ETV Bharat / state

ಮಣಿಪುರ ಮೂಲದ ಯುವತಿಗೆ ಲೈಂಗಿಕ ಕಿರುಕುಳ: ನಾಲ್ವರು ಅಪ್ರಾಪ್ತರ ಬಂಧನ - ಯುವತಿಗೆ ಲೈಂಗಿಕ ಕಿರುಕುಳ

ಮಣಿಪುರ ಮೂಲದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ನಾಲ್ವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ.

minors arrested  sexually harassed  Bengaluru  ಯುವತಿಗೆ ಲೈಂಗಿಕ ಕಿರುಕುಳ  ನಾಲ್ವರು ಅಪ್ರಾಪ್ತರ ಬಂಧನ
ನಾಲ್ವರು ಅಪ್ರಾಪ್ತರ ಬಂಧನ
author img

By ETV Bharat Karnataka Team

Published : Feb 24, 2024, 1:32 PM IST

ಬೆಂಗಳೂರು : ಮಣಿಪುರ ಮೂಲದ ಯುವತಿಗೆ ಅಪ್ರಾಪ್ತರ ಗುಂಪೊಂದು ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಆಕೆಯ ಸ್ನೇಹಿತನಿಗೂ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಫೆಬ್ರವರಿ 18 ರಂದು ರಾತ್ರಿ ಆಡುಗೋಡಿ ಠಾಣಾ ವ್ಯಾಪ್ತಿಯ ಪ್ರಾದೇಶಿಕ ಪಾಸ್‌ಪೋರ್ಟ್ ಸೇವಾ ಕೇಂದ್ರದ ಬಳಿ ಘಟನೆ ನಡೆದಿದ್ದು, ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

25 ವರ್ಷದ ದೂರುದಾರ ಯುವತಿ ಹಾಗೂ ಆಕೆಯ ಸ್ನೇಹಿತ ರಾತ್ರಿ 1 ಗಂಟೆ ಸುಮಾರಿಗೆ ಕಸ ಎಸೆಯಲು ತೆರಳಿದ್ದರು. ಈ ವೇಳೆ ಎದುರಾಗಿದ್ದ ಆರೋಪಿಗಳು ಯುವತಿಯ ಖಾಸಗಿ ಭಾಗ ಸ್ಪರ್ಶಿಸಿ ಕಿರುಕುಳ ನೀಡಿದ್ದಾರೆ. ಯುವತಿ ಪ್ರತಿರೋಧ ವ್ಯಕ್ತಪಡಿಸಿದಾಗ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಮರದ ಕಟ್ಟಿಗೆಯಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಆಕೆಯ ನೆರವಿಗೆ ಬಂದ ಸ್ನೇಹಿತನಿಗೂ ಥಳಿಸಿ ಸ್ಥಳದಿಂದ ಕಾಲ್ಕಿತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯ ಬಳಿಕ ನೊಂದ ಯುವತಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಆಡುಗೋಡಿ ಠಾಣಾ ಪೊಲೀಸರು ಆರೋಪಿಗಳನ್ನ ಬಂಧಿಸಿರುವುದಾಗಿ ತಿಳಿಸಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಓದಿ: ಒಂದು ಗುಂಟೆ ಜಾಗ, ಕಾರಿಗಾಗಿ ಗಲಾಟೆ: ತಮ್ಮನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.