ETV Bharat / state

ಬೆಳಗಾವಿ ಜಿಲ್ಲೆಯಲ್ಲಿ 25 ಸೇತುವೆಗಳು ಮುಳುಗಡೆ: ಎಸ್ಪಿ ಡಾ.ಭೀಮಾಶಂಕರ ಗುಳೇದ ಮಾಹಿತಿ - 25 bridges submerged - 25 BRIDGES SUBMERGED

ಬೆಳಗಾವಿ ಜಿಲ್ಲೆಯಲ್ಲಿ 25 ಸೇತುವೆಗಳು ಮುಳುಗಡೆ ಆಗಿವೆ ಎಂದು ಎಸ್ಪಿ ಡಾ.ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆ.

SP DR BHIMASHANKAR GULED  BRIDGES SUBMERGED  BELAGAVI
ಎಸ್ಪಿ ಡಾ.ಭೀಮಾಶಂಕರ ಗುಳೇದ ಮಾಹಿತಿ (ETV Bharat)
author img

By ETV Bharat Karnataka Team

Published : Jul 24, 2024, 6:46 PM IST

Updated : Jul 24, 2024, 8:03 PM IST

ಎಸ್ಪಿ ಡಾ.ಭೀಮಾಶಂಕರ ಗುಳೇದ ಹೇಳಿಕೆ (ETV Bharat)

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ‌ 83 ಸೇತುವೆಗಳ ಪೈಕಿ 25 ಸೇತುವೆಗಳು ಮುಳುಗಡೆಯಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿಸಿದರು. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲೋಂಡಾ - ಸಾತ್ನಳ್ಳಿ ಮತ್ತು ಮಂಚೊಳ್ಳಿ ಎರಡು ಸೇತುವೆಗಳನ್ನು ಬಿಟ್ಟು‌ ಇನ್ನುಳಿದ 23 ಸೇತುವೆಯಲ್ಲಿ ಸಂಚರಿಸಲು‌ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿದ್ದೇವೆ. ಮಳೆ ಕಡಿಮೆಯಾದರೆ ಯಥಾ ಪ್ರಕಾರ ಮತ್ತೆ ಈ ಸೇತುವೆಗಳ ಮೇಲೆ ಓಡಾಡಲು ಸಾಧ್ಯವಾಗುತ್ತದೆ. ಇನ್ನು ತಹಶೀಲ್ದಾರ್​ ಮತ್ತು ಪೊಲೀಸರು ಅನೇಕ ಗ್ರಾಮಗಳಿಗೆ ತೆರಳಿ ಮೂಲ ಸೌಕರ್ಯಗಳನ್ನು ಕಲ್ಪಿಸಿದ್ದಾರೆ ಎಂದರು.

ಅಥಣಿ, ಚಿಕ್ಕೋಡಿ, ಕಾಗವಾಡ, ಸದಲಗಾ, ನಿಪ್ಪಾಣಿಯಲ್ಲಿ ಸೇತುವೆ ಮುಳಗಡೆಯಾಗಿರುವ ಪ್ರದೇಶಗಳಿಗೆ ನಿನ್ನೆ ಭೇಟಿ ನೀಡಿದ್ದೇವೆ. ನದಿ ತೀರದ ಅನೇಕ ಗ್ರಾಮಗಳಿಗೆ ಭೇಟಿ ನೀಡಿ‌ ಪರಿಶೀಲನೆ ನಡೆಸಲಾಗಿದ್ದು, NDRF, ಅಗ್ನಿಶಾಮಕ‌ದಳ‌ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ. ಇನ್ನು ಹುನ್ನರಗಿ ಗ್ರಾಮದ ಬಳಿ ಮೊಸಳೆ ಕಾಣಿಸಿಕೊಂಡಿದೆ. ಹಾಗಾಗಿ, ಕೃಷ್ಣಾ ನದಿ ಹಿನ್ನೀರು, ವೇದಗಂಗಾ, ದೂಧಗಂಗಾ ನದಿಗಳಲ್ಲಿ ಯಾರೂ ನೀರಿಗೆ ಇಳಿಯಬಾರದು. ನೀರಿನ ಪ್ರಮಾಣ ಕಡಿಮೆ ಇದ್ದರೂ ಸೆಳೆತ ಹೆಚ್ಚಿದೆ. ಹಾಗಾಗಿ, ಎಲ್ಲರೂ ಎಚ್ಚರಿಕೆ ವಹಿಸುವಂತೆ ಡಾ. ಭೀಮಾಶಂಕರ ಗುಳೇದ ಕೇಳಿಕೊಂಡರು.

ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಕಾಮಗಾರಿ ನಡೆಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳ ಜೊತೆಗೆ ಮಾತಾಡಿ ಎಲ್ಲಾ ಹಂಪ್ಸ್ ಮತ್ತು ಪಾಟೂಲ್​ಗಳನ್ನು ಫಿಲ್ ಮಾಡುವಂತೆ ತಿಳಿಸಿದ್ದೇವೆ. ಇನ್ನು ತವನಿಧಿ ಘಾಟ್​ನಲ್ಲಿ ನಡೆಯುತ್ತಿದ್ದ ಬ್ಲಾಸ್ಟಿಂಗ್ ಪ್ರಕ್ರಿಯೆ ತಕ್ಷಣವೇ ಸ್ಥಗಿತಗೊಳಿಸಿದ್ದೇವೆ. ಗುಡ್ಡ ಕುಸಿತ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದೇವೆ ಎಂದು ಡಾ. ಭೀಮಾಶಂಕರ ಗುಳೇದ ಹೇಳಿದರು. ಅದೇ ರೀತಿ ಎಲ್ಲ ನದಿ ತೀರ ಪ್ರದೇಶಗಳಲ್ಲಿ ನಮ್ಮ ಪೊಲೀಸರು ಲೈಫ್ ಜಾಕೆಟ್ ಸೇರಿ ಮತ್ತಿತರ ಸುರಕ್ಷತಾ ಸಾಮಗ್ರಿಗಳೊಂದಿಗೆ ಕರ್ತವ್ಯದಲ್ಲಿದ್ದಾರೆ. ಚಿಕ್ಕೋಡಿ, ಅಥಣಿ ಭಾಗದಲ್ಲಿ ನಮ್ಮ ಪೊಲೀಸರಿಗೆ ಎನ್​ಡಿಆರ್​ಎಫ್ ತಂಡದಿಂದ ಅಗತ್ಯ ತರಬೇತಿ ಸಹ ನೀಡಲಾಗುತ್ತದೆ ಎಂದು ವಿವರಿಸಿದರು‌.

ದತ್ತವಾಡ-ಮಲ್ಲಿಕವಾಡ ಸೇತುವೆ ಮುಳುಗಡೆ ಆಗಿದ್ದರಿಂದ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಸದ್ಯ ನೇರ ಸಂಪರ್ಕ ಇರೋದು ರಾಷ್ಟ್ರೀಯ ಹೆದ್ದಾರಿ. ಇದನ್ನು ಬಿಟ್ಟರೆ ವಿಜಯಪುರ ಜಿಲ್ಲೆ ಮಾರ್ಗವಾಗಿ ಹೋಗಬೇಕಾಗಿದೆ ಎಂದು ಡಾ. ಭೀಮಾಶಂಕರ ಗುಳೇದ ತಿಳಿಸಿದರು‌.

ಜಿಪಂ ಸಿಇಓ ರಾಹುಲ್ ಶಿಂಧೆ ಮಾತನಾಡಿ, ಪ್ರವಾಹದಿಂದ ಬಾಧಿತಗೊಳ್ಳುವ ಗ್ರಾಮಗಳಲ್ಲಿ ಗರ್ಭಿಣಿ‌ ಮಹಿಳೆಯರು ಹಾಗೂ ಹಿರಿಯ ನಾಗರಿಕರ ಬಗ್ಗೆ ಮಾಹಿತಿ ಹೊಂದಿರಬೇಕು. ಅಂಗನವಾಡಿ, ಶಾಲೆಗಳಲ್ಲಿ ಆಹಾರ ಪದಾರ್ಥಗಳ ದಾಸ್ತಾನು ಇರುವುದನ್ನು‌ ಖಚಿತಪಡಿಸಿಕೊಳ್ಳಬೇಕು. ಅದೇ ರೀತಿ ಮಳೆ ನೋಡಿಕೊಂಡು ಅಂಗನವಾಡಿ, ಶಾಲೆಗಳಿಗೆ ರಜೆ ನೀಡಲಾಗುತ್ತಿದೆ. ಅಲ್ಲದೇ ಕೆಲವೆಡೆ ಸೋರುವ ಅಂಗನವಾಡಿ ಕೇಂದ್ರಗಳನ್ನು ಸ್ಥಳೀಯವಾಗಿ ರಜೆ ನೀಡಲು ಸೂಚಿಸಲಾಗಿದೆ. ಅದೇ ರೀತಿ ಜಾನುವಾರುಗಳ ತುರ್ತು ಚಿಕಿತ್ಸೆಗೆ 30 ಆಂಬ್ಯುಲೆನ್ಸ್​​ ಲಭ್ಯಯಿವೆ. ಅದೇ ರೀತಿ ಕುದಿಸಿ ಆರಿಸಿದ ನೀರನ್ನು ಕುಡಿಯುವಂತೆ ಕೇಳಿಕೊಂಡರು.

ಓದಿ: ಶಿರೂರು ಗುಡ್ಡ ಕುಸಿತ ಕಾರ್ಯಾಚರಣೆಗೆ ಬಂತು ಅತ್ಯಾಧುನಿಕ ಬೂಮ್ ಯಂತ್ರ - Shiruru Hill Collapse

Last Updated : Jul 24, 2024, 8:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.