ETV Bharat / state

ಸಿಎಂ ಹಾಗೂ ನನ್ನ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ಮಾಡಲಾಗುತ್ತಿದೆ: ಡಿಸಿಎಂ ಡಿಕೆಶಿ ಆರೋಪ - Shatru Bhairavi Yaga - SHATRU BHAIRAVI YAGA

ಸಿಎಂ ಮತ್ತು ನನ್ನ ಮೇಲೆ ಕೇರಳದಲ್ಲಿ ಯಾಗ ನಡೆಸುತ್ತಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ.

ಡಿಸಿಎಂ ಡಿಕೆಶಿ
ಡಿಸಿಎಂ ಡಿಕೆಶಿ (ETV Bharat)
author img

By ETV Bharat Karnataka Team

Published : May 30, 2024, 5:33 PM IST

ಡಿಸಿಎಂ ಡಿಕೆಶಿ (ETV Bharat)

ಬೆಂಗಳೂರು: ರಾಜ್ಯದ ರಾಜಕೀಯ ಮುಖಂಡರೊಬ್ಬರು ನನ್ನ ಹಾಗೂ ಸಿಎಂ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ದೆಹಲಿಯಿಂದ ವಾಪಸ್​ ಆದ ಬಳಿಕ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಕೇರಳದಲ್ಲಿ ನನ್ನ ಹಾಗೂ ಸಿಎಂ ವಿರುದ್ಧ ದೊಡ್ಡ ಪೂಜೆ ನಡೆಯುತ್ತಿದೆ. ಶತ್ರು ಭೈರವಿ ಯಾಗ ಮಾಡುವ ಮೂಲಕ ಪಂಚ ಬಲಿ ಕೊಟ್ಟಿದ್ದಾರೆ. ಶತ್ರು ಸಂಹಾರಕ್ಕಾಗಿ ಮಾಡುತ್ತಿರುವ ಶತ್ರು ಭೈರವಿ ಯಾಗವಾಗಿದೆ. ಯಾಗದಲ್ಲಿ ಮೇಕೆ, ಹಂದಿ, ಕುರಿ, ಬಲಿ ಕೊಟ್ಟಿದ್ದಾರೆ. ಇದನ್ನು ಯಾರು ಮಾಡಿಸಿದ್ದಾರೆ, ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ. ಇದರಲ್ಲಿ ಪಾಲ್ಗೊಂಡವರು ನಮಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯ ಕೇರಳದಲ್ಲಿ ಈ ಯಾಗ ನಡೆಯುತ್ತಿದೆ. ಮೇಕೆ 21, ಎಮ್ಮೆ 3, ಕುರಿ 21 ಬಲಿ ಕೊಡುತ್ತಿದ್ದಾರೆ. ಅಘೋರಿಗಳ ಮೂಲಕ ಯಾಗ ಮಾಡುತ್ತಿದ್ದಾರೆ. ಅವರ ಪ್ರಯತ್ನ ನಡೀತಾ ಇದೆ. ಯಾರು ಮಾಡಿಸುತ್ತಿದ್ದಾರೆ ಅಂತ ಗೊತ್ತಿದೆ. ನಮ್ಮ ಮೇಲೆ ಅವರು ಏನೇ ಪ್ರಯೋಗ ಮಾಡಿದರೂ, ನಮ್ಮ ನಂಬಿದ ಶಕ್ತಿ ನಮ್ಮನ್ನು ಕಾಪಾಡುತ್ತದೆ. ದೃಷ್ಟಿ ಆಗುತ್ತದೆ ಎಂದು ನನ್ನ ಕೈಗೆ ಖಡ್ಗ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಆಸು - ಪಾಸು ಚೆಕ್ ಮಾಡಿ. ನಿಮಗೇ ಗೊತ್ತಾಗುತ್ತೆ. ಮಾರಣ, ಮೋಹನ, ಸ್ಥಂಬನ. ರಾಜ ಕಂಟಕ ಯಾಗ. ಇದಕ್ಕೆ ಪ್ರತಿಯಾಗಿ ನಾನು ಯಾವುದೇ ಪೂಜೆ ಮಾಡಲ್ಲ. ನಾನು ಮನೆ ಬಿಡುವಾಗ ಪ್ರತಿ ದಿನ ಒಂದು ನಿಮಿಷ ದೇವರಿಗೆ ಕೈ ಮುಗಿಯುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ: ಮಹಾಲಕ್ಷ್ಮೀ ಯೋಜನೆ: ಖಾತೆ ತೆರೆಯಲು ಮುಗಿಬಿದ್ದ ಮಹಿಳೆಯರು, ಹೈರಾಣಾಗುತ್ತಿರುವ POST OFFICE ಸಿಬ್ಬಂದಿ - Mahalakshmi Scheme

ETV Bharat Logo

Copyright © 2025 Ushodaya Enterprises Pvt. Ltd., All Rights Reserved.