ನವದೆಹಲಿ: ದೇಹಕ್ಕೆ ಅಗತ್ಯವಾದ ಪೋಷಕಾಂಶದ ಜೊತೆಗೆ ಆರೋಗ್ಯಯುತ ಸಮತೋಲಿತ ಆಹಾರ ಸೇವನೆಗೆ ಡಯಟಿಷಿಯನ್ಗಳು ಒತ್ತು ನೀಡುತ್ತಾರೆ. ತೂಕ ನಿರ್ವಹಣೆ ಜೊತೆಗೆ ಆರೋಗ್ಯ ಕಾಪಾಡುವುದು ಇವರ ಮೂಲ ಉದ್ದೇಶ. ಇಂತಹ ಆಹಾರ ಪದ್ದತಿ ಅನುಕರಣೆಗಾಗಿ ಇದೀಗ ಭಾರತೀಯರು ಡಯಟಿಷಿಯನ್ಗಳ ಮೊರೆ ಹೋಗುತ್ತಿದ್ದಾರೆ. ಈ ಪ್ರಮಾಣ 2024ರ ಆರ್ಥಿಕ ವರ್ಷದಲ್ಲಿ 125ರಷ್ಟು ಏರಿಕೆ ಕಾಣಲಿದೆ. ಭಾರತೀಯರ ಈ ನಡುವಳಿಕೆ ಆರೋಗ್ಯಯುತ ಆಹಾರ ಅಭ್ಯಾಸ ನಡೆಸುವ ಕುರಿತು ಹೊಂದಿರುವ ಬಲವಾದ ಬದ್ಧತೆಯನ್ನು ತೋರಿಸುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಈ ಸಂಬಂಧ ವರದಿ ನೀಡಿರುವ ರೋಜರ್ಪೇ, ಹೆಲ್ತ್ ಕೋಚಿಂಗ್ಗಳ ವಹಿವಾಟಿನಲ್ಲೂ ಕೂಡ ಶೇ 45ರಷ್ಟು ಗಮನಾರ್ಹ ಬೆಳವಣಿಗೆ ಕಾಣಲಾಗಿದ್ದು, ಇದು ಫಿಟ್‌ನೆಸ್ ಮಾರ್ಗದರ್ಶನದಲ್ಲಿ ಸ್ಪಷ್ಟ ಆಸಕ್ತಿ ತೋರಿಸುತ್ತದೆ. ಈ ರೀತಿಯ ಆಹಾರ ಕ್ರಮದಿಂದಾಗಿ ಜನರ ಸಮಗ್ರ ಯೋಗಕ್ಷೇಮದ ಮೇಲೆ ಗಮನಾರ್ಹ ಒತ್ತು ನೀಡಲಾಗಿದೆ. ಅಲ್ಲದೇ ಅವರು ಸಮಸ್ಯೆ ತಡೆಗಟ್ಟಿ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಉತ್ಪನ್ನಗಳ ಬಳಕೆಯಲ್ಲಿ ಶೇಕಡಾ 39 ರಷ್ಟು ಏರಿಕೆ ಕಂಡಿದೆ ಎಂದು ಸಾಬೀತಾಗಿದೆ.
ಆರೋಗ್ಯವೇ ನಿಜವಾದ ಸಂಪತ್ತು ಎಂಬ ಅಂಶದ ಕುರಿತು ಜನರು ಕೂಡ ಬದಲಾಗುತ್ತಿರುವುದು ಇದರಿಂದ ಕಾಣಬಹುದಾಗಿದೆ ಎಂದು ರೋಜರ್ಪೇ ಎಂಡಿ ಮತ್ತು ಸಹ ಸಂಸ್ಥಾಪಕ ಶಶಾಂಕ್ ಕುಮಾರ್ ತಿಳಿಸಿದ್ದಾರೆ. ಅಧ್ಯಯನಕ್ಕಾಗಿ ಏಪ್ರಿಲ್ 1, 2023 ರಿಂದ ಮಾರ್ಚ್ 31, 2024ರವರೆಗೆ ಭಾರತೀಯರ ಖರ್ಚಿನ ಅಭ್ಯಾಸದ ಮೇಲೆ ಅಂಕಿ- ಅಂಶ ಸಂಗ್ರಹಿಸಲಾಗಿದ್ದು, ಬಿಲಿಯನ್ಗಿಂತಲೂ ಹೆಚ್ಚಿನ ವಹಿವಾಟು ಆಗಿರುವ ಬಗ್ಗೆ ವಿಶ್ಲೇಷಣೆಗೊಳಪಡಿಸಲಾಗಿತ್ತು.
ಮತ್ತೊಂದು ಪ್ರಮುಖ ಅಂಶ ಎಂದರೆ, ಮ್ಯೂಚುವಲ್ ಫಂಡ್ ಮೇಲಿನ ಹೂಡಿಕೆಯು ಶೇ 86ರಷ್ಟು ಏರಿಕೆ ಕಂಡಿದ್ದು, ಇನ್ಸುರೆನ್ಸ್ ಪೆಮೇಂಟ್ಸ್ ಶೇ 56 ರಷ್ಟು ಬೆಳವಣಿಗೆ ಮತ್ತು ಟ್ರೇಡಿಂಗ್ ಶೇ 62ರಷ್ಟು ಏರಿಕೆಯನ್ನು ಕಂಡಿದೆ. ವಿಮಾನಯಾನದ ಪೇಮೆಂಟ್ಗಳಲ್ಲೂ 2.4ಪಟ್ಟು ಹೆಚ್ಚಳ ಕಂಡಿದ್ದು, ಪ್ರವಾಸ ವಸತಿಯಲ್ಲಿ ಶೇ 29ರಷ್ಟು ಏರಿಕೆ ಕಂಡಿದೆ. ಮಲ್ಟಿಪ್ಲೆಕ್ಸ್ ವಹಿವಾಟುಗಳು ಶೇ 42 ರಷ್ಟು ಹೆಚ್ಚಳವನ್ನು ಕಂಡರೆ, ಟಿಕೆಟ್ ಏಜೆನ್ಸಿಗಳು ಮಾರಾಟದಲ್ಲಿ 2.7 ಪಟ್ಟು ಗಣನೀಯ ಹೆಚ್ಚಳ ಕಂಡು ಬಂದಿದೆ.
ಭಾರತೀಯ ಗ್ರಾಹಕರು ವೇಗವಾಗಿ ವಿಕಸನಗೊಳ್ಳುತ್ತಿದ್ದಾರೆ, ಬ್ರಾಂಡ್ಗಳನ್ನು ಪ್ರೋತ್ಸಾಹಿಸುವ ಮೂಲಕ ಗ್ರಾಹಕರು ತೊಡಗಿಸಿಕೊಳ್ಳುವಿಕೆಯ ತಂತ್ರಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹೊಸ ವರ್ಷದಲ್ಲಿ ವಿಮಾನಯಾನಕ್ಕೆ ಭಾರತೀಯರು ಹೆಚ್ಚು ಖರ್ಚು ಮಾಡುತ್ತಿರುವುದು ಕಂಡು ಬಂದಿದೆ. ಅಲ್ಲದೇ ದೈನಂದಿನ ದಿನಗಳಿಗೆ ಹೋಲಿಕೆ ಮಾಡಿದರೆ, ಈ ಸಮಯದಲ್ಲಿ ಟೈನ್ ಇನ್ ಮತ್ತು ಆನ್ಲೈನ್ ಫುಡ್ ಆರ್ಡರ್ನಲ್ಲಿ ಶೇ 60ರಷ್ಟು ಏರಿಕೆ ಕಂಡಿದೆ. (ಐಎಎನ್ಎಸ್)
ಇದನ್ನೂ ಓದಿ: ಮೆಗ್ನಿಶಿಯಂ ಕೊರತೆ ಕಾಡುತ್ತಿದ್ಯಾ?: ಡಯಟ್ನಲ್ಲಿರಲಿ ಈ ಆಹಾರಗಳು!