White Hair Problem In Children: ವಯಸ್ಸಾದಂತೆ ಬಿಳಿ ಕೂದಲು ಬರುವುದು ಸಹಜ. ಆದರೆ, ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲೂ ಕೂದಲು ಬಿಳಿಯಾಗುವುದನ್ನು ಕಾಣುತ್ತಿದ್ದೇವೆ. ಈ ರೀತಿಯ ಸಮಸ್ಯೆ ಬಹುತೇಕ ಮಕ್ಕಳಲ್ಲಿ ಸಾಮಾನ್ಯವಾಗಿದೆ.
ಇದಕ್ಕೆ ಅಪೌಷ್ಟಿಕತೆ ಹಾಗೂ ವಾಯುಮಾಲಿನ್ಯದ ಜೊತೆಗೆ ಇನ್ನೂ ಹಲವು ಕಾರಣಗಳಿವೆ ಎಂದು ತಜ್ಞರು ತಿಳಿಸುತ್ತಾರೆ. ಮಕ್ಕಳಲ್ಲಿ ತಲೆಕೂದಲು ಬಿಳಿಯಾಗುವುದು ಕ್ರಮೇಣ ಅವರಲ್ಲಿ ಕೀಳರಿಮೆ ಉಂಟುಮಾಡಬಹುದು. ಈ ಸಮಸ್ಯೆಯಿಂದ ಪಾರಾಗಲು ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ ನೋಡಿ.
ಮಕ್ಕಳಲ್ಲಿ ಕೂದಲು ಬಿಳಿಯಾಗಲು ಕಾರಣಗಳೇನು?:
- ಮಕ್ಕಳು ತಲೆಹೊಟ್ಟಿನಿಂದ ಬಳಲುತ್ತಿದ್ದಾರೆಯೇ? ಏಕೆಂದರೆ, ತಲೆಹೊಟ್ಟು ಸಮಸ್ಯೆ ಡೆಡ್ ಹೇರ್ಸ್ಗೆ ಕಾರಣವಾಗುತ್ತದೆ ಹಾಗೂ ಜೊತೆಗೆ ಕೂದಲು ಬೇಗನೇ ಬೆಳ್ಳಗಾಗುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬರುತ್ತದೆ.
- ಮಕ್ಕಳಲ್ಲಿ ಈ ಸಮಸ್ಯೆ ಇದ್ದರೆ ವೈದ್ಯರ ಸಲಹೆಯಂತೆ ಸೂಕ್ತ ಔಷಧಗಳನ್ನು ಉಪಯೋಗಿಸಿ ಆದಷ್ಟು ಬೇಗ ತಲೆಹೊಟ್ಟು ಕಡಿಮೆ ಮಾಡಿಕೊಳ್ಳುವುದು ಉತ್ತಮ.
- ಕೆಲವು ಸಮಸ್ಯೆಗಳು ಆನುವಂಶಿಕವಾಗಿ ಬಂದಿರುವುದನ್ನು ನಾವು ಸಾಮಾನ್ಯವಾಗಿ ಗಮನಿಸುತ್ತೇವೆ. ಅವುಗಳಲ್ಲಿ ಒಂದು ಗ್ರೇ ಕೂದಲು. ಮಗುವಿನ ತಂದೆ-ತಾಯಿ ಮತ್ತು ಅಜ್ಜಿಯರಲ್ಲಿ ಈ ಸಮಸ್ಯೆ ಇದ್ದರೆ, ಅವರಿಗೂ ಬಾಲ್ಯದಲ್ಲಿ ಬರುವ ಅವಕಾಶವಿದೆ.
- ವಿಟಮಿನ್ ಬಿ 12 ಕೊರತೆ, ರಕ್ತಹೀನತೆ, ಥೈರಾಯ್ಡ್, ಒತ್ತಡದಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳು ಕೂಡ ಬಿಳಿ ಕೂದಲಿನ ಸಮಸ್ಯೆಗೆ ಒಳಗಾಗುತ್ತಾರೆ.
"ಕುಟುಂಬದ ಯಾರಿಗಾದರೂ ಬಿಳಿ ಕೂದಲಿದ್ದರೆ, ಚಿಕ್ಕ ವಯಸ್ಸಿನಲ್ಲಿ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲದೆ, ಆಹಾರ ಪದ್ಧತಿ, ವಿಟಮಿನ್ ಬಿ 12 ಕೊರತೆ, ಕಡಿಮೆ ರಕ್ತ, ಅಧಿಕ ಅಥವಾ ಕಡಿಮೆ ಥೈರಾಯ್ಡ್ ಕೂದಲು ಬಿಳಿಯಾಗಲು ಪ್ರಮುಖ ಕಾರಣಗಳಾಗಿವೆ."
-ಡಾ.ದೀಪ್ತಿ ವಾಲ್ವೇಕರ್, ಕಾಸ್ಮೆಟಾಲಜಿಸ್ಟ್, ಟ್ರೈಕಾಲಜಿಸ್ಟ್
ಕೂದಲು ಬಿಳಿಯಾಗುವುದನ್ನು ತಡೆಯಲು ನೈಸರ್ಗಿಕ ಉಪಾಯಗಳು: ಮಕ್ಕಳಲ್ಲಿ ಬಿಳಿ ಕೂದಲನ್ನು ತಡೆಯಲು ಕೆಲವು ಸುಲಭ ಮತ್ತು ನೈಸರ್ಗಿಕ ಉಪಾಯಗಳಿವೆ ಎಂದು ತಜ್ಞರು ಹೇಳುತ್ತಾರೆ. ಅವುಗಳ ಬಗ್ಗೆ ಇದೀಗ ತಿಳಿಯೋಣ.
- ಬಾದಾಮಿ ಎಣ್ಣೆ ಮತ್ತು ಆಮ್ಲಾ ಎಣ್ಣೆಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಮತ್ತು ಮಲಗುವ ಮೊದಲು ಮಗುವಿನ ನೆತ್ತಿಯ ಮೇಲೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. ಅಲ್ಲದೆ, ರಾತ್ರಿ ಸಮಯದಲ್ಲಿ ಹಾಗೆಯೇ ಬಿಡಬೇಕು. ಬೆಳಿಗ್ಗೆದ್ದ ನಂತರ ಸ್ವಚ್ಛವಾಗಿ ಸ್ನಾನ ಮಾಡಬೇಕು.
- ಬಿಳಿ ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಕರಿಬೇವಿನ ಎಲೆಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಕೊಬ್ಬರಿ ಎಣ್ಣೆಗೆ ಕರಿಬೇವಿನ ಎಲೆಗಳನ್ನು ಸೇರಿಸಿ ಸ್ವಲ್ಪ ಕುದಿಯಲು ಬಿಡಿ. ನಂತರ ಈ ಮಿಶ್ರಣವನ್ನು ತಣ್ಣಗಾಗಲು ಬಿಡಬೇಕು. ಈ ಎಣ್ಣೆಯನ್ನು ಕೂದಲಿಗೆ ಆಗಾಗ್ಗೆ ಹಚ್ಚುತ್ತಿರಬೇಕು. ಇದರಿಂದ ಬಿಳಿ ಕೂದಲಿನ ಸಮಸ್ಯೆ ಸ್ವಲ್ಪ ದಿನ ಕಡಿಮೆಯಾಗುವ ಸಾಧ್ಯತೆ ಹೆಚ್ಚು ಇರುತ್ತದೆ.
- ಅಲೋವೆರಾ ತಿರುಳು ಕೂಡ ಮಕ್ಕಳಲ್ಲಿ ಬಿಳಿ ಕೂದಲು ಹೋಗಲಾಡಿಸಲು ಸಹಾಯ ಮಾಡುತ್ತದೆ.
- ಕಬ್ಬಿಣ, ವಿಟಮಿನ್ ಬಿ, ಸೋಡಿಯಂ, ತಾಮ್ರ, ಫೋಲಿಕ್ ಆಮ್ಲ ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿರುವ ಹಣ್ಣುಗಳು ಹಾಗೂ ತರಕಾರಿಗಳನ್ನು ಹೊಂದಿರುವ ಆಹಾರಗಳನ್ನು ಮಕ್ಕಳಿಗೆ ನೀಡಬೇಕು.
- ಪ್ರತಿದಿನ ನಿಮ್ಮ ಮಕ್ಕಳೊಂದಿಗೆ ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಕುಡಿಸಿದರೆ ಬಿಳಿ ಕೂದಲು ಮಾತ್ರವಲ್ಲ, ತಲೆಹೊಟ್ಟು ಹಾಗೂ ಕೂದಲು ಉದುರುವ ಸಮಸ್ಯೆಗಳೂ ಕ್ರಮೇಣ ಕಡಿಮೆಯಾಗುತ್ತವೆ.
- ಮಕ್ಕಳು ಆಗಾಗ್ಗೆ ಸ್ನಾನ ಮಾಡುವುದನ್ನು ಕಡಿಮೆ ಮಾಡಬೇಕು. ಹೆಚ್ಚಿನ ಸಾಂದ್ರತೆಯ ಶಾಂಪೂಗಳನ್ನು ಬಳಕೆ ಮಾಡದೇ ಇರುವುದು ಉತ್ತಮ.
- ಚಿಕ್ಕವಯಸ್ಸಿನಲ್ಲಿ ಮಕ್ಕಳಲ್ಲಿ ಬಿಳಿಕೂದಲು ಬರಲು ಕಾರಣಗಳು ಹಾಗೂ ಅವುಗಳಿಗೆ ಸೂಕ್ತ ಪರಿಹಾರಗಳು ಸ್ವಾಭಾವಿಕವಾಗಿರುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಆದರೆ, ಇವನ್ನೆಲ್ಲ ಬಳಸಿದರೂ ಯಾವುದೇ ಬದಲಾವಣೆ ಆಗದಿದ್ದರೆ ತಡಮಾಡದೆ ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆಯನ್ನು ಪಾಲಿಸಬೇಕು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು:
ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.