ETV Bharat / entertainment

ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಡಬ್ಬಿಂಗ್​ ಪೂರ್ಣ: ಬಿಡುಗಡೆಗೆ ಸಿದ್ಧತೆ - Martin dubbing

ಬಹುನಿರೀಕ್ಷಿತ ಮಾರ್ಟಿನ್ ಚಿತ್ರದ 'ಡಬ್ಬಿಂಗ್' ಪೂರ್ಣಗೊಂಡಿದ್ದು ಬಿಡುಗಡೆಗೆ ಸಜ್ಜಾಗುತ್ತಿದೆ.

Martin movie
'ಮಾರ್ಟಿನ್' ಡಬ್ಬಿಂಗ್​ ಪೂರ್ಣ
author img

By ETV Bharat Karnataka Team

Published : Mar 20, 2024, 7:48 PM IST

'ಪೊಗರು' ಸಿನಿಮಾ ಬಳಿಕ ಆ್ಯಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಬಣ್ಣ ಹಚ್ಚಿರುವ ಬಹುನಿರೀಕ್ಷಿತ ಚಿತ್ರ 'ಮಾರ್ಟಿನ್'. ಟೈಟಲ್ ಜೊತೆಗೆ ಟೀಸರ್​ನಿಂದಲೇ ಸೌತ್ ಸಿನಿರಂಗದಲ್ಲಿ ಕ್ರೇಜ್ ಹುಟ್ಟಿಸಿರೋ ''ಮಾರ್ಟಿನ್'' ಬಗ್ಗೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಎ.ಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಇಷ್ಟೊತ್ತಿಗಾಗಲೇ ತೆರೆ ಮೇಲೆ ಅಬ್ಬರಿಸಬೇಕಿತ್ತು. ಆದರೆ, ಕೆಲ ಟೆಕ್ನಿಕಲ್ ಕಾರಣಗಳಿಂದ ಮಾರ್ಟಿನ್ ಚಿತ್ರ ಬಿಡುಗಡೆ ತಡವಾಗಿದೆ. ಲೇಟ್ ಆದ್ರೂ ಲೇಟೆಸ್ಟ್ ಆಗಿ ಬರುತ್ತೇವೆ ಎಂದು ಚಿತ್ರತಂಡ ತಿಳಿಸಿದೆ. ಬಹುತೇಕ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಮಾರ್ಟಿನ್ ಚಿತ್ರದ 'ಡಬ್ಬಿಂಗ್' ಪೂರ್ಣಗೊಂಡಿದ್ದು, ಬಿಡುಗಡೆ ಸಜ್ಜಾಗುತ್ತಿದೆ.

ನಿರ್ದೇಶಕ ಎ.ಪಿ ಅರ್ಜುನ್, ಮಾರ್ಟಿನ್ ಔಟ್ ಅಂಡ್ ಔಟ್ ಸಾಹಸಮಯ ಚಿತ್ರ ಎಂದು ತಿಳಿಸಿದ್ದರು. ಇದರಲ್ಲಿ ನಮ್ಮ ದೇಶ ಪ್ರೇಮ, ಒಂದು ಮುದ್ದಾದ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಸ್ಟೋರಿ ಇರಲಿದೆ. ಈ ಮಾತಿನಂತೆ ಸದ್ಯ ರಿವೀಲ್ ಆಗಿರುವ ಪೋಸ್ಟರ್​ಗಳನ್ನು ನೋಡುತ್ತಿದ್ದರೆ, ಮಾರ್ಟಿನ್​ ಚಿತ್ರದಲ್ಲಿ ಧ್ರುವ ಸರ್ಜಾ ದೇಶ ಕಾಯುವ ರಕ್ಷಕ ಅನ್ನೋದು ಗೊತ್ತಾಗುತ್ತದೆ. ಅಲ್ಲದೇ ಧ್ರುವ ಎಡಗೈ ತೋಳಿನ ಮೇಲೆ 'ಇಂಡಿಯಾ' ಎಂದು ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ. ಕೆ.ಎಂ 232 ಹೆಸರಿನ ಮಿಷನ್ ಗನ್ ಹಿಡಿದು ಶತ್ರುಗಳನ್ನು ಸಂಹಾರ ಮಾಡುವ ಚಿತ್ರ ಸಖತ್​ ವೈರಲ್​ ಆಗಿ, ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

Martin movie
'ಮಾರ್ಟಿನ್' ಡಬ್ಬಿಂಗ್​ ಪೂರ್ಣ

ಚಿತ್ರದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ಜಾರ್ಜಿಯ ಆಂಡ್ರಿಯಾನಿ, ಚಿಕ್ಕಣ್ಣ, ಮಾಳವಿಕ ಅವಿನಾಶ್, ನಿಕ್ತಿನ್ ಧೀರ್, ನವಾಬ್ ಶಾ, ರೋಹಿತ್ ಪಾಠಕ್ ಸೇರಿದಂತೆ ಹಲವರಿದ್ದಾರೆ. ಚಿತ್ರೀಕರಣದ ವಿಚಾರದಲ್ಲೂ ಮಾರ್ಟಿನ್ ಎಲ್ಲರ ಹುಬ್ಬೇರಿಸಿದೆ. ಒಟ್ಟು 240 ದಿನಗಳ ಚಿತ್ರೀಕರಣ ನಡೆದಿದೆ. ಇನ್ನು, ಚಿತ್ರದ ಆಡಿಯೋ ಹಕ್ಕನ್ನು ಅಧಿಕ ಮೊತ್ತ ನೀಡಿ ಜನಪ್ರಿಯ ಆಡಿಯೋ ಸಂಸ್ಥೆಯಾದ "ಸರಿಗಮಪ" ಪಡೆದುಕೊಂಡಿದೆ. ಮಣಿ ಶರ್ಮಾ ಅವರ ಸಂಗೀತ ನಿರ್ದೇಶನದಲ್ಲಿ ಎಲ್ಲಾ ಹಾಡುಗಳು ಮೂಡಿಬಂದಿವೆ.

ಬೆಂಗಳೂರು, ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ''ಮಾರ್ಟಿನ್'' ಚಿತ್ರೀಕರಣ ನಡೆಸಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದಲ್ಲಿರಲಿವೆ. ಮಾರ್ಟಿನ್ ಚಿತ್ರದ ಕ್ಲೈಮ್ಯಾಕ್ಸ್‌ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮಾ ಹಾಗೂ ರಾಮ್‌ ಲಕ್ಷ್ಮಣ್‌ ಕಂಪೋಸ್‌ ಮಾಡಿದ್ದಾರೆ.

ಇದನ್ನೂ ಓದಿ: ಮುಂದಿನ ತಿಂಗಳು 'ಕಾಂತಾರ ಪ್ರೀಕ್ವೆಲ್'​​ ಶೂಟಿಂಗ್​ ಶುರು: ಅದ್ಧೂರಿ ಸೆಟ್​ ನಿರ್ಮಾಣ

ರವಿ ಬಸ್ರೂರ್ ಈ ಚಿತ್ರತಂಡದ ಜೊತೆ ಕೈ ಜೋಡಿಸಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಮಹೇಶ್‌ರೆಡ್ಡಿ ಅವರ ಸಂಕಲನ ಚಿತ್ರಕ್ಕಿದೆ. ಉದಯ್ ಮೆಹ್ತಾ ಮಾರ್ಟಿನ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ಮಾಪಕ ಉದಯ್ ಮೆಹ್ತಾ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಮಾರ್ಟಿನ್​ ಚಿತ್ರ ಎಂದು ತೆರೆ ಕಾಣಲಿದೆ ಎಂಬುದನ್ನು ಚಿತ್ರತಂಡ ಶೀಘ್ರದಲ್ಲೇ ಬಹಿರಂಗಪಡಿಸಲಿದೆ.

ಇದನ್ನೂ ಓದಿ: ಮಾ.26ಕ್ಕೆ 'ಮಗಧೀರ' ಮರು ಬಿಡುಗಡೆ: ರಾಮ್​ ಚರಣ್​​ ಫ್ಯಾನ್ಸ್​​​ಗೆ ಸ್ಪೆಷಲ್​ ಗಿಫ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.