ETV Bharat / health

ಒಂದು ದಿನಕ್ಕೆ ಎಷ್ಟು ಉಪ್ಪು ಸೇವಿಸಬೇಕು ಗೊತ್ತಾ? ಹೆಚ್ಚು ಸಾಲ್ಟ್​ ಬಳಸಿದರೆ ಹೃದಯಕ್ಕೆ ಅಪಾಯ: ಡಬ್ಲ್ಯೂಎಚ್ಒ ಎಚ್ಚರಿಕೆ - HOW MUCH SALT INTAKE PER DAY

ಪ್ರತಿನಿತ್ಯ ಎಷ್ಟು ಉಪ್ಪು ಸೇವಿಸಬೇಕು ಎಂಬುದನ್ನು ನಿಮಗೆ ತಿಳಿದಿದೆಯಾ? ಹೆಚ್ಚು ಸಾಲ್ಟ್​ ಬಳಸಿದರೆ ದೇಹದ ಆರೋಗ್ಯಕ್ಕೆ ಯಾವೆಲ್ಲಾ ಸಮಸ್ಯೆಗಳಾಗುತ್ತವೆ? ಉಪ್ಪು ಸೇವನೆಯ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಟಿಸಿರುವ ಮಾರ್ಗಸೂಚಿಗಳು ಇಲ್ಲಿವೆ ನೋಡಿ.

HOW MUCH SALT INTAKE PER DAY  SALT INTAKE AND BLOOD PRESSURE  SALT INTAKE PER DAY IN GRAMS  SALT INTAKE PER DAY FOR ADULTS
ಒಂದು ದಿನಕ್ಕೆ ಎಷ್ಟು ಉಪ್ಪು ಸೇವಿಸಬೇಕು ಗೊತ್ತಾ?- ಸಾಂದರ್ಭಿಕ ಚಿತ್ರ (Getty Image)
author img

By ETV Bharat Health Team

Published : Feb 27, 2025, 1:52 PM IST

How Much Salt Intake per Day: ಮನೆ ಮತ್ತು ಹೋಟೆಲ್​ನಲ್ಲಿ ಯಾವುದೇ ಖಾದ್ಯ ಸಿದ್ಧಪಡಿಸಿದರೂ ಅದರಲ್ಲಿ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಇಲ್ಲದಿದ್ದರೆ ರುಚಿ ಬರುವುದಿಲ್ಲ. ಅತಿಹೆಚ್ಚು ಉಪ್ಪು ಸೇವಿಸುವುದರಿಂದ ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ. ಉಪ್ಪಿನಲ್ಲಿ ಹೆಚ್ಚುವರಿ ಸೋಡಿಯಂ ಹೃದಯ, ಕಿಡ್ನಿ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಸೋಡಿಯಂ ಸೇವನೆಯು ದಿನಕ್ಕೆ 2 ಗ್ರಾಂ ಮೀರಬಾರದು. ನೀವು ಉಪ್ಪನ್ನು ಬಳಸಬೇಕಾದರೆ ಪೊಟ್ಯಾಸಿಯಮ್‌ನೊಂದಿಗೆ ಕಡಿಮೆ ಸೋಡಿಯಂ ಉಪ್ಪು ಆಯ್ಕೆ ಮಾಡಲು ಇತ್ತೀಚೆಗೆ ಡಬ್ಲ್ಯೂಎಚ್​​ಒನಿಂದ ಬಿಡುಗಡೆಯಾದ ಮಾರ್ಗಸೂಚಿಗಳು ತಿಳಿಸುತ್ತವೆ. ಆದ್ರೆ, ಈ ಮಾರ್ಗಸೂಚಿಗಳು ಗರ್ಭಿಣಿಯರು, ಮಕ್ಕಳು ಮತ್ತು ಮೂತ್ರಪಿಂಡ ಕಾಯಿಲೆ ಪೀಡಿತರಿಗೆ ಅನ್ವಯಿಸುವುದಿಲ್ಲ. ಈ ಬಗ್ಗೆ ವೈದ್ಯಕೀಯ ತಜ್ಞರು ಏನು ತಿಳಿಸುತ್ತಾರೆ ಎಂದು ತಿಳಿಯೋಣ. (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).

HOW MUCH SALT INTAKE PER DAY  SALT INTAKE AND BLOOD PRESSURE  SALT INTAKE PER DAY IN GRAMS  SALT INTAKE PER DAY FOR ADULTS
ಉಪ್ಪು (Getty Images)

ವಿಶ್ವದಾದ್ಯಂತ ಪ್ರತಿವರ್ಷ 80 ಲಕ್ಷ ಸಾವಿನ ಪ್ರಕರಣಗಳು ಅಪೌಷ್ಟಿಕತೆಯಿಂದ ಉಂಟಾಗುತ್ತವೆ. ಇದರಲ್ಲಿ 19 ಲಕ್ಷ ಸಾವಿನ ಪ್ರಕರಣಗಳು ಅತಿಯಾದ ಉಪ್ಪು (ಸೋಡಿಯಂ) ಸೇವನೆಯಿಂದ ಸಂಭವಿಸುತ್ತಿವೆ. ಅದಕ್ಕಾಗಿಯೇ ಸೋಡಿಯಂ ಸೇವನೆ ಕಡಿಮೆ ಮಾಡುವುದರಿಂದ ರಕ್ತದೊತ್ತಡ ಕಡಿಮೆ ಮಾಡಬಹುದು. ಕಡಿಮೆ ಸೋಡಿಯಂ ಸೇವನೆಯಿಂದ ಹೃದ್ರೋಗ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಅಪಾಯವು ಕಡಿಮೆಯಾಗುತ್ತದೆ. ಜೊತೆಗೆ ಕರುಳಿನ ಕ್ಯಾನ್ಸರ್​ ಸೇರಿದಂತೆ ಇತರ ಕಾಯಿಲೆಗಳ ಅಪಾಯವೂ ಇರುವುದಿಲ್ಲ. ಸೋಡಿಯಂ ಕ್ಲೋರೈಡ್‌ ಉಪ್ಪಿನ ಬದಲಿಗೆ ಪೊಟ್ಯಾಸಿಯಮ್ ಕ್ಲೋರೈಡ್‌ ಉಪ್ಪನ್ನು ಬಳಸುವುದರಿಂದ ರಕ್ತದಲ್ಲಿನ ಸೋಡಿಯಂ ಮಟ್ಟವನ್ನು ಕಡಿಮೆ ಮಾಡಬಹುದು. ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುವ ಪೊಟ್ಯಾಸಿಯಮ್ ಪ್ರಮಾಣವು ಹೆಚ್ಚಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯು ನಮ್ಮ ದೇಶದಲ್ಲಿ ಹಾಗೂ ವಿಶ್ವದಾದ್ಯಂತ 26 ಪ್ರಾಯೋಗಿಕ ಪರೀಕ್ಷೆಗಳನ್ನು ವಿಶ್ಲೇಷಿಸಿದ ತಜ್ಞರ ಅಭಿಪ್ರಾಯದ ಆಧಾರದ ಮೇಲೆ ಇತ್ತೀಚಿನ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಈ ಪರೀಕ್ಷೆಗಳು ಕಡಿಮೆ ಸೋಡಿಯಂ ಉಪ್ಪಿನೊಂದಿಗೆ ಸಂಕೋಚನದ ರಕ್ತದೊತ್ತಡವನ್ನು 4.76 mmHg ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡವು 2.43 mmHg ಗಿಂತ ಕಡಿಮೆಯಾಗಿದೆ ಎಂದು ಬಹಿರಂಗಪಡಿಸಿತು. ಮಾರಣಾಂತಿಕವಲ್ಲದ ಪಾರ್ಶ್ವವಾಯು ಅಪಾಯವನ್ನು ಶೇ. 10ರಷ್ಟು ಹಾಗೂ ಹೃದ್ರೋಗದ ಸಾವುಗಳು ಶೇ.23 ರಷ್ಟು ಕಡಿಮೆಯಾಗಿದೆ. ಪೊಟ್ಯಾಸಿಯಮ್ ಕ್ಲೋರೈಡ್ ಉಪ್ಪು ರಕ್ತದಲ್ಲಿನ ಪೊಟ್ಯಾಸಿಯಮ್ ಮಟ್ಟವನ್ನು ಹೆಚ್ಚಿಸುತ್ತದೆ ಎಂಬುದು ಕಂಡುಬಂದಿದೆ. ಒಟ್ಟಾರೆಯಾಗಿ ಸೋಡಿಯಂ ಸೇವನೆ ಕಡಿಮೆ ಮಾಡುವುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಆದರೆ, ಇದು ಸಾಧ್ಯವಾಗದಿದ್ದಾಗ ಕಡಿಮೆ ಸೋಡಿಯಂ ಉಪ್ಪನ್ನು ಬಳಸುವುದು ಒಳ್ಳೆಯದು.

ಹೃದಯದ ಆರೋಗ್ಯ- ಸಾಂದರ್ಭಿಕ ಚಿತ್ರ (Getty Images)

ಉಪ್ಪಿನಲ್ಲಿರುವ ಸೋಡಿಯಂ ಕ್ಲೋರೈಡ್ ರಕ್ತದೊತ್ತಡದ ಮೇಲೆ ಗಮನಾರ್ಹ ಪರಿಣಾಮ ಉಂಟು ಮಾಡುತ್ತದೆ. ರಕ್ತದಲ್ಲಿ ಹೆಚ್ಚಿದ ಸೋಡಿಯಂ ಮಟ್ಟವು ರಕ್ತನಾಳಗಳನ್ನು ಹೆಚ್ಚು ಸಂಕುಚಿತಗೊಳಿಸುತ್ತದೆ. ಮತ್ತೊಂದೆಡೆ, ರಕ್ತದಲ್ಲಿನ ದ್ರವದ ಶೇಕಡಾವಾರು ಪ್ರಮಾಣವು ಹೆಚ್ಚಾಗುತ್ತದೆ ಹಾಗೂ ರಕ್ತದ ಪ್ರಮಾಣವೂ ಹೆಚ್ಚಾಗುತ್ತದೆ. ರಕ್ತನಾಳಗಳ ಸಾಮರ್ಥ್ಯವನ್ನು ನಿರ್ಧರಿಸಲಾಗುತ್ತದೆ. ಈ ಸಂಕೋಚನಗಳು ಹಾಗೂ ರಕ್ತದ ಪ್ರಮಾಣದಲ್ಲಿ ಹೆಚ್ಚಳದಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಇದು ಹೃದಯದ ಮೇಲೆ ಮುಖ್ಯವಾದ ಪ್ರಭಾವ ಬೀರುತ್ತದೆ. ರಕ್ತದೊತ್ತಡ ಹೆಚ್ಚಾದಾಗ ಅದು ಹೃದಯದ ಮೇಲೆ ಹೆಚ್ಚು ಒತ್ತಡ ಬೀರುತ್ತದೆ. ಇದು ಹೆಚ್ಚು ಬಲವಾಗಿ ಸಂಕುಚಿತಗೊಳ್ಳುವ ಮೂಲಕ ರಕ್ತವನ್ನು ಪಂಪ್ ಮಾಡಲು ಕಾರಣವಾಗುತ್ತದೆ.

-ಡಾ.ಎ.ವಿ. ಆಂಜನೇಯಲು, ಹೃದ್ರೋಗ ತಜ್ಞ

ಹೃದಯವು ಕಷ್ಟಪಟ್ಟು ಕೆಲಸ ಮಾಡುವಾಗ, ಅದರ ಸ್ನಾಯು ದುರ್ಬಲಗೊಳ್ಳುತ್ತದೆ (ಹೈಪರ್ಟ್ರೋಫಿ). ಈ ದಪ್ಪನಾದ ಸ್ನಾಯುವಿಗೆ ಹೆಚ್ಚಿನ ರಕ್ತದ ಅಗತ್ಯವಿರುತ್ತದೆ. ಆದರೆ, ಹೃದಯದ ರಕ್ತನಾಳಗಳು ಸಾಕಷ್ಟು ರಕ್ತವನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಹೃದಯ ಸ್ನಾಯು ದುರ್ಬಲಗೊಳ್ಳುತ್ತದೆ. ಇದು ಅಂತಿಮವಾಗಿ ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ. ಹೃದಯವು ಹಠಾತ್ತಾಗಿ ವಿಫಲವಾದರೆ, ರಕ್ತವು ಬ್ಯಾಕ್ ಅಪ್ ಆಗುವ ಹಾಗೂ ಶ್ವಾಸಕೋಶದಲ್ಲಿ ದ್ರವದಿಂದ ತುಂಬುವ ಸಾಧ್ಯತೆಯಿದೆ. ಕೆಲವೊಮ್ಮೆ ಅಂತಹವರಿಗೆ ವೆಂಟಿಲೇಟರ್‌ ಹಾಕಿ ಚಿಕಿತ್ಸೆ ನೀಡಬೇಕಾಗುತ್ತದೆ. ಅಧಿಕ ರಕ್ತದೊತ್ತಡವು ಹೃದಯದ ರಕ್ತನಾಳಗಳ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ಇದರಿಂದಾಗಿ ರಕ್ತನಾಳಗಳು ದಪ್ಪವಾಗುತ್ತವೆ. ಆದರೆ, ಇದು ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ. ಜೊತೆಗೆ ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ಹೃದಯದ ರಕ್ತನಾಳಗಳಲ್ಲಿ ಈಗಾಗಲೇ ಹೆಪ್ಪುಗಟ್ಟುವಿಕೆ ಇದ್ದರೆ ಮತ್ತಷ್ಟು ಅಪಾಯವು ಹೆಚ್ಚಾಗುತ್ತದೆ.

-ಡಾ.ಎ.ವಿ. ಆಂಜನೇಯಲು, ಹೃದ್ರೋಗ ತಜ್ಞ

ಆದಷ್ಟು ಕಡಿಮೆ ಉಪ್ಪು ಬಳಸಲು ವೈದ್ಯರ ಸಲಹೆ: ಆಹಾರದ ಮೂಲಕ ಹೆಚ್ಚು ಸೋಡಿಯಂ ಸೇವಿಸುವುದು, ದೇಹವನ್ನು ತೊಂದರೆಗೆ ದೂಡಿದಂತಾಗುತ್ತದೆ. ರಕ್ತದಲ್ಲಿ ಸೋಡಿಯಂ ಪ್ರಮಾಣ ಹೆಚ್ಚುತ್ತದೆ. ಖನಿಜ ಕಾರ್ಟಿಕಾಯ್ಡ್‌ಗಳು ಮತ್ತು ಕಾರ್ಟಿಕೊಸ್ಟೆರಾಯ್ಡ್‌ಗಳಂತಹ ಹಾರ್ಮೋನ್‌ಗಳು ಅಧಿಕವಾಗಿದ್ದರೆ ಸೋಡಿಯಂ ಪ್ರಮಾಣವು ಹೆಚ್ಚಾಗುತ್ತದೆ. ಯಾವುದೇ ಕಾರಣದಿಂದ ಸೋಡಿಯಂ ಹೆಚ್ಚಾದರೆ ರಕ್ತದೊತ್ತಡವೂ ಹೆಚ್ಚಾಗುತ್ತದೆ. ಆಹಾರದಲ್ಲಿ ಉಪ್ಪಿನ ಬಳಕೆ ಕಡಿಮೆ ಮಾಡುವ ಮೂಲಕ ಅದರ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಬಹುದು ಎಂದು ಡಾ.ಆಂಜನೇಯಲು ಹೇಳುತ್ತಾರೆ.

ಸೋಡಿಯಂ ಅನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಲು ಹಾಗೂ ಸೋಡಿಯಂ ಬದಲಾಗಿ ಪೊಟ್ಯಾಸಿಯಮ್ ಕ್ಲೋರೈಡ್ ಅನ್ನು ಬಳಕೆ ಮಾಡಬೇಕು. ಇದು ಸೋಡಿಯಂನ ಸಂಪೂರ್ಣ ವಿರುದ್ಧವಾಗಿದೆ. ಆದರೆ, ಸೋಡಿಯಂ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಪೊಟ್ಯಾಸಿಯಮ್ ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಪರಿಣಾಮವಾಗಿ ರಕ್ತ ಪರಿಚಲನೆ ಸುಗಮವಾಗಿ ರಕ್ತದೊತ್ತಡ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಅಧಿಕ ರಕ್ತದೊತ್ತಡ ಹೊಂದಿರುವ ಜನರು ಹೆಚ್ಚು ಪೊಟ್ಯಾಸಿಯಮ್ ಭರಿತ ಬಾಳೆಹಣ್ಣುಗಳನ್ನು ತಿನ್ನಲು ಹೇಳುತ್ತಾರೆ. ಇದು ಬಿಪಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪೊಟ್ಯಾಸಿಯಮ್ ಕ್ಲೋರೈಡ್ ಅನ್ನು ಹೆಚ್ಚು ತೆಗೆದುಕೊಳ್ಳುವುದು ಒಳ್ಳೆಯದಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಬಹುದು:

ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.