ನವದೆಹಲಿ: ಸುರಕ್ಷತೆ, ಅತ್ಯುತ್ತಮ ಗುಣಮಟ್ಟದ ಜೊತೆಗೆ ಹೊಸ ನಾವೀನ್ಯತೆಯಿಂದಾಗಿ ಐಫೋನ್ ಗ್ರಾಹಕರನ್ನು ಸೆಳೆಯುತ್ತಲೇ ಇದೆ. ಇದರಿಂದಾಗಿ ಇದಕ್ಕೆ ಬೇಡಿಕೆ ಹೆಚ್ಚಿದ್ದು, ಮಾರಾಟದಿಂದ ಆದಾಯದ ಸಂಗ್ರಹ ಕೂಡ ಹೆಚ್ಚುತ್ತಲೇ ಇದೆ. ಆದರೆ, ಐಫೋನ್ ಇತಿಹಾಸದಲ್ಲೇ ದಾಖಲೆ ಮಟ್ಟದ ಆದಾಯ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬಂದಿದೆ ಎಂದು ವರದಿ ತಿಳಿಸಿದೆ
ವರ್ಷ ಆರಂಭದ ಮೊದಲ ತ್ರೈಮಾಸಿಕದಲ್ಲಿ ಕುಸಿತ ಕಂಡರೂ ಟೆಕ್ ದೈತ್ಯ ಕಂಪನಿಯಾಗಿರುವ ಆಪಲ್ ಇದುವರೆಗೂ ಐಫೋನ್ ಮಾರಾಟದಿಂದ 1.95 ಟ್ರಿಲಿಯನ್ ಗಳಿಸಿದೆ ಎಂದು ವರದಿ ತಿಳಿಸಿದೆ. ಐಫೋನ್ ಆರಂಭವಾದಾಗಿನಿಂದಲೂ ಗಳಿಸಿದ ದಾಖಲೆ ಮಟ್ಟದ ಆದಾಯ ಇದಾಗಿದೆ.
2024ರ ಮೊದಲ ತ್ರೈಮಾಸಿಕದಲ್ಲಿ ಆಪಲ್ 50.1 ಮಿಲಿಯನ್ ಸ್ಮಾರ್ಟ್ಫೋನ್ ಅನ್ನು ರವಾನಿಸಿದೆ. ಕಳೆದ ತ್ರೈಮಾಸಿಕ ಅವಧಿಗೆ ಹೋಲಿಕೆ ಮಾಡಿದಾಗ ಐದು ಮಿಲಿಯನ್ ಕಡಿಮೆಯಾಗಿದೆ. ಆದಾಗ್ಯೂ ಐಫೋನ್ ಮಾರಾಟದ ಆದಾಯವೂ ಶೇ 10ರಷ್ಟು ಕುಸಿದಿದ್ದು, 45.9 ಟ್ರಿಲಿಯನ್ಗೆ ತಲುಪಿದೆ ಎಂದು ಸ್ಟಾಕ್ಲಿಟಿಕ್ಸ್.ಕಾಮ್ ದತ್ತಾಂಶದೊಂದಿಗೆ ವರದಿ ಮಾಡಿದೆ.
ಆಪಲ್ ತನ್ನ ಮೊದಲ ಐಫೋನ್ ಮಾರಾಟ ಮಾಡಿದ ಐದು ವರ್ಷಗಳ ನಂತರ ಐಫೋನ್ ಮಾರಾಟದಿಂದ 78.7 ಡಾಲರ್ ಬಿಲಿಯನ್ ಆದಾಯ ಗಳಿಸಿದೆ. ಇದಾದ ಎರಡು ವರ್ಷದ ಬಳಿಕ ಅಂದರೆ, 2014ರಲ್ಲಿ ಈ ಅಂಕಿ - ಅಂಶ 101.9 ಬಿಲಿಯನ್ ಡಾಲರ್ಗೆ ಜಿಗಿತಗೊಂಡಿತು ಎಂದು ಅಧಿಕೃತ ಕಂಪನಿಯ ಡೇಟಾ ತಿಳಿಸಿದೆ.
ಕಳೆದ ಎರಡು ವರ್ಷದಲ್ಲಿ ಐಫೋನ್ ಮಾರಾಟದಿಂದ ಆಪಲ್ 405 ಟ್ರಿಲಿಯನ್ ಡಾಲರ್ ಆದಾಯ ಗಳಿಸಿದೆ. ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಈ ಆದಾಯದ ಅಂಕಿ ಅಂಶ ಸ್ವಲ್ಪ ಮಟ್ಟಿಗೆ ಕುಸಿದಿದೆ. ಆದರೂ ಐಫೋನ್ ಮಾರಾಟದಲ್ಲಿ ತನ್ನ ಪ್ರಾಬಲ್ಯ ಕಾಯ್ದುಕೊಂಡಿದೆ.
ಅಂಕಿ - ಅಂಶಗಳ ಪ್ರಕಾರ 2024ರ ಮೊದಲ ತ್ರೈಮಾಸಿಕದ ಎಚ್1ನಲ್ಲಿ ಆಪಲ್ 115.6 ಬಿಲಿಯನ್ ಡಾಲರ್ ಮೀರಿದ್ದು, ಇದು ಐಫೋನ್ ಜೀವಿತಾವಧಿಯ ಅದಾಯದಲ್ಲಿಯೇ ಹೆಚ್ಚು ಅಂದರೆ 1.95 ಟ್ರಿಲಿಯನ್ ಡಾಲರ್ ಸಂಗ್ರಹಿಸಿದೆ.
2007 ರಿಂದ 2.65 ಶತಕೋಟಿಗೂ ಹೆಚ್ಚು ಐಫೋನ್‌ಗಳನ್ನು ಮಾರಾಟ ಮಾಡಿರುವುದಾಗಿ ಎಂದು ವರದಿ ಉಲ್ಲೇಖಿಸಿದೆ. 2014 ರಲ್ಲಿ, ಆಪಲ್ ತನ್ನ 192.7 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದರೆ, ಹತ್ತು ವರ್ಷಗಳ ಬಳಿಕ ಇದರ ಮಾರಾಟ 231.8 ಮಿಲಿಯನ್‌ಗೆ ಏರಿಕೆ ಕಂಡಿದೆ. (ಐಎಎನ್ಎಸ್)
ಇದನ್ನೂ ಓದಿ: ನೀವು ಐಫೋನ್ ಪ್ರಿಯರಾ?, ಅವರಿಗಿದೆ ಗುಡ್ ನ್ಯೂಸ್: IPhone 16 Pro, Pro Max ವೈಶಿಷ್ಟ್ಯಗಳ್ಯಾವುವು- ಲಾಂಚ್ ಯಾವಾಗ?