ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಪುಷ್ಪ 1: ದಿ ರೈಸ್' ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹೊತ್ತಲ್ಲಿ 'ಪುಷ್ಪ 3' (Pushpa 3: The Rampage) ಬರಲಿದೆ ಎಂಬ ವಿಷಯ ಹೊರಬಿದ್ದಿದ್ದು, ಪುಷ್ಪ ಸೀಕ್ವೆಲ್ ಸುತ್ತಲಿನ ಉತ್ಸಾಹ ದುಪ್ಪಟ್ಟಾಗಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಪ್ರಮುಖ ಪಾತ್ರ ನಿರ್ವಹಿಸಿರುವ 'ಪುಷ್ಪ 2: ದಿ ರೂಲ್' ಡಿಸೆಂಬರ್ 5ರಂದು ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಆದರೆ ಅಭಿಮಾನಿಗಳು ಈಗಲೇ ಪುಷ್ಪನ ಮುಂದಿನ ಅಧ್ಯಾಯದ ಬಗ್ಗೆ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಡಿಸೆಂಬರ್ 3, ಇಂದು ಆಸ್ಕರ್ ಪ್ರಶಸ್ತಿ ವಿಜೇತ ಸೌಂಡ್ ಡಿಸೈನರ್ ರೆಸುಲ್ ಪೂಕುಟ್ಟಿ ( Resul Pookutty) ಚಿತ್ರದ ಶೀರ್ಷಿಕೆಯನ್ನೊಳಗೊಂಡ ತಂಡ ಫೋಟೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಹಿನ್ನೆಲೆ, ಸಿನಿಮಾ ಸಖತ್ ಸದ್ದು ಮಾಡುತ್ತಿದೆ.
'ಪುಷ್ಪ 3: ದಿ ರಾಂಪೇಜ್' ಅನ್ನು ಪ್ರದರ್ಶಿಸುವ ಸ್ಕ್ರೀನ್ ಎದುರು ಸಿಬ್ಬಂದಿಯನ್ನೊಳಗೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶರವೇಗದಲ್ಲಿ ವೈರಲ್ ಆಯಿತು. ಶೀರ್ಷಿಕೆ ಕಂಡ ಹಿನ್ನೆಲೆಯಲ್ಲಿ ಪುಷ್ಪ ಫ್ರ್ಯಾಂಚೈಸ್‌ನ ಮುಂದಿನ ಭಾಗಗಳ ಬಗೆಗಿನ ಊಹಾಪೋಹಗಳು ಉಲ್ಭಣಗೊಂಡಿವೆ. ಅಲ್ಲು ಅರ್ಜುನ್ ತಮ್ಮ ಐಕಾನಿಕ್ ಪಾತ್ರ ಪುಷ್ಪರಾಜ್ನೊಂದಿಗೆ ಮತ್ತೊಂದು ಆ್ಯಕ್ಷನ್-ಪ್ಯಾಕ್ಡ್ ಜರ್ನಿಗಾಗಿ ಮರಳಲು ಸಜ್ಜಾಗುತ್ತಿದ್ದು, ಈ ಹೊಸ ಪೋಸ್ಟ್ ಸಾಕಷ್ಟು ಸದ್ದು ಮಾಡುತ್ತಿದೆ. ಪುಷ್ಪ ವಿಶ್ವಕ್ಕೆ ವಿಜಯ್ ದೇವರಕೊಂಡ ಅವರ ಸಂಭಾವ್ಯ ಸೇರ್ಪಡೆ ಬಗ್ಗೆ ಅಭಿಮಾನಿಗಳು ಸರ್ಪ್ರೈಸ್ ಆಗಿದ್ದಾರೆ.
#Pushpa3 CONFIRMED✅ pic.twitter.com/aBdMnp1g24
— Manobala Vijayabalan (@ManobalaV) December 3, 2024
ಇದನ್ನೂ ಓದಿ: ಐಶ್ವರ್ಯಾಗೆ ಹಾಗಲಕಾಯಿ ತಿನ್ನೋ ಶಿಕ್ಷೆ ಕೊಟ್ಟ ಶಿಶಿರ್: ಸ್ನೇಹಿತೆಯ ಪರಿಸ್ಥಿತಿ ಕಂಡು ಕಣ್ಣೀರು
ನಿರ್ದೇಶಕ ಸುಕುಮಾರ್ ಅವರ ಜನ್ಮದಿನದಂದು ಶುಭ ಹಾರೈಸಿದ್ದ ದೇವರಕೊಂಡ ಅವರು 'ಪುಷ್ಪ 3: ದಿ ರಾಂಪೇಜ್' ಶೀರ್ಷಿಕೆಯ ಬಗ್ಗೆ ಸುಳಿವು ನೀಡಿದ್ದರು. ಅಭಿಮಾನಿಗಳು 2022ರ X ಪೋಸ್ಟ್ ಅನ್ನು ಹುಡುಕಿ ಇದೀಗ ವೈರಲ್ ಮಾಡಿದ ಹಿನ್ನೆಲೆಯಲ್ಲಿ ಊಹಾಪೋಹಗಳು ಜೋರಾಗಿವೆ. "2021 - ದಿ ರೈಸ್. 2022 - ದಿ ರೂಲ್. 2023 - ದಿ ರಾಂಪೇಜ್" ಎಂದು ಆ ಪೋಸ್ಟ್ನಲ್ಲಿ ಬರೆಯಲಾಗಿದ್ದು, ಮೂರನೇ ಭಾಗದಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಮಾತುಗಳಾಗುತ್ತಿವೆ.
Bhai About #PUSHPA3
— 🦅GHANI BHAI بهاي🦁 (@BheemlaBoy1) February 18, 2024
APRIL-8TH Next Project Announcement!📣📣📣🥵🥵#Pushpa2TheRule @AlluArjun pic.twitter.com/W50HIJuqEK
ಇದನ್ನೂ ಓದಿ: 'ಛತ್ರಪತಿ ಶಿವಾಜಿ ಮಹಾರಾಜ'ರಾಗಿ ಡಿವೈನ್ ಸ್ಟಾರ್: ರಿಷಬ್ ಶೆಟ್ಟಿ ಹೊಸ ಸಿನಿಮಾದ ರಿಲೀಸ್ ಡೇಟ್ ರಿವೀಲ್
ಅಲ್ಲದೇ, ಪುಷ್ಪ 2 ಬಿಡುಗಡೆಗೂ ಮುನ್ನ ವಿಜಯ್ ದೇವರಕೊಂಡ ಇತ್ತೀಚೆಗೆ ಅಲ್ಲು ಅರ್ಜುನ್ ಅವರಿಗೆ ತಮ್ಮ ಕ್ಲಾಥಿಂಗ್ ಲೈನ್ 'Rwdy' ಯಿಂದ ಎರಡು ಕಸ್ಟಮೈಸ್ಡ್ ಪುಷ್ಪ ಟೀ ಶರ್ಟ್‌ಗಳನ್ನು ಕಳುಹಿಸಿದ್ದರು. ಇಬ್ಬರು ಸ್ಟಾರ್ ನಟರ ನಡುವಿನ ಈ ಒಡನಾಟ ಮುಂದಿನ ಭಾಗದಲ್ಲಿ ದೇವರಕೊಂಡ ಮಹತ್ವದ ಪಾತ್ರ ವಹಿಸಬಹುದೆಂಬ ಊಹಾಪೋಹವನ್ನು ಮತ್ತಷ್ಟು ಹೆಚ್ಚಿಸಿದೆ. ಯಾವುದೇ ಅಧಿಕೃತ ದೃಢೀಕರಣ ಹೊರಬಿದ್ದಿಲ್ಲವಾದರೂ, ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚುತ್ತಿರುವ ಸದ್ದು ಮತ್ತು ದೇವರಕೊಂಡ ಅವರ ರಹಸ್ಯ ಪೋಸ್ಟ್ ಪುಷ್ಪಾ 3ರಲ್ಲಿ ಅವರ ಸಂಭವನೀಯ ಪಾತ್ರದ ಬಗ್ಗೆ ಸುಳಿವು ನೀಡಿದೆ.
Vijay Deverakonda in #Pushpa3. pic.twitter.com/Ou2l2p4drb
— Manobala Vijayabalan (@ManobalaV) December 3, 2024