Sony PlayStation: ಈ ವರ್ಷದ ಸೆಪ್ಟೆಂಬರ್‌ನಲ್ಲಿ PS5 ಪ್ರೊ ಅನ್ನು ಜಾಗತಿಕ ಮಾರುಕಟ್ಟೆಗೆ ಸೋನಿ ಪರಿಚಯಿಸಿತು. ಇದು ಶಕ್ತಿಯುತ ಗ್ರಾಫಿಕ್ಸ್ ಚಿಪ್ ಅನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಆದ್ರೆ ಈ ಪ್ಲೇಸ್ಟೇಷನ್ ಭಾರತದಲ್ಲಿ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಸೋನಿ ಹೇಳಿದೆ.
ಹೌದು, ನಿಯಂತ್ರಕ ನಿರ್ಬಂಧಗಳಿಂದಾಗಿ ಸೋನಿಯ ಪ್ಲೇಸ್ಟೇಷನ್ 5 ಪ್ರೊ ಭಾರತಕ್ಕೆ ಬರುವುದಿಲ್ಲ ಎಂದು ಎಲೆಕ್ಟ್ರಾನಿಕ್ಸ್ ದೈತ್ಯ ಸ್ಪಷ್ಟಪಡಿಸಿದೆ. “6GHz ವೈರ್‌ಲೆಸ್ ಬ್ಯಾಂಡ್ ಬಳಸುವ ಕೆಲವು ದೇಶಗಳಲ್ಲಿ (ಪ್ರಸ್ತುತ ಭಾರತವನ್ನು ಒಳಗೊಂಡಿರುವ) PS5 ಪ್ರೊ ಲಭ್ಯವಿರುವುದಿಲ್ಲ. IEEE 802.11be (Wi-Fi 7) ಅನ್ನು ಇನ್ನೂ ಅನುಮತಿಸಲಾಗಿಲ್ಲ" ಎಂದು ಸೋನಿ ಹೇಳಿದೆ.
PS5 ಪ್ರೊ ಅನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಪರಿಚಯಿಸಲಾಯಿತು. ಸುಧಾರಿತ ರೇ-ಟ್ರೇಸಿಂಗ್ ಮತ್ತು ಎಐ ಅಪ್‌ಸ್ಕೇಲಿಂಗ್ ಸಾಮರ್ಥ್ಯದ ಸಪೋರ್ಟ್ನೊಂದ ಪ್ರಬಲ ಗ್ರಾಫಿಕ್ಸ್ ಚಿಪ್ ಅನ್ನು ಒಳಗೊಂಡಿದೆ. ಆಯ್ದ ಮಾರುಕಟ್ಟೆಗಳಲ್ಲಿ 699.99 ಡಾಲರ್ಗಳಿಗೆ ಮಾರಾಟವಾಗಿದೆ.
ಇದು ನಾವು ನಿರ್ಮಿಸಿದ ಅತ್ಯಂತ ಶಕ್ತಿಶಾಲಿ ಕನ್ಸೋಲ್ ಆಗಿದೆ. ಸಾಮಾನ್ಯ PS5 ಗೆ ಹೋಲಿಸಿದರೆ PS5 Pro ಗ್ರಾಫಿಕ್ಸ್ ರೆಂಡರಿಂಗ್‌ನಲ್ಲಿ ಶೇಕಡಾ 45 ರಷ್ಟು ವೇಗವಾಗಿರುತ್ತದೆ ಮತ್ತು ಕಾರ್ಯಕ್ಷಮತೆಯ ಮೋಡ್‌ನಲ್ಲಿ AAA ಟೈಟಲ್ಸ್ಗಳನ್ನು ನಿರ್ವಹಿಸಲು ಉದ್ದೇಶಿಸಲಾಗಿದೆ ಎಂದು ಸೋನಿಯ ಪ್ರಮುಖ ಪ್ಲೇಸ್ಟೇಷನ್ ಸಿಸ್ಟಮ್ ಆರ್ಕಿಟೆಕ್ಟ್ ಮಾರ್ಕ್ ಸೆರ್ನಿ ಹೇಳಿದರು.
ಕಂಪನಿಯು ಸೀಮಿತ ಆವೃತ್ತಿಯ ಪ್ಲೇಸ್ಟೇಷನ್ 5 ಮತ್ತು ಈಗ ಭಾರತದಲ್ಲಿ ಲಭ್ಯವಿರುವ ಬಿಡಿಭಾಗಗಳನ್ನು ಘೋಷಿಸಿದೆ. ಸೀಮಿತ ಆವೃತ್ತಿಯ PS5 ಗ್ರೇ ಕಲರ್ನಲ್ಲಿ ಬರಲಿದೆ. ಇದರ ಮೂಲ ಪ್ಲೇಸ್ಟೇಷನ್ 1994 ರಲ್ಲಿ ಪ್ರಾರಂಭಿಸಲಾಗಿತ್ತು. ಈ ವರ್ಷದ ಡಿಸೆಂಬರ್‌ನಲ್ಲಿ ತನ್ನ 30 ನೇ ವಾರ್ಷಿಕೋತ್ಸವವನ್ನು ಪೂರ್ಣಗೊಳಿಸುವ ಜನಪ್ರಿಯ ಕನ್ಸೋಲ್ ಸರಣಿಯ ಮುಂದಿನ ಭಾಗವನ್ನು ಬಿಡುಗಡೆ ಮಾಡಲಾಗಿದೆ.
ಈಗಾಗಲೇ PS5 ಹೊಂದಿರುವವರಿಗೆ PS5 30ನೇ ವಾರ್ಷಿಕೋತ್ಸವದ ಸೀಮಿತ ಆವೃತ್ತಿಯು ಹೆಚ್ಚು ಆಪ್ಷನ್ಗಳನ್ನು ಒಳಗೊಂಡಿರುವುದಿಲ್ಲ. ಆದರೂ PS5 ಅನ್ನು ಖರೀದಿಸಲು ಪರಿಗಣಿಸುವ ಯಾರಿಗಾದರೂ ಇದು ಪ್ಲೇಸ್ಟೇಷನ್‌ನ ಹಿಂದಿನ ಮತ್ತು ಪ್ರಸ್ತುತ ಎರಡನ್ನೂ ಪ್ರತಿನಿಧಿಸಲಿದೆ.
ಓದಿ: ಸೂಪರ್ ಫೀಚರ್ಗಳೊಂದಿಗೆ ಮಾರುಕಟ್ಟೆಗೆ ಕಾಲಿಡಲಿದೆ ವಿವೋ ಎಕ್ಸ್200 ಸಿರೀಸ್