IRCTC South India Temple Tour: ದಕ್ಷಿಣ ಭಾರತದಲ್ಲಿ ವೀಕ್ಷಿಸಲು ಹಲವು ಪುರಾಣ ಪ್ರಸಿದ್ಧ ಭವ್ಯ ದೇವಾಲಯಗಳಿವೆ. ಅದರಲ್ಲೂ ಪ್ರಮುಖವಾಗಿ, ಕೇರಳ ಹಾಗೂ ತಮಿಳುನಾಡಿನಲ್ಲಿ ಕೆಲವು ವಿಶೇಷ ದೇವಾಲಯಗಳನ್ನು ನೋಡಬಹುದು. ಈ ದೇವಾಲಯಗಳನ್ನು ವೀಕ್ಷಿಸ ಬಯಸುವ ಭಕ್ತರಿಗಾಗಿ, ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್(IRCTC) ಗುಡ್ ನ್ಯೂಸ್ ನೀಡಿದೆ. ಕೇರಳ, ತಮಿಳುನಾಡಿನ ಪ್ರಸಿದ್ಧ ತೀರ್ಥಯಾತ್ರೆಗಳನ್ನು ನೋಡಲು ಹೊಸ ಪ್ಯಾಕೇಜ್ ತಂದಿದೆ.
'ಸೌತ್ ಇಂಡಿಯಾ ಟೆಂಪಲ್ ರನ್' ಎಂಬುದು ಈ ಪ್ಯಾಕೇಜ್‌ನ ಹೆಸರು. ಪ್ರವಾಸದ ಒಟ್ಟು ಅವಧಿ 6 ರಾತ್ರಿ ಮತ್ತು 7 ಹಗಲು. ಕನ್ಯಾಕುಮಾರಿ, ಮಧುರೈ, ರಾಮೇಶ್ವರಂ, ತಿರುವನಂತಪುರಂ ಸೇರಿದಂತೆ ವಿವಿಧ ತಾಣಗಳನ್ನು ವೀಕ್ಷಿಸಬಹುದು. ಹೈದರಾಬಾದ್‌ನಿಂದ ವಿಮಾನದ ಮೂಲಕ ಪ್ರವಾಸ ಆರಂಭವಾಗುತ್ತದೆ.
ಪ್ರಯಾಣದ ವಿವರ:
1ನೇ ದಿನ: ಬೆಳಗ್ಗೆ 7 ಗಂಟೆಗೆ ಹೈದರಾಬಾದ್‌ನಿಂದ ವಿಮಾನದ ಮೂಲಕ ಪ್ರಯಾಣ ಪ್ರಾರಂಭ. 2 ಗಂಟೆಗಳ ಪ್ರಯಾಣದ ನಂತರ ತಿರುವನಂತಪುರಂ ವಿಮಾನ ನಿಲ್ದಾಣ ತಲುಪುವುದು. ಇಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ, ಮೊದಲೇ ಬುಕ್ ಮಾಡಿದ ಹೋಟೆಲ್‌ನಲ್ಲಿ ಚೆಕ್-ಇನ್ ಆಗುವುದು. ನಂತರ ಉಪಹಾರ ಹಾಗೂ ನೇಪಿಯರ್ ಮ್ಯೂಸಿಯಂಗೆ ಭೇಟಿ. ಮಧ್ಯಾಹ್ನ ಪೂವಾರ್ ದ್ವೀಪ ವೀಕ್ಷಣೆ. ಸಂಜೆ ಅಜಿಮಲ ಶಿವ ದೇವಾಲಯಕ್ಕೆ ಭೇಟಿ. ರಾತ್ರಿ ತಿರುವನಂತಪುರದಲ್ಲಿ ಉಳಿದುಕೊಳ್ಳುವುದು.
2ನೇ ದಿನ: ಬೆಳಗ್ಗೆ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ತೆರಳುವುದು. ನಂತರ ಉಪಹಾರವಾಗಿ ಕನ್ಯಾಕುಮಾರಿಗೆ ಪಯಣ. ಅಲ್ಲಿ ತಲುಪಿದ ನಂತರ, ಹೋಟೆಲ್ ಚೆಕ್-ಇನ್. ಸಂಜೆ ಸೂರ್ಯಾಸ್ತ ವೀಕ್ಷಣೆ. ಆ ರಾತ್ರಿ ಕನ್ಯಾಕುಮಾರಿಯಲ್ಲಿ ಉಳಿದುಕೊಳ್ಳುವುದು.
3ನೇ ದಿನ: ಉಪಹಾರದ ನಂತರ ನೀರಿನ ಮಧ್ಯದಲ್ಲಿ ಅದ್ಭುತವಾಗಿ ನಿರ್ಮಿಸಲಾದ ರಾಕ್ ಸ್ಮಾರಕಕ್ಕೆ ಭೇಟಿ. ಅದಾದ ನಂತರ ರಾಮೇಶ್ವರಂಗೆ ತೆರಳುವುದು. ರಾತ್ರಿ ಊಟ ಮಾಡಿ ರಾಮೇಶ್ವರಂನಲ್ಲಿ ಉಳಿದುಕೊಳ್ಳುವುದು.
4ನೇ ದಿನ: ಬೆಳಗಿನ ಉಪಹಾರದ ನಂತರ ರಾಮೇಶ್ವರ ದೇವಸ್ಥಾನಕ್ಕೆ ಭೇಟಿ. ನಂತರ ಧನುಷ್ಕೋಡಿಯಲ್ಲಿ ಅನೇಕ ಪ್ರಸಿದ್ಧ ದೇವಾಲಯಗಳ ವೀಕ್ಷಣೆ. (ಆದ್ರೆ, ರಾಮೇಶ್ವರಂನಲ್ಲಿ ಬಸ್ಸುಗಳನ್ನು ಅನುಮತಿಸಲಾಗುವುದಿಲ್ಲ. ಇತರ ದೇವಾಲಯಗಳಿಗೆ ಭೇಟಿ ನೀಡಲು IRCTC ಯಾವುದೇ ವ್ಯವಸ್ಥೆಯನ್ನು ಮಾಡುವುದಿಲ್ಲ. ಇತರ ಸಾರಿಗೆ ವ್ಯವಸ್ಥೆಗಳನ್ನು ಪ್ರಯಾಣಿಕರು ಮಾಡಬೇಕು ಹಾಗೂ ಯಾತ್ರಾರ್ಥಿಗಳಿಗೆ ತಗಲುವ ವೆಚ್ಚವನ್ನು ಯಾತ್ರಾರ್ಥಿಗಳೇ ಭರಿಸಬೇಕಾಗುತ್ತದೆ.) ರಾತ್ರಿ ರಾಮೇಶ್ವರಂದಲ್ಲಿ ಉಳಿದುಕೊಳ್ಳುವುದು.
5ನೇ ದಿನ: ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್ ಔಟ್. ಅಬ್ದುಲ್ ಕಲಾಂ ಸ್ಮಾರಕಕ್ಕೆ ಭೇಟಿ. ಬಳಿಕ ತಂಜಾವೂರಿಗೆ ತೆರಳುವುದು. ಅಲ್ಲಿ ಬೃಹದೀಶ್ವರ ದೇವಸ್ಥಾನದ ದರ್ಶನದ ನಂತರ, ತಿರುಚಿರಾಪಳ್ಳಿಗೆ ತೆರಳುವುದು. ಇಲ್ಲಿ ಅಂದು ರಾತ್ರಿ ಊಟ ಮತ್ತು ವಸತಿ.
6ನೇ ದಿನ: ಉಪಹಾರದ ನಂತರ ಆರನೇ ದಿನ ಶ್ರೀರಂಗಂ ದೇವಸ್ಥಾನಕ್ಕೆ ಭೇಟಿ. ನಂತರ ಮಧುರೈಗೆ ಹೊರಡುವುದು. ಸಂಜೆ ಅಲ್ಲಿಗೆ ತಲುಪಿ ಹೋಟೆಲ್‌ನಲ್ಲಿ ಚೆಕ್ ಇನ್. ರಾತ್ರಿ ಮಧುರೈನಲ್ಲಿ ಉಳಿದುಕೊಳ್ಳುವುದು.
7ನೇ ದಿನ: ಉಪಹಾರದ ಬಳಿಕ ಹೋಟೆಲ್‌ನಿಂದ ಚೆಕ್ ಔಟ್. ಮೀನಾಕ್ಷಿ ದೇವಿ ದೇವಸ್ಥಾನಕ್ಕೆ ಭೇಟಿ. ಅಲ್ಲಿಂದ ಮಧುರೈ ವಿಮಾನ ನಿಲ್ದಾಣ ತಲುಪುವುದು. ಮಧ್ಯಾಹ್ನ 3 ಗಂಟೆಗೆ ವಿಮಾನ (6E 6782) ಮೂಲಕ ಹೈದರಾಬಾದ್‌ಗೆ ವಾಪಸ್. 5 ಗಂಟೆಗೆ ಹೈದರಾಬಾದ್ ತಲುಪುವ ಮೂಲಕ ಪ್ರವಾಸ ಕೊನೆಗೊಳ್ಳುತ್ತದೆ.
ಪ್ಯಾಕೇಜ್‌ನ ದರ:
- ಸಿಂಗಲ್ ಹಂಚಿಕೆ (ವ್ಯಕ್ತಿಯೊಬ್ಬರಿಗೆ) ₹47,500
- ಡಬಲ್ ಶೇರಿಂಗ್ ₹35,750
- ಟ್ರಿಪಲ್ ಆಕ್ಯುಪೆನ್ಸಿ ₹34,000.
- 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಹಾಸಿಗೆ ಸಹಿತ ₹30,500 ಮತ್ತು ಹಾಸಿಗೆ ರಹಿತ ₹25,700.
- 2 ರಿಂದ 4 ವರ್ಷದೊಳಗಿನ ಮಕ್ಕಳಿಗೆ ಹಾಸಿಗೆ ರಹಿತ ₹20,000.
ಪ್ಯಾಕೇಜ್‌ನಲ್ಲಿರುವ ಸೌಲಭ್ಯಗಳು:
- ಹೈದರಾಬಾದ್- ತಿರುವನಂತಪುರಂ/ ಮಧುರೈ- ಹೈದರಾಬಾದ್ ವಿಮಾನ ಟಿಕೆಟ್‌ಗಳು.
- ಹೋಟೆಲ್ ವಸತಿ
- ಆರು ದಿನ ಉಪಹಾರ, ನಾಲ್ಕು ದಿನ ರಾತ್ರಿ ಊಟ.
- ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಪ್ಯಾಕೇಜ್ ಅವಲಂಬಿಸಿ ಬಸ್ ಸೌಲಭ್ಯ
- ಪ್ರಯಾಣ ವಿಮೆ ಒದಗಿಸಲಾಗುವುದು.
- IRCTC ಟೂರ್ ಎಸ್ಕಾರ್ಟ್ ಲಭ್ಯವಿದೆ.
- ಪ್ರಸ್ತುತ ಈ ಪ್ಯಾಕೇಜ್ 2025ರ ಫೆಬ್ರವರಿ 1 ರಂದು ಲಭ್ಯವಿದೆ.
- ಪ್ಯಾಕೇಜ್‌ನ ಇತರೆ ವಿವರಗಳು, ಟೂರ್ ಬುಕ್ಕಿಂಗ್ಗಾಗಿ ಈ ಲಿಂಕ್ ಕ್ಲಿಕ್ ಮಾಡಿ.