ETV Bharat / health

ಅಸ್ಸಾಂನಲ್ಲಿ ಏರಿಕೆ ಕಾಣುತ್ತಿರುವ ಎಚ್​ಐವಿ: ಸೋಂಕು ಹರಡುವಿಕೆಗೆ ಕಾರಣ ತಿಳಿಸಿದ ಆರೋಗ್ಯ ಸಚಿವರು

ಅಸ್ಸಾಂನಲ್ಲಿ ಎಚ್​ಐವಿ ಸೋಂಕು ಹರಡುವಿಕೆ ತಡೆ ವಿರುದ್ಧ ಸರ್ಕಾರ ಎನ್​ಜಿಒ ಜೊತೆ ಸೇರಿ ಕೆಲಸ ಮಾಡುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

HIV Cases in Assam Raising
HIV Cases in Assam Raising
author img

By IANS

Published : Feb 10, 2024, 10:36 AM IST

Updated : Feb 12, 2024, 12:06 PM IST

ಹೈದರಾಬಾದ್​: ಅಸ್ಸಾಂನಲ್ಲಿ ಏಡ್ಸ್​ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ಎಂದರೆ ಬಳಕೆ ಮಾಡಿದ ಚುಚ್ಚುಮದ್ದನ್ನು ಹಂಚಿಕೊಳ್ಳುತ್ತಿರುವುದರಿಂದ ಸೋಂಕು ಹರಡುತ್ತಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಕೇಶಬ್ ಮಹಾಂತ ತಿಳಿಸಿದ್ದಾರೆ.

ಇದೇ ವೇಳೆ ಸರ್ಕಾರ ಎನ್​ಜಿಒ ಬೆಂಬಲದೊಂದಿಗೆ ಎಚ್​ಐವಿ ಪಾಸಿಟಿವ್​​ ಜನರಿಗೆ ಸಹಾಯ ಮಾಡುತ್ತಿದೆ. ಸೋಂಕಿತರ ಗೌಪತ್ಯೆಯನ್ನು ಕಾಪಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಸ್ಸಾಂ ವಿಧಾನಸಭೆಯ ಪ್ರಶ್ನೋತ್ತರದ ವೇಳೆ ಕಾಂಗ್ರೆಸ್ ಶಾಸಕ ಸಿಬಾಮೋನಿ ಬೋರಾ, ರಾಜ್ಯದ ಎಚ್‌ಐವಿ ಹರಡುವಿಕೆಯ ವಿಷಯವನ್ನು ಪ್ರಸ್ತಾಪಿಸಿ, ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಳ ಕುರಿತು ಪ್ರಶ್ನಿಸಿದರು. ಸೋಂಕಿನಿಂದ ಅರ್ಧದಷ್ಟು ಔಷಧದ ಡೀಲರ್​ಗಳು ಕೂಡ ಪರಿಣಾಮಕ್ಕೆ ಒಳಗಾಗಿದ್ದಾರೆ. ಕೋವಿಡ್​ 19 ಸಾಂಕ್ರಾಮಿಕ ಸೋಂಕು ಉಲ್ಬಣಗೊಂಡ ಬಳಿಕ ಸರ್ಕಾರ ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸಲು ಹೆಚ್ಚಿನ ಗಮನವನ್ನು ನೀಡಿಲ್ಲ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ರಾಜ್ಯದಲ್ಲಿ 2002 ಮತ್ತು 2023 ರ ನಡುವೆ 89,84,519 ಎಚ್​ಐವಿ ಪರೀಕ್ಷೆ ನಡೆಸಲಾಗಿದ್ದು, 31,729 ಎಚ್‌ಐವಿ ಏಡ್ಸ್ ಸೋಂಕುಗಳು ಪತ್ತೆಯಾಗಿವೆ. 2023ರ ಡಿಸೆಂಬರ್​ನಲ್ಲಿ ನಡೆಸಲಾದ 9,90,372 ಪರೀಕ್ಷೆಗಳಲ್ಲಿ ಒಟ್ಟು 5,791 ಪ್ರಕರಣ ಕಂಡು ಬಂದಿದ್ದು, ಸೋಂಕಿನಲ್ಲಿ ಏರಿಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ರಾಜ್ಯ ಸರ್ಕಾರ ಎನ್​ಜಿಒಗಳೊಂದಿಗೆ ಸಹಭಾಗಿತ್ವವಹಿಸುವ ಮೂಲಕ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಮತ್ತು ದುರ್ಬಲ ಗುಂಪುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಈ ಕುರಿತಾದ ಅಂಕಿ ಅಂಶವನ್ನು ಮಾತ್ರ ನೀಡಬಹುದು. ಮಾಡುತ್ತಿರುವ ಕೆಲಸದ ಕುರಿತು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಎಚ್‌ಐವಿ - ಏಡ್ಸ್ ಪ್ರಕರಣದಲ್ಲಿ ಗೌಪ್ಯತೆ ಕಾಪಾಡುವುದು ಮುಖ್ಯವಾಗುತ್ತದೆ ಎಂದು ತಿಳಿಸಿದರು.

ಸೋಂಕಿನ ಏರಿಕೆಯಲ್ಲಿ ಪ್ರಮುಖ ಕಾರಣ ಎಂದರೆ, ಔಷಧಗಳ ಬಳಕೆಗೆ ಉಪಯೋಗಿಸಿದ ಚುಚ್ಚುಮದ್ದಿನ ಮರು ಬಳಕೆಯಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಅಕ್ರಮ ಮಾದಕ ವಸ್ತುಗಳ ವಿರುದ್ಧ ಅಭಿಯಾನ ಆರಂಭಿಸಿದೆ. ಆದಾಗ್ಯೂ ಇದನ್ನು ಸಂಪೂರ್ಣವಾಗಿ ಅಂತ್ಯಮಾಡಲು ಸಾಧ್ಯವಾಗಿಲ್ಲ ಎಂದರು.

ಅಸ್ಸಾಂನ ಜನಸಂಖ್ಯೆ ಕೂಡ ಈಶಾನ್ಯದ ಉಳಿದ ಭಾಗಗಳ ವಲಸೆಯಿಂದಾಗಿ ದುರ್ಬಲವಾಗಿದೆ. ಇತರ ರಾಜ್ಯದ ರೋಗಿಗಳಿಗೆ ಚಿಕಿತ್ಸೆ ನೀಡುವುದರಿಂದ ಅಸ್ಸಾಂನ ಪ್ರಕರಣದಲ್ಲಿ ಏರಿಕೆ ಕಂಡಿದೆ. ಸರ್ಕಾರ ಜೈಲು ಸೇರಿದಂತೆ ಸರ್ಕಾರವು ವಿವಿಧ ಸರ್ಕಾರಿ ಮತ್ತು ಇತರ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ, ಸಮಾಲೋಚನೆ ಮತ್ತು ಚಿಕಿತ್ಸೆ ಸೌಲಭ್ಯ ನೀಡುತ್ತಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಲಖನೌ ಕಾರಾಗೃಹದಲ್ಲಿ ಮತ್ತೆ 38 ಮಂದಿಯಲ್ಲಿ ಎಚ್​ಐವಿ ದೃಢ: ಒಟ್ಟು ಸೋಂಕಿತರ ಸಂಖ್ಯೆ 66

Last Updated : Feb 12, 2024, 12:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.