ಅನೇಕ ಜನರು ಹಣ್ಣುಗಳನ್ನು ಇಷ್ಟಪಡುತ್ತಾರೆ. ಅದರಲ್ಲಿ ಹೆಚ್ಚಿನ ಜನರು ಬಾಳೆಹಣ್ಣಿನತ್ತ ಒಲವು ತೋರುತ್ತಿದ್ದಾರೆ. ಬಾಳೆಹಣ್ಣು ವಾಸ್ತವವಾಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಣ್ಣಿನಲ್ಲಿ ಪೊಟ್ಯಾಸಿಯಮ್, ಫೈಬರ್, ಆರೋಗ್ಯಕರ ಕೊಬ್ಬು ಮತ್ತು ವಿಟಮಿನ್ಗಳು ಸಮೃದ್ಧವಾಗಿವೆ. ಪರಿಣಾಮವಾಗಿ, ಅನೇಕ ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ.
ಕೆಲವರಿಗೆ ಬಾಳೆಹಣ್ಣಿನ ಬಗ್ಗೆ ಹಲವಾರು ತಪ್ಪು ಕಲ್ಪನೆಗಳಿವೆ. ಅದರಲ್ಲೂ ಹೆಚ್ಚಿನವರು ದಿನನಿತ್ಯ ಬಾಳೆಹಣ್ಣು ತಿಂದರೆ ತೂಕ ಹೆಚ್ಚುತ್ತದೆಯೇ ಅಥವಾ ಕಡಿಮೆಯಾಗುತ್ತದೆಯೇ? ಎಂಬ ಅನುಮಾನ ಕಾಡುತ್ತಿರುತ್ತದೆ.
ಸೀಸನ್ ಅನ್ನು ಲೆಕ್ಕಿಸದೆ ಅಗ್ಗದ ದರದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಏಕೈಕ ಹಣ್ಣು ಅಂದ್ರೆ ಅದು ಬಾಳೆಹಣ್ಣು. ಈ ಬಾಳೆಹಣ್ಣು ತೂಕ ಇಳಿಕೆ ಮತ್ತು ಹೆಚ್ಚಳ ಎರಡಕ್ಕೂ ಸಹಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು. ಏಕೆಂದರೆ ಅವು ಕಾರ್ಬೋಹೈಡ್ರೇಟ್‌ಗಳು ಮತ್ತು ಕ್ಯಾಲೋರಿಗಳ ಸರಿಯಾದ ಸಮತೋಲನವನ್ನು ಹೊಂದಿವೆ. ಬಾಳೆಹಣ್ಣು ವಾಸ್ತವವಾಗಿ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆಯಾದರೂ, ಮಿತವಾದ ಸೇವನೆಯು ನಿರ್ಣಾಯಕವಾಗಿದೆ ಎಂಬುದು ತಜ್ಞರು ಸಲಹೆಯಾಗಿದೆ.
ಬಾಳೆಹಣ್ಣು ಹೆಚ್ಚು ತಿಂದರೆ ಈ ಸಮಸ್ಯೆಗಳು ಗ್ಯಾರಂಟಿ!: ತೂಕ ಹೆಚ್ಚಿಸಲು ಬಾಳೆಹಣ್ಣು ಯಾವರೀತಿ ಸಹಾಯ ಮಾಡುತ್ತದೆ ಅಂದರೆ.. ಬಾಳೆಹಣ್ಣು ಆರೋಗ್ಯಕ್ಕೆ ಉತ್ತಮ ಹಣ್ಣುಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಆದರೆ, ದಿನನಿತ್ಯ ಅತಿಯಾಗಿ ತಿಂದರೆ ಸ್ಥೂಲಕಾಯಕ್ಕೆ ಆಹ್ವಾನ ನೀಡುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಏಕೆಂದರೆ ಬಾಳೆಹಣ್ಣಿನಲ್ಲಿ ಸಕ್ಕರೆ ಮತ್ತು ಕ್ಯಾಲೋರಿಗಳು ಹೆಚ್ಚು. ಅವುಗಳಲ್ಲಿರುವ ಸಕ್ಕರೆ ನೈಸರ್ಗಿಕವಾಗಿದೆ. ದೇಹವು ಅದನ್ನು ತ್ವರಿತವಾಗಿ ಹೀರಿಕೊಳ್ಳುವುದಿಲ್ಲ. ಒಂದು ಸಾಮಾನ್ಯ ಬಾಳೆಹಣ್ಣು ಸುಮಾರು 105 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಅಂದರೆ ಪ್ರತಿನಿತ್ಯ ಒಂದಕ್ಕಿಂತ ಹೆಚ್ಚು ಬಾಳೆಹಣ್ಣು ತಿಂದರೆ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿ ಸಿಗುತ್ತದೆ. ಅಂದರೆ ಪ್ರತಿದಿನ 2 ರಿಂದ 3 ಬಾಳೆಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ 350 ಹೆಚ್ಚುವರಿ ಕ್ಯಾಲೊರಿ ಒದಗಿಸುತ್ತದೆ. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ತೂಕ ಇಳಿಕೆಗೆ ಬಾಳೆಹಣ್ಣು ಹೇಗೆ ಒಳ್ಳೆಯದು?: ತೂಕ ಇಳಿಸಲು ಬಯಸುವವರಿಗೆ ಬಾಳೆಹಣ್ಣು ತುಂಬಾ ಉಪಯುಕ್ತ ಎನ್ನುತ್ತಾರೆ ಆರೋಗ್ಯ ತಜ್ಞರು. ಏಕೆಂದರೆ ಇದರಲ್ಲಿ ಫೈಬರ್ ಮತ್ತು ಪ್ರೋಟೀನ್‌ಗಳು ಸಮೃದ್ಧವಾಗಿವೆ. ಪರಿಣಾಮವಾಗಿ ಅವುಗಳನ್ನು ತಿಂದರೆ ಬೇಗ ಹಸಿವಾಗುವುದಿಲ್ಲ. ಹೊಟ್ಟೆ ತುಂಬಾ ಹೊತ್ತು ತುಂಬಿದ ಅನುಭವವಾಗುವಂತೆ ಮಾಡುತ್ತದೆ. ಹೀಗಾಗಿ ಕ್ಯಾಲೊರಿಗಳನ್ನು ಹೆಚ್ಚಾಗಿ ಸೇವಿಸುವ ಅಪಾಯ ಇರುವುದಿಲ್ಲ. ಇದರಿಂದ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ಬಾಳೆಹಣ್ಣನ್ನು ಮಿತವಾಗಿ ತಿನ್ನುವುದು ಬಹಳ ಮುಖ್ಯ. ಇದಲ್ಲದೆ, ಆಸ್ಟ್ರೇಲಿಯಾದ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, ಬಾಳೆಹಣ್ಣುಗಳು ಜೀರ್ಣಕ್ರಿಯೆಗೆ ಸಂಬಂಧಿಸಿದ ಇರಿಟೆಬಲ್ ಬೊವೆಲ್ ಸಿಂಡ್ರೊಮ್ ಮತ್ತು ಕ್ರೋನ್ಸ್ ಕಾಯಿಲೆಯನ್ನು ತಡೆಯುತ್ತದೆ ಎನ್ನುತ್ತಾರೆ.
ಓದಿ: ದಿನಕ್ಕೆ 4 ಕಪ್‌ಗಿಂತ ಹೆಚ್ಚು ಕಾಫಿ ಕುಡಿಯುತ್ತಿದ್ದೀರಾ?, ಹಾಗಾದ್ರೆ ಅಪಾಯ ಕಟ್ಟಿಟ್ಟ ಬುತ್ತಿ!