ETV Bharat / entertainment

ಸಿನಿಮಾ ಚಿತ್ರೀಕರಣದ ವೇಳೆ ಲೈಟ್ ಬಾಯ್ ಸಾವು; ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ FIR - FIR Against Yogaraj Bhat

author img

By ETV Bharat Entertainment Team

Published : Sep 6, 2024, 12:24 PM IST

Updated : Sep 6, 2024, 1:14 PM IST

ಸಿನಿಮಾ ಶೂಟಿಂಗ್​ ವೇಳೆ ಲೈಟ್‌ಬಾಯ್ ಮೃತಪಟ್ಟ ಹಿನ್ನೆಲೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

FIR Against Yogaraj Bhat
ನಿರ್ದೇಶಕ ಯೋಗರಾಜ್ ಭಟ್ ಹಾಗು ಮೃತಪಟ್ಟ ಲೈಟ್‌ಬಾಯ್‌ ಮೋಹನ್ ಕುಮಾರ್ (ETV Bharat)

ನೆಲಮಂಗಲ(ಬೆಂಗಳೂರು): 'ಮನದ ಕಡಲು' ಸಿನಿಮಾ ಚಿತ್ರೀಕರಣದ ವೇಳೆ ಅಂದಾಜು 30 ಅಡಿ ಎತ್ತರದ ಏಣಿಯಿಂದ ಬಿದ್ದು ಲೈಟ್ ಬಾಯ್ ಸಾವನ್ನಪ್ಪಿದ್ದು, ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ಮೋಹನ್ ಕುಮಾರ್ (30) ಮೃತಪಟ್ಟ ಲೈಟ್ ಬಾಯ್. ನೆಲಮಂಗಲ ಬಳಿಯ ಅಡಕಮಾರನಹಳ್ಳಿ ಸಮೀಪದ ವಿಆರ್‌ಎಲ್‌ ಅರೇನಾ ಸಮೀಪ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ.

ಮೋಹನ್ ಕುಮಾರ್ ಮತ್ತು ಸಹೋದರ ಬೆಂಗಳೂರು ನಗರದ ಬಡಾವಣೆಯೊಂದರಲ್ಲಿ ನೆಲೆಸಿದ್ದರು. ಚಿತ್ರರಂಗದಲ್ಲಿ ಇಬ್ಬರೂ ಲೈಟ್ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಚಿತ್ರೀಕರಣದ ವೇಳೆ ಏಣಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ ಸಂಜೆ ಮೋಹನ್ ಕುಮಾರ್ ಮೃತಪಟ್ಟಿದ್ದಾರೆ.

ಇದನ್ನೂ ಓದಿ: 'ಫೈರ್'​ ಕಮಿಟಿಯಿಂದ ಕೇವಲ ನಟಿಯರಿಗಲ್ಲ, ನಟರಿಗೂ ಸಹಾಯ: ಸಂಗೀತಾ ಭಟ್ - FIRE Committee

ಚಿತ್ರೀಕರಣದ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ ಆರೋಪದಡಿ ನಿರ್ದೇಶಕ ಯೋಗರಾಜ್ ಭಟ್‌, ವ್ಯವಸ್ಥಾಪಕ ಸುರೇಶ್ ಸೇರಿ ಮೂವರ ವಿರುದ್ಧ ಪೊಲೀಸರು ಎಫ್‌ಐಆ‌ರ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್​ ಭೇಟಿಯಾದ ವಿಜಯಲಕ್ಷ್ಮಿ: ಜೈಲು ಮುಂದೆ ಮಹಿಳಾ ಅಭಿಮಾನಿಯ ಹೈಡ್ರಾಮಾ - Vijayalakshmi met Darshan

ಯೋಗರಾಜ್ ಭಟ್ ನಿರ್ದೇಶನದ ಈ 'ಮನದ ಕಡಲು' ಚಿತ್ರವನ್ನು ಮಳೆ 2 ಸಿನಿಮಾದ ನಿರ್ಮಾಪಕ ಗಂಗಾಧರ್ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಹೊಸ ನಾಯಕಿಯನ್ನು ಆಯ್ಕೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಇನ್ನಷ್ಟೇ ಕೊಡಬೇಕಿದೆ.

Last Updated : Sep 6, 2024, 1:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.