನ್ನು ಕಂಡು ಹಿಡಿದಿದ್ದಾರೆ.

ಇದನ್ನೂ ಓದಿ: ದಾಖಲೆ ಮಟ್ಟದ ಆದಾಯಗಳಿಸಿದ Apple​; 1.95 ಟ್ರಿಲಿಯನ್​ ಡಾಲರ್​ ಮೊತ್ತದ iPhone​ ಮಾರಾಟ - iPhone lifetime salesrose

ETV Bharat Logo

Copyright © 2025 Ushodaya Enterprises Pvt. Ltd., All Rights Reserved.