ETV Bharat / state

ಬೆಳಗಾವಿ: ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ ಪಾಪಿ ಮಗ - SON KILLS MOTHER - SON KILLS MOTHER

ಬೆಳಗಾವಿಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಸಾರಾಯಿ ಕುಡಿದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಮಗ ಕೊಲೆ ಮಾಡಿರುವ ಘಟನೆ ನಡೆದಿದೆ.

Mahadevi Gurappa Tolagi
ಮಹಾದೇವಿ ಗುರಪ್ಪ ತೋಲಗಿ (ETV Bharat)
author img

By ETV Bharat Karnataka Team

Published : Aug 4, 2024, 4:52 PM IST

ಬೆಳಗಾವಿ : ಸಾರಾಯಿ ಕುಡಿದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಪಾಪಿ ಮಗ ಕೊಲೆ ಮಾಡಿರುವ ಘಟನೆ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಮಹಾದೇವಿ ಗುರಪ್ಪ ತೋಲಗಿ (70) ಕೊಲೆಯಾದ ದುರ್ದೈವಿ. ಈರಣ್ಣ ಗುರಪ್ಪ ತೋಲಗಿ (34)
ಕೊಲೆ ಆರೋಪಿ ಎಂದು ತಿಳಿದುಬಂದಿದೆ.

ತನ್ನ ತಾಯಿ ಹೆಸರಿನಲ್ಲಿದ್ದ ಒಂದು ಎಕರೆ ಜಮೀನು ವಿಚಾರವಾಗಿ ಪ್ರತಿದಿನ ಈರಣ್ಣ ಸಾರಾಯಿ ಕುಡಿದು ಬಂದು ತಾಯಿಯ ಜೊತೆ ಜಗಳ ಮಾಡುತ್ತಿದ್ದ. ಇದೇ ವಿಚಾರವಾಗಿ ಶನಿವಾರ ತಡರಾತ್ರಿ ಮಧ್ಯದ ಅಮಲಿನಲ್ಲಿದ್ದ ಈರಣ್ಣ ತೋಲಗಿ ತಾಯಿಯ ಜೊತೆ ಗಲಾಟೆ ಮಾಡಿದ್ದಾನೆ. ಮನೆಯಲ್ಲಿನ ನೀರು ಕಾಯಿಸುವ ಒಲೆಯಲ್ಲಿದ್ದ ಅರ್ಧ ಸುಟ್ಟಿದ್ದ ಕಟ್ಟಿಗೆ ತೆಗೆದುಕೊಂಡು ತಾಯಿಯ ತಲೆಗೆ ಬಲವಾಗಿ ಹೊಡೆದು, ಗೋಡೆಗೆ ತಲೆ ಗುದ್ದಿಸಿದ್ದರಿಂದ ಗಂಭೀರ ಗಾಯಗೊಂಡಿದ್ದ ಮಹಾದೇವಿ ಸ್ಥಳದಲ್ಲೇ ಅಸುನೀಗಿದ್ದಾರೆ‌.

ಘಟನಾ ಸ್ಥಳಕ್ಕೆ ಬೈಲಹೊಂಗಲ ಡಿವೈಎಸ್ಪಿ ರವಿ ನಾಯಕ್, ದೊಡವಾಡ ಪೊಲೀಸ್ ಠಾಣೆ ಪಿಎಸ್ಐಗಳಾದ ನಂದೀಶ್ ಹಾಗೂ ಪ್ರವೀಣ್ ಕೋಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಯನ್ನು ಬಂಧಿಸಿರುವ ದೊಡವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಬೆಂಗಳೂರು: ಆಸ್ತಿ ಕಲಹಕ್ಕೆ ವ್ಯಕ್ತಿ ಕೊಲೆ ಪ್ರಕರಣ; ಸಂಬಂಧಿಕರಿಬ್ಬರ ಬಂಧನ - Man Killed Over Property Dispute

ETV Bharat Logo

Copyright © 2025 Ushodaya Enterprises Pvt. Ltd., All Rights Reserved.