Healthy Summer Drinks: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ದೇಹವನ್ನು ತಂಪಾಗಿಸಲು ಅನೇಕ ಜನರು ಕಾರ್ಬೊನೇಟೆಡ್ ಕೂಲ್ ಡ್ರಿಂಕ್ಸ್ ಕುಡಿಯುತ್ತಾರೆ. ಆದರೆ, ಈ ತಂಪು ಪಾನೀಯಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ಹೀಗಾಗಿ ನಾವು ನಿಮಗಾಗಿ ಆರೋಗ್ಯಕರ ಪಾನೀಯವನ್ನು ತಂದಿದ್ದೇವೆ.
ಈ ತಂಪು ಪಾನೀಯ ಸೇವಿಸುವುದರಿಂದ ದೇಹದ ಉಷ್ಣಾಂಶದಲ್ಲಿ ಸಮತೋಲನ ಸಾಧಿಸುವ ಜೊತೆಗೆ ತ್ವರಿತ ಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಆರೋಗ್ಯಕರ ಪಾನೀಯವನ್ನು ಮನೆಯಲ್ಲಿಯೇ ಸುಲಭವಾಗಿ ಸಿದ್ಧಪಡಿಸಬಹುದು. ಅದುವೇ.. ಅಜ್ಜಿಯ ಕಾಲದ ಸಾಂಪ್ರದಾಯಿಕ ಪಾನೀಯ ರಾಗಿ ಅಂಬಲಿ. ಇದೀಗ ರಾಗಿ ಅಂಬಲಿ ತಯಾರಿಕೆಗೆ ಬೇಕಾಗುವಂತಹ ಪದಾರ್ಥಗಳೇನು? ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.

ರಾಗಿ ಅಂಬಲಿ ಸಿದ್ಧಪಡಿಸಲು ಬೇಕಾಗುವ ಸಾಮಗ್ರಿಗಳೇನು?:
- ರಾಗಿ ಹಿಟ್ಟು - 2 ಟೀಸ್ಪೂನ್
- ಬಾಂಬೆ ರವಾ - 2 ಟೀಸ್ಪೂನ್
- ಉಪ್ಪು - ರುಚಿಗೆ ಬೇಕಾಗುವಷ್ಟು
- ಮೊಸರು - 1/4 ರಿಂದ 1/2 ಕಪ್
ರಾಗಿ ಅಂಬಲಿ ತಯಾರಿಸುವ ವಿಧಾನ ಹೇಗೆ?:
- ಮೊದಲು ರಾಗಿ ಹಿಟ್ಟನ್ನು ಸಣ್ಣ ಮಿಕ್ಸಿಂಗ್ ಬೌಲ್ನಲ್ಲಿ ತೆಗೆದುಕೊಳ್ಳಿ. ಬಳಿಕ ಅರ್ಧ ಕಪ್ ನೀರನ್ನು ಅದರೊಳಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ. ನಾವು ಅದನ್ನು ತಯಾರಿಸುವ ಮೊದಲು ಅದನ್ನು ಹಿಂದಿನ ದಿನ ಸಂಜೆ ಅಥವಾ ರಾತ್ರಿಯಲ್ಲಿ ಹಿಟ್ಟನ್ನು ಹುದುಗಿಸಬೇಕು.
- ಅಂದರೆ, ಈ ಹಿಟ್ಟನ್ನು ಕನಿಷ್ಠ 8 ರಿಂದ 10 ಗಂಟೆಗಳ ಕಾಲ ಹುದುಗಿಸಿದರೆ ಉತ್ತಮ ಎಂದು ತಜ್ಞರು ತಿಳಿಸುತ್ತಾರೆ. ಹಿಟ್ಟನ್ನು ಹುದುಗಿಸಿದಷ್ಟೂ ಅಂಬಲಿ ತುಂಬಾ ರುಚಿಯಾಗಿರುತ್ತದೆ ಎಂಬುದನ್ನು ನೆನಪಿನಲ್ಲಿ ಇಡಬೇಕು. ಅಲ್ಲದೆ, ಈ ನೆನೆಸುವಿಕೆಯಿಂದಲೂ ಹೆಚ್ಚಿನ ಪೋಷಕಾಂಶಗಳನ್ನು ಲಭಿಸುತ್ತದೆ.
- 10 ಗಂಟೆಗಳ ಕಾಲ ನೆನೆಸಿದ ನಂತರ ಮುಚ್ಚಳವನ್ನು ತೆಗೆದು ಹಿಟ್ಟನ್ನು ನೋಡಿದರೆ ಮೇಲೆ ನೀರು ತೇಲುವುದು ಹಾಗೂ ಕೆಳಗೆ ಹಿಟ್ಟು ಸಂಗ್ರಹವಾಗುವುದು ಕಂಡುಬರುತ್ತದೆ.

- ಇದಾನಂತರ ಇನ್ನೊಂದು ಪಾತ್ರೆಯಲ್ಲಿ ನೀರನ್ನು ಸೋಸಿಕೊಳ್ಳಿ. ರಾಗಿ ಹಿಟ್ಟು ನೆನೆಸಲು ಬಳಸಿದ ನೀರನ್ನು ಬಿಸಾಡದೆ ಮರುದಿನವೂ ಅಂಬಲಿ ಬೇಯಿಸಲು ಇದೇ ನೀರನ್ನು ಬಳಸಬೇಕು. ಇದು ಹೆಚ್ಚು ರುಚಿ ಹಾಗೂ ಪೋಷಕಾಂಶಗಳಿಂದ ಕೂಡಿರುತ್ತದೆ.
- ಈಗ ಒಲೆಯ ಮೇಲೆ ಪಾತ್ರೆ ಇಟ್ಟು 2 ರಿಂದ 3 ಕಪ್ ನೀರು (ಸುಮಾರು 650 ಮಿಲಿ) ಸುರಿಯಿರಿ ಹಾಗೂ ಒಲೆಯನ್ನು ಕಡಿಮೆ ಉರಿಯಲ್ಲಿ ಇರಿಸಿ ಸರಿಯಾಗಿ ಕುದಿಸಬೇಕಾಗುತ್ತದೆ. ನೀರು ಸ್ವಲ್ಪ ಬಿಸಿಯಾದ ನಂತರ ಅದರಲ್ಲಿ ನೆನೆಸಿದ ರಾಗಿ ಹಿಟ್ಟು ಹಾಗೂ ಮೊದಲು ಸೋಸಿದ ನೀರನ್ನು ಮತ್ತೆ ಮಿಶ್ರಣ ಮಾಡಬೇಕು.
- ನೀರಿಗೆ ಹಿಟ್ಟನ್ನು ಸೇರಿಸಿದ ನಂತರ, ಒಂದು ಚಮಚದಿಂದ ಚೆನ್ನಾಗಿ ಮಿಶ್ರಣ ಮಾಡಿ. ಇಲ್ಲದಿದ್ದರೆ, ಹಿಟ್ಟು ಗಂಟಾಗುತ್ತದೆ ಎಂದು ನೀವು ನೆನಪಿಟ್ಟುಕೊಳ್ಳಬೇಕು.
- ಬಳಿಕ ಬಾಂಬೆ ರವಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ 4 ರಿಂದ 5 ನಿಮಿಷ ಬೇಯಿಸಬೇಕಾಗುತ್ತದೆ.
- ಬಳಿಕ ಬೇಕಾದಷ್ಟು ಉಪ್ಪು ಹಾಕಿ ಮತ್ತೆ 5 ನಿಮಿಷ ಬೇಯಿಸಿದರೆ ಸಾಕು ರಾಗಿ ಅಂಬಲಿ ಅಥವಾ ಗಂಜಿ ರೆಡಿಯಾಗುತ್ತದೆ. ಬಳಿಕ ಒಲೆ ಆಫ್ ಮಾಡಿ ಮತ್ತು ಸ್ವಲ್ಪ ತಣ್ಣಗಾಗಲು ಬಿಡಿ.

- ಇದಕ್ಕೂ ಮೊದಲು ಒಂದು ಚಿಕ್ಕ ಬಟ್ಟಲಿನಲ್ಲಿ ಮೊಸರನ್ನು ತೆಗೆದುಕೊಂಡು ಅರ್ಧ ಕಪ್ ನೀರು ಸೇರಿಸಿ ದಪ್ಪ ಮಜ್ಜಿಗೆ ರೆಡಿ ಮಾಡಿ.
- ಈಗ ಸ್ವಲ್ಪ ತಣ್ಣಗಾದ ರಾಗಿ ಅಂಬಲಿಗೆ ಮಜ್ಜಿಗೆ ಸೇರಿಸಿ ಮತ್ತು ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ಈ ಹಂತದಲ್ಲಿ ಉಪ್ಪು ಸಾಕಾಗದಿದ್ದರೆ ಮತ್ತಷ್ಟು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ.
- ಬಳಿಕ ಅದನ್ನು ಗ್ಲಾಸ್ನಲ್ಲಿ ತೆಗೆದುಕೊಂಡು ಸ್ವಲ್ಪ ತೆಳ್ಳಗೆ ಕತ್ತರಿಸಿದ ಈರುಳ್ಳಿ, ಹಸಿರು ಮೆಣಸು ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಇದೀಗ ಅಷ್ಟೇ ಟೇಸ್ಟಿ ಹಾಗೂ ಆರೋಗ್ಯಕರವಾದ ರಾಗಿ ಅಂಬಲಿ ಸವಿಯಲು ಸಿದ್ಧವಾಗಿದೆ.
- ಹುಳಿಬೇಕೆಂದರೆ ಸ್ವಲ್ಪ ನಿಂಬೆರಸ ಹಿಂಡಿ ಸೇವಿಸಬಹುದು.
ರಾಗಿ ಅಂಬಲಿಯ ಹಲವು ಪ್ರಯೋಜನಗಳು:
- ರಾಗಿಯಲ್ಲಿ ಫೈಬರ್, ಕಬ್ಬಿಣ, ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ಅಮೈನೋ ಆಮ್ಲಗಳು ಹೇರಳವಾಗಿವೆ. ರಾಗಿಯಿಂದ ತಯಾರಿಸಿದ ಪಾನೀಯವು ಉತ್ತಮ ಆರೋಗ್ಯಕ್ಕೆ ಪೂರಕವಾಗಿದೆ.
- ರಾಗಿಯು ಗ್ಲುಟನ್ ಮುಕ್ತವಾಗಿದ್ದು, ರಾಗಿ ಅಂಬಲಿ ಅಂಟು ಅಸಹಿಷ್ಣುತೆ ಇಲ್ಲವೇ ಉದರದ ಕಾಯಿಲೆ ಇರುವ ವ್ಯಕ್ತಿಗಳಿಗೆ ಉಪಯುಕ್ತವಾಗಿದೆ.
- ರಾಗಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಹೆಚ್ಚು ಸಹಾಯ ಮಾಡುತ್ತದೆ. ಮಧುಮೇಹ ಇಲ್ಲವೇ ಇನ್ಸುಲಿನ್ ಪ್ರತಿರೋಧವನ್ನು ನಿರ್ವಹಿಸುವ ವ್ಯಕ್ತಿಗಳಿಗೆ ರಾಗಿ ಅಂಬಲಿ ಸೇವಿಸಿದರೆ ಹೆಚ್ಚು ಲಾಭ ದೊರೆಯುತ್ತದೆ.
- ರಾಗಿ ಅಂಬಲಿ ಸೇವಿಸುವುದರಿಂದ ಹಸಿವು ಹತೋಟಿಗೆ ಬರುತ್ತದೆ. ಪದೇ ಪದೇ ಹಸಿವಿನಿಂದ ಬಳಲುವ ಸಮಸ್ಯೆಯು ಕಡಿಮೆ ಆಗುತ್ತದೆ. ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ತೂಕ ನಷ್ಟಕ್ಕೆ ತುಂಬಾ ಒಳ್ಳೆಯದು.

- ಜೊತೆಗೆ ರಾಗಿ ಅಂಬಲಿಯಲ್ಲಿನ ಹೆಚ್ಚಿನ ಪ್ರಮಾಣದ ನಾರಿನಂಶವು ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.
- ರಾಗಿಯಲ್ಲಿ ಒಳ್ಳೆಯ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳಿದ್ದು, ಇದು ದಿನವಿಡೀ ದೇಹಕ್ಕೆ ಶಕ್ತಿ ಕೊಡುತ್ತದೆ. ವಿಶೇಷವಾಗಿ ಮಕ್ಕಳಿಗೆ, ಕ್ರೀಡಾಪಟುಗಳಿಗೆ ತುಂಬಾ ಪ್ರಯೋಜನಕಾರಿ.
- ರಾಗಿಯಲ್ಲಿ ಪೊಟ್ಯಾಸಿಯಮ್ ಇರುವುದರಿಂದ ಅಧಿಕ ಬಿಪಿಯನ್ನು ನಿಯಂತ್ರಿಸಲು ಸಹಾಯವಾಗುತ್ತದೆ.
- ರಾಗಿಯಲ್ಲಿ ಉತ್ಕರ್ಷಣ ನಿರೋಧಕಗಳು ಇದ್ದು, ಚರ್ಮ ಹಾಗೂ ಕೂದಲಿನ ಆರೋಗ್ಯ ಸುಧಾರಿಸುತ್ತದೆ.
- ದೇಹವನ್ನು ತಂಪಾಗಿಸುತ್ತದೆ, ವಿಶೇಷವಾಗಿ ಬೇಸಿಗೆಯಲ್ಲಿ ಉತ್ತಮ ಪಾನೀಯವಾಗಿದೆ.
- ರಾಗಿಯಲ್ಲಿ ಕ್ಯಾಲ್ಸಿಯಂ ಹೆಚ್ಚ್ಚಿದ್ದು ಮೂಳೆ ಹಾಗೂ ಹಲ್ಲುಗಳನ್ನು ಸದೃಢವಾಗಿಸುತ್ತದೆ.