ETV Bharat / technology

ಮೆಟಲ್ ಯುನಿಬಾಡಿಯ ನಾರ್ಡ್​4 ಸೇರಿ ನಾಲ್ಕು ಹೊಸ ಸಾಧನ ಬಿಡುಗಡೆ ಮಾಡಿದ OnePlus: ವಿಶೇಷತೆಗಳೇನು ತಿಳಿಯಿರಿ - OnePlus Nord 4 - ONEPLUS NORD 4

ಸಂಪೂರ್ಣ ಮೆಟಾಲಿಕ್ ಯುನಿಬಾಡಿಯನ್ನು ಹೊಂದಿರುವ ನಾರ್ಡ್​4 ಸ್ಮಾರ್ಟ್​ಫೋನ್ ಅನ್ನು ಒನ್ ಪ್ಲಸ್ ಬಿಡುಗಡೆ ಮಾಡಿದೆ.

ಒನ್​ಪ್ಲಸ್ ಕಂಪನಿಯ ಹೊಸ ಸಾಧನಗಳು
ಒನ್​ಪ್ಲಸ್ ಕಂಪನಿಯ ಹೊಸ ಸಾಧನಗಳು (IANS)
author img

By ETV Bharat Karnataka Team

Published : Jul 17, 2024, 4:12 PM IST

ಮಿಲನ್ : ಜಾಗತಿಕ ತಂತ್ರಜ್ಞಾನ ಬ್ರಾಂಡ್ ಒನ್​ಪ್ಲಸ್​ ಮಂಗಳವಾರ ನಾಲ್ಕು ಹೊಸ ಸಾಧನಗಳನ್ನು ಬಿಡುಗಡೆ ಮಾಡಿದೆ. ಮಂಗಳವಾರ ಇಲ್ಲಿ ನಡೆದ ಸಮಾರಂಭದಲ್ಲಿ ಜಗತ್ತಿನ ಏಕೈಕ ಮೆಟಲ್ ಯುನಿಬಾಡಿ ಸ್ಮಾರ್ಟ್​​ಫೋನ್ ಆಗಿರುವ ನಾರ್ಡ್​ 4 ಸೇರಿದಂತೆ ನಾಲ್ಕು ವಿಭಿನ್ನ ಸಾಧನಗಳನ್ನು ಅನಾವರಣಗೊಳಿಸಿದೆ.

ಒನ್ ಪ್ಲಸ್ ಪ್ಯಾಡ್ 2, ವಾಚ್ 2 ಆರ್ ಮತ್ತು ನಾರ್ಡ್ ಬಡ್ಸ್ 3 ಪ್ರೊ ಅನ್ನು ಸಹ ಕಂಪನಿ ಬಿಡುಗಡೆ ಮಾಡಿದೆ. ಒನ್ ಪ್ಲಸ್ ನಾರ್ಡ್ 4 ಸ್ನ್ಯಾಪ್ ಡ್ರಾಗನ್ 7+ ಜೆನ್ 3 ಪ್ರೊಸೆಸರ್ ಮತ್ತು 256 ಜಿಬಿ ಸ್ಟೋರೇಜ್​​ನಂಥ ಫ್ಲ್ಯಾಗ್ ಶಿಪ್ ಮಟ್ಟದ ಹಾರ್ಡ್​ವೇರ್​ ಅನ್ನು ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಸೆನ್ಸರ್ ಮತ್ತು 5,500 ಎಂಎಎಚ್ ಬ್ಯಾಟರಿ ಒಳಗೊಂಡಿದೆ.

ಅತ್ಯಧಿಕ ಸಾಮರ್ಥ್ಯದ ಬ್ಯಾಟರಿ: ಇದು ಸಂಪೂರ್ಣ ಒನ್​ಪ್ಲಸ್​ ಶ್ರೇಣಿಯಲ್ಲಿನ ಸ್ಮಾರ್ಟ್​ಫೋನ್​ಗಳಲ್ಲಿ ಬಳಸಲಾದ ಅತ್ಯಧಿಕ ಸಾಮರ್ಥ್ಯದ ಬ್ಯಾಟರಿಯಾಗಿದೆ. ಅಬ್ಸಿಡಿಯನ್ ಮಿಡ್ ನೈಟ್, ಮೆರ್ಕ್ಯುರಿಯಲ್ ಸಿಲ್ವರ್ ಮತ್ತು ಒಯಾಸಿಸ್ ಗ್ರೀನ್ ಹೀಗೆ ಮೂರು ಬಣ್ಣಗಳಲ್ಲಿ ಒನ್ ಪ್ಲಸ್ ನಾರ್ಡ್​4 ಲಭ್ಯವಿದೆ.

ಇನ್ನು ಒನ್ ಪ್ಲಸ್ ಪ್ಯಾಡ್ 2 ಬಗ್ಗೆ ನೋಡುವುದಾದರೆ, ಇದು ಸ್ನ್ಯಾಪ್ ಡ್ರಾಗನ್ 8 ಜೆನ್ 3 ಪ್ಲಾಟ್ ಫಾರ್ಮ್, ವಿಶೇಷ 12.1-ಇಂಚಿನ ದೊಡ್ಡ 3 ಕೆ ಡಿಸ್​ಪ್ಲೇ ಮತ್ತು ಆರು ಸ್ಟಿರಿಯೊ ಸ್ಪೀಕರ್​ಗಳನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ. ಪ್ಯಾಡ್ 9,510 ಎಂಎಎಚ್ ಬ್ಯಾಟರಿ ಹೊಂದಿದ್ದು, ಇದು 43 ದಿನಗಳವರೆಗೆ ಸ್ಟ್ಯಾಂಡ್​​ ಬೈ ನೀಡಬಲ್ಲದು.

ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಿ ಟ್ಯಾಬ್ಲೆಟ್​: ಹೀಗಾಗಿ ಬ್ಯಾಟರಿ ಬಾಳಿಕೆಯ ಬಗ್ಗೆ ಚಿಂತಿಸದೆ ಬಳಕೆದಾರರು ಈ ಟ್ಯಾಬ್ಲೆಟ್ ಅನ್ನು ಎಲ್ಲಿಗೆ ಬೇಕಾದರೆ ತೆಗೆದುಕೊಂಡು ಹೋಗಬಹುದು. 67 ವ್ಯಾಟ್ ಸೂಪರ್ ವೂಕ್ ಫ್ಲ್ಯಾಶ್ ಚಾರ್ಜ್ ಬೆಂಬಲಿತ ತಂತ್ರಜ್ಞಾನವನ್ನು ಬಳಸಿಕೊಂಡು ಇದರ ಬ್ಯಾಟರಿಯನ್ನು ಕೇವಲ 81 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಈ ಟ್ಯಾಬ್ಲೆಟ್​ 6.49 ಎಂಎಂ ಸ್ಲಿಮ್ ಮತ್ತು 584 ಗ್ರಾಮ್ ಹಗುರವಾದ ನಿಂಬಸ್ ಗ್ರೇ ಆಲ್-ಮೆಟಲ್ ಯುನಿಬಾಡಿಯನ್ನು ಹೊಂದಿದೆ.

ಗೂಗಲ್​ನ ವೇರ್ ಓಎಸ್ (ವೇರ್ ಓಎಸ್ 4) ಚಾಲಿತ ವಾಚ್ 2 ಆರ್ 100 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಇದು ಫಾರೆಸ್ಟ್ ಗ್ರೀನ್ ಮತ್ತು ಗನ್ ಮೆಟಲ್ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಹಾಗೆಯೇ ಹೊಸ ನಾರ್ಡ್ ಬಡ್ಸ್ 3 ಪ್ರೊ ಬಗ್ಗೆ ನೋಡುವುದಾದರೆ, ಫ್ಲ್ಯಾಗ್ ಶಿಪ್ ಮಟ್ಟದ ಹೈಬ್ರಿಡ್ ಅಡಾಪ್ಟಿವ್ ಎಎನ್​ಸಿಯನ್ನು ಒಳಗೊಂಡಿರುವ ಇದು ಅಲ್ಟ್ರಾ-ವೈಡ್ ಆವರ್ತನ ಶ್ರೇಣಿಯಲ್ಲಿ ನಾಯ್ಸ್​ ಕ್ಯಾನ್ಸಲೇಶನ್​​ನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ.

ಇದನ್ನೂ ಓದಿ : ಫೇಸ್​ಬುಕ್​, ಇನ್​ಸ್ಟಾಗ್ರಾಮ್​ನಲ್ಲಿ ವೆರಿಫೈಡ್​ ಸಬ್​​ಸ್ಕ್ರಿಪ್ಷನ್​ ಪ್ಲಾನ್ ಪರಿಚಯಿಸಿದ ಮೆಟಾ - Meta verified subscription

ETV Bharat Logo

Copyright © 2025 Ushodaya Enterprises Pvt. Ltd., All Rights Reserved.