ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ತನ್ನ ತಾಯಿಯಿಂದ ಬೇರ್ಪಟ್ಟ ಹೆಣ್ಣು ಕಪ್ಪು ಚಿರತೆ ಮರಿಯನ್ನು ಶಿವಮೊಗ್ಗ ಜಿಲ್ಲೆಯ ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಕೊಂಡೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.
ಕುಮಟಾ ತಾಲೂಕಿನ ಕತಗಾಲ ಅರಣ್ಯ ವಲಯದಲ್ಲಿ ಎರಡು ವರ್ಷದ ಕಪ್ಪು ಚಿರತೆ ಮರಿ ತನ್ನ ತಾಯಿಯಿಂದ ಬೇರ್ಪಟ್ಟು ಸೇತುವೆಯ ಬಳಿ ಅಸಹಾಯಕ ಸ್ಥಿತಿಯಲ್ಲಿ ಬಿದ್ದಿತ್ತು. ಚಿರತೆಯ ಸ್ಥಿತಿ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ತ್ಯಾವರೆಕೊಪ್ಪ ಹುಲಿ ಅಭಯಾರಣ್ಯಕ್ಕೆ ಮಾಹಿತಿ ನೀಡಿದ್ದರು.
ಡಿಸಿಎಫ್ ಯೋಗೀಶ್ ಮತ್ತು ಅವರ ತಂಡವು ಕತಗಾಲ ಅರಣ್ಯ ವಲಯಕ್ಕೆ ಹೋಗಿ ಕಪ್ಪು ಚಿರತೆ ಮರಿಗಳನ್ನು ರಕ್ಷಿಸಿತ್ತು. ಸದ್ಯ ತ್ಯಾವರೆಕೊಪ್ಪ ಹುಲಿ ಅಭಯಾರಣ್ಯದಲ್ಲಿ ಈ ಚಿರತೆ ಮರಿ ಬಿಡಲಾಗಿದೆ. ಈಗಾಗಲೇ ಮಿಂಚು ಎಂಬ ಕಪ್ಪು ಚಿರತೆ ಇದ್ದು, ಇದೀಗ ಮತ್ತೊಂದು ಕರಿ ಚಿರತೆ ಜೊತೆ ಸೇರಿಸಿದಂತಾಗಿದೆ.
ದೇಶದಲ್ಲಿ ಕಪ್ಪು ಚಿರತೆ ಅಪರೂಪವಾಗಿದ್ದು, ಅವನತಿಯ ಅಂಚಿನಲ್ಲಿದೆ. ರಾಜ್ಯದಲ್ಲೇ ಉತ್ತರಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಕಪ್ಪು ಚಿರತೆಗಳಿವೆ.
ಉಡುಪಿಯಲ್ಲಿ ಜಿಂಕೆ ಮರಿ ಕಳೇಬರ ಪತ್ತೆ:
ಉಡುಪಿ: ಕೋಟೇಶ್ವರ ಸಮೀಪದ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಣ್ಸೆಮಕ್ಕಿಯಲ್ಲಿ ಜಿಂಕೆ ಮರಿಯ ಕಳೇಬರ ಪತ್ತೆಯಾಗಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಜಿಂಕೆ ಮರಿಯ ಕಳೇಬರ ಪತ್ತೆಯಾಗಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಶ್ವಾನಗಳು ದಾಳಿ ಮಾಡಿರುವುದರಿಂದ ಜಿಂಕೆ ಮೃತಪಟ್ಟಿದೆ ಎಂದು ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿವಾಹ ವಾರ್ಷಿಕೋತ್ಸವದಂದೇ ಗಂಡು ಮಗುವಿಗೆ ಜನ್ಮ ನೀಡಿದ ಹರಿಪ್ರಿಯಾ : ಮರಿ ಸಿಂಹನ ಫೋಟೋ ಹಂಚಿಕೊಂಡ ವಸಿಷ್ಠ ಸಿಂಹ
ಇದನ್ನೂ ಓದಿ: ಯಾದಗಿರಿ: ಹಳ್ಳದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ- ವಿಡಿಯೋ