ಬೀದರ್: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಇಂದು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕಿದ್ದ ಕಾರಣ ಅವರು ಓಡುತ್ತಾ ಬಂದು ನಾಮಪತ್ರ ಸಲ್ಲಿಸಿದ ಪ್ರಸಂಗ ಜರುಗಿತು.
ಇಂದು ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಭಗವಂತ ಖೂಬಾ ಪಾಲ್ಗೊಂಡಿದ್ದರು. ಈ ವೇಳೆ, ಸಮಯ ಮೀರಿದ್ದನ್ನು ಅರಿತ ಅವರು ಜಿಲ್ಲಾಧಿಕಾರಿಗಳ ಕಚೇರಿಗೆ ಅವಸರದಲ್ಲಿ ಓಡಿಕೊಂಡು ಬಂದರು. ಇವರ ಹಿಂದೆ ಶಾಸಕರಾದ ಶರಣು ಸಲಗರ, ಅವಿನಾಶ ಜಾಧವ್ ಹಾಗೂ ಸಿದ್ದು ಪಾಟೀಲ್ ಕೂಡ ಓಡುತ್ತಾ ಬಂದರು. ಖೂಬಾ ಮುಂದೆ ಹೋಗುತ್ತಲೇ ಶಾಸಕರನ್ನು ಬೇಗ ಬರುವಂತೆ ಕೈ ಮಾಡಿ ಕರೆದ ಸನ್ನಿವೇಶವೂ ಕಂಡುಬಂತು.
ಬೀದರ್ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯಲಿದೆ. ಹಾಲಿ ಸಂಸದರಾದ ಭಗವಂತ ಖೂಬಾ ವಿರುದ್ಧ ಸಚಿವ ಈಶ್ವರ ಖಂಡ್ರೆ ಅವರ ಪುತ್ರ ಸಾಗರ ಖಂಡ್ರೆ ಸ್ಪರ್ಧಿಸಿದ್ದಾರೆ. 2014, 2019ರ ಚುನಾವಣೆಯಲ್ಲಿ ಸತತವಾಗಿ ಎರಡು ಸಲ ಗೆದ್ದಿರುವ ಖೂಬಾ ಈ ಬಾರಿ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ: ಧಾರವಾಡ: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ದಿಂಗಾಲೇಶ್ವರ ಸ್ವಾಮೀಜಿ