Royal Enfield Most Selling Bikes: ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಭಾರೀ ಕ್ರೇಜ್ ಇರುವುದು ಗೊತ್ತಿರುವ ಸಂಗತಿ. 350ರಿಂದ 450 ಸಿಸಿ ವಿಭಾಗದ ಬೈಕ್‌ಗಳಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಇದೆ. ಕಳೆದ ತಿಂಗಳು ಅಂದರೆ ಜನವರಿ 2025ರ ಅಂಕಿಅಂಶಗಳ ಬಗ್ಗೆ ಹೇಳುವುದಾದರೆ, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮಾರಾಟದ ವಿಷಯದಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಜನವರಿಯಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350ರ ಒಟ್ಟು 33 ಸಾವಿರದ 582 ಯುನಿಟ್ಸ್ ಮಾರಾಟವಾದರೆ, ಒಂದು ವರ್ಷದ ಹಿಂದೆ ಇದೇ ಕ್ಲಾಸಿಕ್ 350ರ ಒಟ್ಟು 28 ಸಾವಿರದ 13 ಯುನಿಟ್ಸ್ ಮಾರಾಟವಾಗಿದ್ದವು. ಕಳೆದ ತಿಂಗಳು ಈ ವಿಭಾಗದಲ್ಲಿ ಹೆಚ್ಚು ಮಾರಾಟವಾದ 10 ಬೈಕ್‌ಗಳು ಯಾವುವು ಎಂಬುದರ ಮಾಹಿತಿ ಹೀಗಿದೆ.
ಈ ಬೈಕ್‌ಗಳು ಮಾರಾಟದಲ್ಲೂ ಮುಂದು: ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ತಿಂಗಳು ಕಂಪನಿ ಈ ಬೈಕ್‌ನ ಒಟ್ಟು 19 ಸಾವಿರದ 163 ಯುನಿಟ್‌ಗಳನ್ನು ಮಾರಾಟ ಮಾಡಿದೆ. ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೂರನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ಹಂಟರ್ ಒಟ್ಟು 15,914 ಹೊಸ ಗ್ರಾಹಕರನ್ನು ಪಡೆದುಕೊಂಡಿದೆ. ಮಾರಾಟ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ರಾಯಲ್ ಎನ್‌ಫೀಲ್ಡ್ ಮೀಟಿಯೋರ್ 350 ಇದ್ದು, ಇದು ಒಟ್ಟು 8,373 ಹೊಸ ಗ್ರಾಹಕರನ್ನು ಪಡೆದುಕೊಂಡಿದೆ.
ಇದಲ್ಲದೇ ಟ್ರಯಂಫ್ 400 ಹೆಸರು ಮಾರಾಟ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಅದರಲ್ಲಿ ಒಟ್ಟು 4 ಸಾವಿರದ 35 ಯುನಿಟ್‌ಗಳು ಮಾರಾಟವಾಗಿವೆ. ಇದಲ್ಲದೇ ಜಾವಾ ಯೆಜ್ಡಿಯ ಹೆಸರು ಮಾರಾಟ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ಜಾವಾ ಯೆಜ್ಡಿ ಒಟ್ಟು 2 ಸಾವಿರದ 753 ಹೊಸ ಗ್ರಾಹಕರನ್ನು ಪಡೆದುಕೊಂಡಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಹೆಸರು ಏಳನೇ ಸ್ಥಾನದಲ್ಲಿದೆ. ಈ ವೇಳೆ ಹಿಮಾಲಯನ್ ಒಟ್ಟು 2 ಸಾವಿರದ 175 ಹೊಸ ಗ್ರಾಹಕರನ್ನು ಪಡೆದುಕೊಂಡಿದೆ.
ಕ್ಲಾಸಿಕ್ 350ರ ಪವರ್‌ಟ್ರೇನ್: ಸಿಂಗಲ್ ಸಿಲಿಂಡರ್, 4-ಸ್ಟ್ರೋಕ್, ಏರ್-ಆಯಿಲ್ ಕೂಲ್ಡ್ ಎಂಜಿನ್ ಹೊಂದಿದೆ. ಎಂಜಿನ್ 6,100 rpm ನಲ್ಲಿ 20.2 bhp ಶಕ್ತಿಯನ್ನು ಉತ್ಪಾದಿಸುತ್ತದೆ. ಇದರೊಂದಿಗೆ, 4,000 rpm ಲ್ಲಿ 27 Nm ಟಾರ್ಕ್ ಉತ್ಪಾದಿಸುತ್ತದೆ. ಪ್ರತಿ ಲೀಟರ್‌ಗೆ 35 ಕಿ.ಮೀ ಮೈಲೇಜ್ ನೀಡುತ್ತದೆ.
ಇದನ್ನೂ ಓದಿ: ಗೂಗಲ್ ಸರ್ಚ್ನಲ್ಲಿ ನಿಮ್ಮ ಪರ್ಸನಲ್ ಡಿಟೈಲ್ಸ್ ಕಾಣಿಸುತ್ತಿದೆಯಾ? ಡಿಲಿಟ್ ಮಾಡಲು ಇಲ್ಲಿದೆ ಸುಲಭ ಮಾರ್ಗ