ETV Bharat / state

ಬೆಂಗಳೂರಲ್ಲಿ ಫೆ.25ರಂದು ಸಂವಿಧಾನ ಜಾಗೃತಿ ಸಮಾವೇಶ: ಸಂಚಾರಿ ಮಾರ್ಗಗಳಲ್ಲಿ ಬದಲಾವಣೆ - ಕೃಷ್ಣ ವಿಹಾರ್ ಅರಮನೆ

ಭಾರತ ಸಂವಿಧಾನ ಅಂಗೀಕಾರಗೊಂಡು 75ನೇ ವರ್ಷ ಪೂರ್ಣಗಳಿಸಿರುವ ಹಿನ್ನೆಲೆ ಫೆ.25ರಂದು ಬೆಂಗಳೂರಿನ ಕೃಷ್ಣ ವಿಹಾರ್ ಅರಮನೆ ಮೈದಾನದಲ್ಲಿ ಸಂವಿಧಾನ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ. ಪರಿಣಾಮ ಸಂಚಾರಿ ಪೊಲೀಸರು ಕೆಲ ಮಾರ್ಗಗಳಲ್ಲಿ ಸಂಚಾರ ಮಾರ್ಪಾಡು ಮಾಡಿದ್ದಾರೆ.

Transport Police
ಸಾರಿಗೆ ಪೊಲೀಸರು
author img

By ETV Bharat Karnataka Team

Published : Feb 23, 2024, 4:39 PM IST

ಬೆಂಗಳೂರು: ಭಾರತದ ಸಂವಿಧಾನ ಅಂಗೀಕಾರಗೊಂಡು 75ನೇ ವರ್ಷ ಪೂರ್ಣಗಳಿಸಿರುವ ಹಿನ್ನೆಲೆ ಕರ್ನಾಟಕ ಸರ್ಕಾರವು ಸಂವಿಧಾನ ಜಾಗೃತಿ ಸಮಾವೇಶವನ್ನು ಫೆ.25ರಂದು ಬೆಂಗಳೂರಿನಲ್ಲಿ ಆಯೋಜಿಸಿದೆ. ಸಮಾವೇಶ ಹಮ್ಮಿಕೊಂಡಿರುವ ಕೃಷ್ಣ ವಿಹಾರ್ ಅರಮನೆ ಮೈದಾನದ ಸುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಡೆಗೆ ವಾಹನಗಳ ಸಂಚಾರದ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು ಹಾಗೂ ಇತರೆ ಗಣ್ಯರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುತ್ತಿರುವುದರಿಂದ ಬೆಂಗಳೂರು ಸಂಚಾರಿ ಪೊಲೀಸರು ಕೆಲ ಮಾರ್ಗಗಳಲ್ಲಿ ಸಂಚಾರ ಮಾರ್ಪಾಡುಗಳನ್ನು ಮಾಡಿದ್ದಾರೆ.

ಬಸ್​​ಗಳಲ್ಲಿ ಬರುವವರು ಪ್ರವೇಶಿಸುವ ಮಾರ್ಗ, ಪಾರ್ಕಿಂಗ್ ವಿವರ: ನಗರದ ಒಳಭಾಗದಿಂದ ಕಾರ್ಯಕ್ರಮಕ್ಕೆ ಬರುವ ಬಸ್​ಗಳಲ್ಲಿ ವಿಂಡ್ಸರ್‌ ಮ್ಯಾನರ್ ಜಂಕ್ಷನ್- ಬಿ ಡಿ ಎ ಆಪ್‌ ಕ್ಯಾಂಪ್-ರಮಣಮಹರ್ಷಿ ರಸ್ತೆಯ ಪಿ.ಜಿ.ಹಳ್ಳಿ ಬಸ್ ನಿಲ್ದಾಣ-ಕಾವೇರಿ ಜಂಕ್ಷನ್ -ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆ-ಮೇಕ್ರಿ ಸರ್ಕಲ್ ಬಲತಿರುವು ಪಡೆದು ಜಯಮಹಲ್ ರಸ್ತೆಯಲ್ಲಿ ಸಾಗಿ ಟಿವಿ ಟವರ್ ಬಳಿ ಇರುವ ಪ್ರವೇಶದ್ವಾರದ ಮೂಲಕ ಪ್ರವೇಶಿಸಿ ಸರ್ಕಸ್ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದು.

ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು ಮೇಕ್ರಿ ಸರ್ಕಲ್‌ನಲ್ಲಿ ಎಡ ತಿರುವು ಪಡೆದುಕೊಂಡು ಜಯಮಹಲ್ ರಸ್ತೆಯಲ್ಲಿ ಸಾಗಿ ಟಿವಿ ಟವರ್ ಬಳಿ ಇರುವ ಸರ್ಕಸ್ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದು.

ಯಶವಂತಪುರ ಕಡೆಯಿಂದ ಬರುವ ವಾಹನಗಳು ಸರ್.ಸಿ.ವಿ.ರಾಮನ್ ರಸ್ತೆಯ ಬಿ.ಹೆಚ್.ಇ.ಎಲ್ ಸರ್ಕಲ್-ಸದಾಶಿವನಗರ ಪಿ.ಎಸ್ ಜಂಕ್ಷನ್-ಮೇಕ್ರಿ ಸರ್ಕಲ್ ಜಯಮಹಲ್ ರಸ್ತೆಯಲ್ಲಿ ಸಾಗಿ ಟಿವಿ ಟವರ್ ಬಳಿ ಇರುವ ಸರ್ಕಸ್ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪುವುದು.

ಕಂಟೋನ್‌ಮೆಂಟ್ (ದಂಡು) ರೈಲ್ವೆ ಸ್ಟೇಷನ್ ಕಡೆಯಿಂದ ಬರುವ ವಾಹನಗಳು ಜಯಮಹಲ್ ರಸ್ತೆಯಲ್ಲಿ ಸಾಗಿ ಟಿವಿ ಟವರ್ ಬಳಿ ಇರುವ ಸರ್ಕಸ್ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳಕ್ಕೆ ತಲುಪುವುದು. ನಾಲ್ಕುಚಕ್ರ ಮತ್ತು ದ್ವಿಚಕ್ರ ವಾಹನಗಳಲ್ಲಿ ಕಾರ್ಯಕ್ರಮಕ್ಕೆ ಬರುವವರು ಅರಮನೆ ಮೈದಾನ ಪ್ರವೇಶಿಸುವ ಮಾರ್ಗ: (ಗೇಟ್ ನಂ. 2 ಮತ್ತು ನಂ. 4)

ಭಾರೀ ಸರಕು ವಾಹನಗಳ ಮಾರ್ಗ ಬದಲಾವಣೆ ಸ್ಥಳಗಳು: ಸರ್ ಸಿ ವಿ ರಾಮನ್ ರಸ್ತೆ ಬಿಹೆಚ್​​ಇಎಲ್ ಸರ್ಕಲ್ ನಲ್ಲಿ ಮೇಕ್ರಿಸರ್ಕಲ್ ಕಡೆಗೆ ಯಾವುದೇ ಭಾರೀ ಸರಕು ಸಾಗಣೆ ವಾಹನಗಳನ್ನು ಸಂಚರಿಸದಂತೆ ತುಮಕೂರು ರಸ್ತೆ ಸಿ.ಎಂ.ಟಿ.ಐ ಜಂಕ್ಷನ್ನಲ್ಲಿ ಓ.ಆರ್.ಆರ್ ರಸ್ತೆಯಲ್ಲಿ ಮಾರ್ಗ ಬದಲಾವಣೆ ಮಾಡುವುದು.

ಚಾಲುಕ್ಯ ಸರ್ಕಲ್‌ನಲ್ಲಿ ಬಳ್ಳಾರಿ ರಸ್ತೆಯ ಕಡೆಗೆ ಯಾವುದೇ ಭಾರೀ ಸರಕು ಸಾಗಣೆ ವಾಹನಗಳು ಸಂಚರಿಸದಂತೆ ಮಾರ್ಗ ಬದಲಾವಣೆ ಮಾಡುವುದು. ಮೈಸೂರು ಬ್ಯಾಂಕ್ ಜಂಕ್ಷನ್‌ನಲ್ಲಿ ಚಾಲುಕ್ಯ ಸರ್ಕಲ್ ಕಡೆಗೆ ಯಾವುದೇ ಭಾರೀ ಸರಕು ಸಾಗಣೆ ವಾಹನಗಳನ್ನು ಸಂಚರಿಸದಂತೆ ಮಾರ್ಗ ಬದಲಾವಣೆ ಮಾಡುವುದು. ಹೆಬ್ಬಾಳ ಕಡೆಯಿಂದ ನಗರದ ಒಳಭಾಗಕ್ಕೆ ಯಾವುದೇ ಭಾರೀ ಸರಕು ಸಾಗಣೆ ವಾಹನಗಳನ್ನು ಸಂಚರಿಸದಂತೆ ಹೆಬ್ಬಾಳ ಸರ್ಕಲ್‌ನಲ್ಲಿ ಮಾರ್ಗ ಬದಲಾವಣೆ ಮಾಡುವುದು.

ಓಲ್ಡ್ ಉದಯ ಟಿ ವಿ ಜಂಕ್ಷನ್‌ನಲ್ಲಿ ಜಯಮಹಲ್ ರಸ್ತೆಯ ಕಡೆಗೆ ಯಾವುದೇ ಸರಕು ಸಾಗಣೆ ವಾಹನಗಳನ್ನು ಸಂಚರಿಸದಂತೆ ಕಂಟೋನ್ಮೆಂಟ್ ಮಾರ್ಗ ಬದಲಾವಣೆ ಮಾಡುವುದು. ಕಾರ್ಯಕ್ರಮಕ್ಕೆ ಆಗಮಿಸುವವರು ಹಾಗೂ ವಾಹನ ಸವಾರರು ಸುಗಮ ಸಂಚಾರದ ದೃಷ್ಟಿಯಿಂದ ಪೊಲೀಸ್ ಇಲಾಖೆಯು ಯೋಚಿಸಿರುವ ಪಾರ್ಕಿಂಗ್ ವ್ಯವಸ್ಥೆ ಹಾಗೂ ಸಂಚಾರ ಮಾರ್ಪಾಡುಗಳಿಗೆ ಸಹಕರಿಸುವಂತೆ ಬೆಂಗಳೂರು ನಗರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂಓದಿ:ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ: ಸದನದಲ್ಲಿ ಪ್ರತಿಪಕ್ಷಗಳ ಧರಣಿ, ಸೋಮವಾರಕ್ಕೆ ಕಲಾಪ ಮುಂದೂಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.