ETV Bharat / state

ಅಮ್ಮ ಕೇರಳ, ಅಪ್ಪ ತಮಿಳುನಾಡು: ಕರ್ನಾಟಕದಿಂದ ಪ್ಯಾರಿಸ್ ಒಲಿಂಪಿಕ್ಸ್​ಗೆ ಮಗಳು ಆಯ್ಕೆ - Dhinidhi Desingu - DHINIDHI DESINGU

ಕರ್ನಾಟಕದ ಈಜುಪಟುವಾದ 14 ವರ್ಷ ಹರೆಯದ ಧಿನಿಧಿ ದೇಸಿಂಗು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಮಹಿಳೆಯರ 200 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಈಜುಪಟು ಧಿನಿಧಿ ದೇಸಿಂಗು
ಈಜುಪಟು ಧಿನಿಧಿ ದೇಸಿಂಗು (Youtube/@narendramodi)
author img

By ETV Bharat Karnataka Team

Published : Jul 5, 2024, 6:07 PM IST

Updated : Jul 5, 2024, 6:40 PM IST

ಕೋಯಿಕ್ಕೋಡ್/ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ಗೆ ಕೇರಳ ಮೂಲದ ಈಜುಪಟು ಧಿನಿಧಿ ದೇಸಿಂಗು ತೆರಳುತ್ತಿದ್ದಾರೆ. ಅವರು ದೆಹಲಿಯಲ್ಲಿಂದು ನಡೆದ ಪ್ಯಾರಿಸ್​ಗೆ ತೆರಳುವ ಕ್ರೀಡಾಪಟುಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಜೊತೆಗೆ ಪ್ರಧಾನಿಯೊಂದಿಗೆ ಸಂವಾದ ಕೂಡಾ ನಡೆಸಿದರು.

ಈ ವೇಳೆ ಮಾತನಾಡಿದ ಈಜುಪಟು ಧಿನಿಧಿ ದೇಸಿಂಗು, "ನಾನು ಧಿನಿಧಿ ದೇಸಿಂಗು, ನನಗೆ ಹದಿನಾಲ್ಕು ವರ್ಷ, ನಾನು ಮೂಲತಃ ಕೇರಳದವನಾದರೂ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದೇನೆ. ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದೇನೆ. ಇದು ನನ್ನ ಕ್ರೀಡಾ ವೃತ್ತಿಜೀವನದ ಆರಂಭವಷ್ಟೇ. ಪ್ರತಿಭಾವಂತ ಆಟಗಾರರನ್ನು ಹೊಂದಿರುವ ಭಾರತ ತಂಡದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಖಂಡಿತ, ನಾವು ದೇಶದ ಕೀರ್ತಿಯನ್ನು ಹೆಚ್ಚಿಸುತ್ತೇವೆ ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತದ ಅತ್ಯಂತ ಕಿರಿಯ ಆಟಗಾರ್ತಿ: ಪ್ರಧಾನಿ ನರೇಂದ್ರ ಮೋದಿ ಅವರು ಧಿನಿಧಿ ದೇಸಿಂಗು ಯಶಸ್ಸಿಗೆ ಶುಭ ಹಾರೈಸಿದರು. ಗುಂಪಿನಲ್ಲಿದ್ದ ಪಿ.ಆರ್.ಶ್ರೀಜೇಶ್, ದೀಪಿಕಾ ಕುಮಾರಿ ಸೇರಿದಂತೆ ಹಿರಿಯ ಅಥ್ಲೀಟ್‌ಗಳು ಚಪ್ಪಾಳೆ ತಟ್ಟಿ ತಮ್ಮ ಗುಂಪಿನ ಯುವ ತಾರೆಯನ್ನು ಪ್ರೋತ್ಸಾಹಿಸಿದರು. ಫೋಟೋ ಸೆಷನ್ ಸಮಯದಲ್ಲಿ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ ಅವರು ಧಿನಿಧಿ ದೇಸಿಂಗು ಅವರನ್ನು ಕರೆದು ಮುಂದಿನ ಸಾಲಿನಲ್ಲಿ ತಮ್ಮ ಬಳಿ ನಿಲ್ಲಿಸಿಕೊಂಡರು. ಧಿನಿಧಿ ದೇಸಿಂಗು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾಗವಹಿಸುತ್ತಿರುವ ಭಾರತದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಧಿನಿಧಿ ಹಿನ್ನೆಲೆ ಏನು?: ಧಿನಿಧಿ ಕೋಯಿಕ್ಕೋಡ್​ನ ಪುತ್ಯಂಗಡಿ ಮೂಲದ ಜೆಸಿತಾ ವಿಜಯನ್ ಮತ್ತು ತಮಿಳುನಾಡು ಮೂಲದ ದೇಸಿಂಗು ಅವರ ಪುತ್ರಿ. ಒಂಬತ್ತನೇ ತರಗತಿ ಓದುತ್ತಿರುವ ಧಿನಿಧಿ, ಬೆಂಗಳೂರಿನ ತಮ್ಮ ಫ್ಲಾಟ್‌ ಲೈಫ್‌ನಲ್ಲಿ ಬೋರಿಂಗ್​ನಿಂದ ಪಾರಾಗಲು ಈಜುಕೊಳದಲ್ಲಿ ಈಜಲು ಪ್ರಾರಂಭಿಸಿದ್ದರು. ಈಗ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಇದಕ್ಕಾಗಿ ಸಾಕಷ್ಟು ತ್ಯಾಗ ಮಾಡಬೇಕಾಯಿತು ಎನ್ನುತ್ತಾರೆ ಧಿನಿಧಿ.

ಭಾರತೀಯ ಆಟಗಾರರು ಎ ಮತ್ತು ಬಿ ಅರ್ಹತಾ ಸುತ್ತಿನಲ್ಲೇ ಹೊರ ಬೀಳುತ್ತಾರೆ. ಆದರೆ ಧಿನಿಧಿ ಅಜೇಯರಾಗಿ ಉಳಿದಿದ್ದಾರೆ. ಧಿನಿಧಿ ರಾಷ್ಟ್ರೀಯ ಕ್ರೀಡಾಕೂಟ ಮತ್ತು ಹಿರಿಯ ರಾಷ್ಟ್ರೀಯ ಚಾಂಪಿಯನ್ ಶಿಪ್​ಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಈ ಸೀಸನ್​ನಲ್ಲಿ ಈಜು ಫೆಡರೇಶನ್​ನ ಅತ್ಯುತ್ತಮ ಮಹಿಳಾ ಈಜುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸದ್ಯ ಧಿನಿಧಿ ಮಹಿಳೆಯರ 200 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಭಾಗವಹಿಸುತ್ತಿದ್ದಾರೆ. ಅವರು 2028 ಮತ್ತು 2032ರ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಗುರಿ ಹೊಂದಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಭವಗಳಿಸಲು ಮತ್ತು ವಿಶ್ವ ದರ್ಜೆಯ ಕ್ರೀಡಾಪಟುಗಳಿಂದ ಕಲಿಯಲು ಎದುರು ನೋಡುತ್ತಿದ್ದಾರೆ.

ಏಳು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಈಜುಗಾರ್ತಿ ಕೇಟಿ ಲೆಡೆಕಿ ಅವರನ್ನು ಭೇಟಿಯಾಗಲು ಧಿನಿಧಿ ಉತ್ಸುಕರಾಗಿದ್ದಾರೆ. ಅವಳು ಕಳೆದ ವರ್ಷ ಲೆಡೆಕಿಗಾಗಿ ಗ್ರೀಟಿಂಗ್ ಕಾರ್ಡ್ ಅನ್ನು ಸಿದ್ಧಪಡಿಸಿದ್ದರು ಮತ್ತು ಅದನ್ನು ವೈಯಕ್ತಿಕ ಅವರಿಗೆ ಕೊಡಲು ಕಾಯುತ್ತಿದ್ದಾರೆ.

ಧಿನಿಧಿಗೆ ಶುಭ ಕೋರಿದ ಡಿಸಿಎಂ: ಮತ್ತೊಂದೆಡೆ, ಜುಲೈ 26 ರಿಂದ ಆರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್'ಗೆ ಆಯ್ಕೆಯಾಗಿರುವ ಬೆಂಗಳೂರು ಮೂಲದ ಈಜುಪಟುಗಳಾದ ಶ್ರೀಹರಿ ನಟರಾಜ್ ಹಾಗೂ ಧಿನಿಧಿ ದೇಸಿಂಗು ಅವರಿಗೆ ತುಂಬು ಹೃದಯದ ಅಭಿನಂದನೆಗಳು. 14 ವರ್ಷದ ಧಿನಿಧಿ ಅವರು ಮಹಿಳೆಯರ ವಿಭಾಗದಲ್ಲಿ, 23ರ ವರ್ಷದ ಶ್ರೀಹರಿ ಅವರು ಪುರುಷರ ವಿಭಾಗದಲ್ಲಿ ಆಯ್ಕೆಯಾಗುವ ಮೂಲಕ ಇಬ್ಬರು ಕನ್ನಡ ನೆಲದ ಪ್ರತಿಭೆಗಳು ಭಾರತವನ್ನು ಪ್ರತಿನಿಸುತ್ತಿದ್ದಾರೆ. ಇಬ್ಬರೂ ಕೂಡ ಗೆಲುವು ಸಾಧಿಸಿ ದೇಶಕ್ಕೆ ಕೀರ್ತಿ ತರಲಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್​ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ಪ್ಯಾರಿಸ್​ ಒಲಿಂಪಿಕ್ಸ್​ ಬಳಿಕ ಚೂರ್ಮ ಸವಿಯೋಣ: ಪ್ರಧಾನಿ ಜೊತೆ ನೀರಜ್ ಚೋಪ್ರಾ ಮಾತು - Modi With Olympics Contingent

Last Updated : Jul 5, 2024, 6:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.