ದಕ್ಷಿಣ ಚಿತ್ರರಂಗದ ಖ್ಯಾತ ನಟ ವಿಷ್ಣು ಮಂಚು ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ ಕಣ್ಣಪ್ಪ. ಸಿನಿಮಾಗೆ ಮುಖೇಶ್ ಕುಮಾರ್ ಸಿಂಗ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಬಿಗ್ ಬಜೆಟ್ ಚಿತ್ರದಲ್ಲಿ ದಕ್ಷಿಣದಿಂದ ಹಿಡಿದು ಉತ್ತರದವರೆಗೆ ಅನೇಕ ತಾರೆಯರು ನಟಿಸಿದ್ದಾರೆ. ಬಾಲಿವುಡ್ ಸ್ಟಾರ್ ನಟ ಅಕ್ಷರ್ ಕುಮಾರ್ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ನಡೆದ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ವಿಷ್ಣು ಮಂಚು ಅವರು ಅಕ್ಷಯ್ ಕುಮಾರ್ ಬಗ್ಗೆ ಆಸಕ್ತಿದಾಯಕ ಹೇಳಿಕೆಗಳನ್ನು ನಿಡಿದ್ದಾರೆ. ಶಿವನ ಬಗ್ಗೆ ಯೋಚಿಸಿದರೆ ಅಕ್ಷಯ್ ಕುಮಾರ್ ನೆನಪಾಗುತ್ತಾರೆ ಎಂದು ತಿಳಿಸಿದರು.
''ನಾನು ಮೋಹನ್ ಬಾಬು ಅವರ ಮಗ ಎಂದು ಹೇಳಿಕೊಳ್ಳಲು ಬಹಳ ಹೆಮ್ಮೆ ಪಡುತ್ತೇನೆ. ಅವರಿಲ್ಲದಿದ್ದರೆ ನಾನು ನಟನಾಗುತ್ತಿರಲಿಲ್ಲ. ಅವರ ಕಾರಣದಿಂದಾಗಿಯೇ ಅಕ್ಷಯ್ ಕುಮಾರ್ ಅವರೂ ಕೂಡಾ ಈ ಚಿತ್ರದಲ್ಲಿ ನಟಿಸಿದರು. ಶೂಟಿಂಗ್ ಸಮಯದಲ್ಲಿ ನಾನು ಅಕ್ಷಯ್ ಅವರಿಂದ ಅನೇಕ ಹೊಸ ವಿಷಯಗಳನ್ನು ಕಲಿತಿದ್ದೇನೆ. ಈ ಚಿತ್ರದಲ್ಲಿ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನೂರಕ್ಕೆ ನೂರರಷ್ಟು ಜೀವ ತುಂಬಿದ್ದಾರೆ. ಚಿತ್ರೀಕರಣ ಶುರುವಾದ ನಂತರ, ನನ್ನಲ್ಲಿ ಅನೇಕ ಬದಲಾವಣೆಗಳಾದವು. ಈ ಚಿತ್ರಕ್ಕಾಗಿ ಮೋಹನ್ ಲಾಲ್ ಹಾಗೂ ಪ್ರಭಾಸ್ ಎಲ್ಲರೂ ತುಂಬಾ ಕಷ್ಟಪಟ್ಟು ಕೆಲಸ ಮಾಡಿದರು. ಈ ಪೀಳಿಗೆಯಲ್ಲಿ, ಶಿವ ಎಂದ ತಕ್ಷಣ ಮನಸ್ಸಿಗೆ ಬರುವ ಮೊದಲ ಹೆಸರು ಅಕ್ಷಯ್ ಕುಮಾರ್" ಎಂದು ತಿಳಿಸಿದರು.
Mark your calendars! #Kannappa Teaser is dropping on March 1st! The journey of devotion and valor unfolds further. Are you ready? ⚔🔥#Kannappa🏹 #KannappaTeaser #HarHarMahadevॐ@themohanbabu @iVishnuManchu @Mohanlal #Prabhas @akshaykumar @realsarathkumar @MsKajalAggarwal… pic.twitter.com/b1mnQ6qjAr
— Kannappa The Movie (@kannappamovie) February 26, 2025
ಇದನ್ನೂ ಓದಿ: ಸಲ್ಮಾನ್ ಅಭಿನಯದ ಭರ್ಜರಿ 'ಸಿಕಂದರ್' ಟೀಸರ್ ರಿಲೀಸ್ : ಮತ್ತೊಂದು ಹಿಟ್ಗೆ ರಶ್ಮಿಕಾ ಮಂದಣ್ಣ ರೆಡಿ
'ಕಣ್ಣಪ್ಪ' ಚಿತ್ರದ ಆಫರ್ ಅನ್ನು ಎರಡು ಬಾರಿ ತಿರಸ್ಕರಿಸಿದ್ದಾಗಿ ಅಕ್ಷಯ್ ಕುಮಾರ್ ಬಹಿರಂಗಪಡಿಸಿದರು. ವಿಷ್ಣು ಮತ್ತು ಮೋಹನ್ ಬಾಬು ಹಲವು ಬಾರಿ ಕರೆ ಮಾಡಿದ್ದರು. ಆದರೆ ತಾವು ಕೆಲಸದಲ್ಲಿ ಬ್ಯುಸಿಯಾಗಿದ್ದ ಕಾರಣ ಮಾತನಾಡಲು ಸಾಧ್ಯವಾಗಲಿಲ್ಲ. ಇಬ್ಬರೂ ಕಚೇರಿಗೆ ಬಂದು ಒಟ್ಟಿಗೆ ಮಾತನಾಡಿದರು. ವಿಷ್ಣು ಅವರ ಮಾತಿನಲ್ಲಿ ಪ್ರಾಮಾಣಿಕತೆ ಇತ್ತೆಂದು ತಿಳಿಸಿದರು.
ಇದನ್ನೂ ಓದಿ: ರಜನಿಕಾಂತ್ ಮುಖ್ಯಭೂಮಿಕೆಯ 'ಕೂಲಿ' ಚಿತ್ರದಲ್ಲಿ ಮೈಬಳುಕಿಸಲಿರುವ ಪೂಜಾ ಹೆಗ್ಡೆ
ಚಿತ್ರದ ಟೀಸರ್ ಮಾರ್ಚ್ 1 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಚಿತ್ರದಲ್ಲಿ ಪ್ರೀತಿ ಮುಕುಂದನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರೆ, ಪ್ರಭಾಸ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೋಹನ್ ಬಾಬು, ಶರತ್ ಕುಮಾರ್, ಮೋಹನ್ ಲಾಲ್, ಅಕ್ಷಯ್ ಕುಮಾರ್ ಸೇರಿ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಹುನಿರೀಕ್ಷಿತ ಚಿತ್ರ ಏಪ್ರಿಲ್ 25 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.