ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಸಿಕಂದರ್'ನ ಟೀಸರ್ ಕೊನೆಗೂ ಅನಾವರಣಗೊಂಡಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಎ.ಆರ್.ಮುರುಗದಾಸ್ ನಿರ್ದೇಶನದ ಮತ್ತು ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ 'ಸಿಕಂದರ್' ಒಂದು ಆ್ಯಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಆಗಿದ್ದು, ಭಾಯ್ಜಾನ್ ಆ್ಯಕ್ಷನ್ ಅವತಾರದಲ್ಲಿ ಬಿಗ್ ಸ್ಕ್ರೀನ್ಗೆ ಮರಳುತ್ತಿದ್ದಾರೆ. ಟೀಸರ್ ಸಖತ್ ಸದ್ದು ಮಾಡುತ್ತಿದ್ದು, ಸಿನಿಮಾ ವೀಕ್ಷಿಸಲು ಪ್ರೇಕ್ಷಕರ ಕಾತರ ಹೆಚ್ಚಾಗಿದೆ.
ಟೀಸರ್ ಅಪರಾಧ ಜಗತ್ತಿನ ಒಂದು ನೋಟವನ್ನು ಒದಗಿಸಿದೆ. ನಾಯಕ ನಟ ಸಲ್ಮಾನ್ ಖಾನ್ ಅವರ ಸಿಕಂದರ್ ಪಾತ್ರವು ನಿಗೂಢವಾಗಿದ್ದು, ಎಂದಿನಂತೆ ಸ್ಕ್ರೀನ್ನಲ್ಲಿ ರಫ್ ಅಂಡ್ ಟಫ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆ್ಯಕ್ಷನ್-ಪ್ಯಾಕ್ಡ್ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಖಾನ್ ತಮ್ಮ ಮುಂದಿನ ಚಿತ್ರದಲ್ಲೂ ಆ್ಯಕ್ಷನ್ ಸನ್ನಿವೇಶಗಳಲ್ಲಿ ಘರ್ಜಿಸಲಿದ್ದಾರೆ.
ಛಾವಾ ಚಿತ್ರದ ಯಶಸ್ಸಿನಲೆಯಲ್ಲಿ ತೇಲುತ್ತಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಹಿಟ್ಗೆ ರೆಡಿಯಾಗುತ್ತಿರುವಂತೆ ತೋರುತ್ತಿದೆ. ಇದೇ ಮೊದಲ ಬಾರಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಂಡಿದ್ದು, ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಿನಿಮಾ ಇದೇ ಈದ್ಗೆ ಚಿತ್ರಮಂದಿರ ಪ್ರವೇಶಿಸಲಿದೆ.
ಎ.ಆರ್. ಮುರುಗದಾಸ್ ಅವರ ನಿರ್ದೇಶನ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಸಾಹಸ ಸನ್ನಿವೇಶಗಳ ಸಂಯೋಜನೆಯು ನೋಡುಗರ ಗಮನ ಸೆಳೆದಿದೆ. ಇದು ಹೈ-ಆ್ಯಕ್ಷನ್ ಥ್ರಿಲ್ಲರ್‌ಗಳನ್ನು ಇಷ್ಟಪಡುವವರಿಗೆ ಒಂದು ರೀತಿಯ ರಸದೌತಣ ಉಣಬಡಿಸಲಿದೆ. ಅದಾಗ್ಯೂ, ಟೀಸರ್ ಕಥಾವಸ್ತುವನ್ನು ಬಿಟ್ಟುಕೊಟ್ಟಿಲ್ಲ. ಟೀಸರ್ ವೀಕ್ಷಿಸಿದವರು ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಊಹಾಪೋಹಗಳು ಶುರುವಾಗಿವೆ.
ಇದನ್ನೂ ಓದಿ: 'ನೀ ಯಾರು ನನಗೆ? ಉತ್ತರ ಬೇಕಾಗಿದೆ ಜನರಿಗೆ': ದಿವ್ಯಾ ಉರುಡುಗ ಅರವಿಂದ್ ಜೋಡಿಯದ್ದು ಸ್ನೇಹವೋ, ಪ್ರೀತಿಯೋ
ಮಾರ್ಚ್ 28ರಂದು 'ಸಿಕಂದರ್' ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಸಲ್ಮಾನ್ ಖಾನ್ ಅವರ ಸ್ಟಾರ್ ಪವರ್ ಮತ್ತು ಎ. ಆರ್. ಮುರುಗದಾಸ್ ನಿರ್ದೇಶನದ ಕಾಂಬಿನೇಷನ್ 2025ರ ಸೂಪರ್ ಹಿಟ್ ಸಿನಿಮಾ ನಿರೀಕ್ಷೆ ಇದೆ.
ಇದನ್ನೂ ಓದಿ: ರಜನಿಕಾಂತ್ ಮುಖ್ಯಭೂಮಿಕೆಯ 'ಕೂಲಿ' ಚಿತ್ರದಲ್ಲಿ ಮೈಬಳುಕಿಸಲಿರುವ ಪೂಜಾ ಹೆಗ್ಡೆ
ಯಶಸ್ಸಿನಾದಿಯಲ್ಲಿ ರಶ್ಮಿಕಾ ಮಂದಣ್ಣ : ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ವೃತ್ತಿಜೀವನ ಆರಂಭಿಸಿ, ಸದ್ಯ ಭಾರತೀಯ ಚಿತ್ರರಂಗದಲ್ಲಿರುವ ತಮ್ಮದೇ ಆದ ಛಾಪು ಮೂಡಿಸಿರುವ ರಶ್ಮಿಕಾ ಮಂದಣ್ಣ ಬಿಗ್ ಸ್ಟಾರ್ಸ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿರೋದು ಹೆಮ್ಮೆಯ ವಿಷಯ. ಇತ್ತೀಚೆಗಷ್ಟೇ ತೆರೆಕಂಡಿರುವ 'ಛಾವಾ' ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದೆ. ಫೆಬ್ರವರಿ 14ರಂದು ಬಿಡುಗಡೆ ಆಗಿರುವ ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದು, ಎರಡು ವಾರದೊಳಗೆ ಭಾರತದಲ್ಲಿ 386 ಕೋಟಿ ರೂಪಾಯಿ ಸಂಗ್ರಹಿಸಿದೆ. 2024ರ ಡಿಸೆಂಬರ್ನಲ್ಲಿ ಬಿಡುಗಡೆ ಆದ 'ಪುಷ್ಪ 2: ದಿ ರೂಲ್' ಕೂಡಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ತೆರೆ ಹಂಚಿಕೊಂಡಿದ್ದರು. ಅದಕ್ಕೂ ಮುನ್ನ ಬಾಲಿವುಡ್ ಸ್ಟಾರ್ ಹೀರೋ ರಣ್ಬೀರ್ ಕಪೂರ್ ಜೊತೆ ನಟಿಸಿದ ಅನಿಮಲ್ ಚಿತ್ರ ಕೂಡಾ ಅಭೂತಪೂರ್ವ ಯಶಸ್ಸು ಕಂಡಿತ್ತು. ಇದೀಗ ಸಿಕಂದರ್ನ ಸರದಿ.