ETV Bharat / entertainment

ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದ 'ಚಂದು ಚಾಂಪಿಯನ್'; ನಟ ಕಾರ್ತಿಕ್​ ಸಿನಿಮಾಗೆ ನೀರಸ ಪ್ರತಿಕ್ರಿಯೆ - Chandu Champion Box Office

Chandu Champion Box Office Collection Day: ಭಾರತದ ಮೊದಲ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮುರಳಿಕಾಂತ್ ಪೇಟ್ಕರ್ ಅವರ ಜೀವನ ಕಥೆ ಆಧರಿಸಿದ ಕಥೆ ಚಂದು ಚಾಂಪಿಯನ್​.

chandu-champion-box-office-collection-day-1-early-prediction-hints-at-disappointing-trend-for-kartik-aaryan-starrer
ದು ಚಾಂಪಿಯನ್ (ಈಟಿವಿ ಭಾರತ್​)
author img

By ETV Bharat Karnataka Team

Published : Jun 15, 2024, 12:07 PM IST

ಹೈದರಾಬಾದ್​: ನಟ ಕಾರ್ತಿಕ್​ ಆರ್ಯನ್​ ದೈಹಿಕ ರೂಪಾಂತರಕ್ಕೆ ಒಳಗಾದ ಚಿತ್ರ 'ಚಂದು ಚಾಂಪಿಯನ್​'. ಚಿತ್ರ ವಿಮರ್ಶಕರಿಂದ ಸಿನಿಮಾ ಉತ್ತಮ ಹೆಸರು ಪಡೆದರೂ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಿನಿಮಾ ಹಿಂದೆ ಬಿದ್ದಿದೆ. ಇದರಿಂದ ಚಿತ್ರದ ಆರಂಭಕ್ಕೆ ಪ್ರತಿಕ್ರಿಯೆ ಕೂಡ ನೀರಸವಾಗಿದೆ.

ಭಾರತದ ಮೊದಲ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮುರಳಿಕಾಂತ್ ಪೇಟ್ಕರ್ ಅವರ ಜೀವನವನ್ನು ಆಧರಿಸಿದ ಕ್ರೀಡಾ ಬಯೋಪಿಕ್ ಚಿತ್ರಕ್ಕೆ ಕಬೀರ್​ ಖಾನ್​ ನಿರ್ದೇಶನವಿದೆ. 'ಭಜರಂಗಿ ಭಾಯಿಜಾನ್' ಮತ್ತು 'ಏಕ್ ಥಾ ಟೈಗರ್‌' ಇವರ ಸೂಪರ್ ಹಿಟ್​ ಸಿನಿಮಾ ಆಗಿದ್ದು, 'ಟ್ಯೂಬ್‌ಲೈಟ್' ಮತ್ತು ಭಾರತ ಮೊದಲ ಕ್ರಿಕೆಟ್​ ವಿಶ್ವಕಪ್ ಗೆದ್ದ ಕಥೆಯಾಧರಿತ ಚಿತ್ರ 83 ಉತ್ತಮ ಪ್ರದರ್ಶನ ಕಂಡಿತ್ತು. ಸ್ಪೂರ್ತಿಧಾಯಕ ಕಥೆಗಳ ಮೂಲಕ ಜನರನ್ನು ಮನರಂಜಿಸುತ್ತಿರುವ ಈ ನಿರ್ದೇಶಕರ ಚಿತ್ರ ಚಂದು ಚಾಂಪಿಯನ್​ ಇದೀಗ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿಲ್ಲ.

ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್ಕ್ ಪ್ರಕಾರ, 'ಚಂದು ಚಾಂಪಿಯನ್​' ಚಿತ್ರ ತೆರೆಕಂಡ ದಿನ ಸಿನಿಮಾ ಕೇವಲ 4.75 ಕೋಟಿ ಸಂಪಾದಿಸಿದೆ. ನಟ ಕಾರ್ತಿಕ್​ ಆರ್ಯನ್​ ಅವರ ವೃತ್ತಿ ಜೀವನದಲ್ಲಿ 2015ರಲ್ಲಿ 'ಪ್ಯಾರ್​​ ಕಾ ಪಂಚ್​​ನಾಮ್​ 2', ಬಳಿಕ ಅತಿ ಕಡಿಮೆ ಓಪನಿಂಗ್​ ಕಂಡ ಚಿತ್ರ ಇದಾಗಿದೆ. ಕಳೆದ ವರ್ಷ ನಟ ಕಾರ್ತಿಕ್​ ಆರ್ಯನ್​ ನಟನೆಯ 'ಸತ್ಯ ಪ್ರೇಮ್​ ಕೀ ಕಥಾ' 8.25 ಕೋಟಿಯನ್ನು ಮೊದಲ ದಿನವೇ ಗಳಿಕೆ ಮಾಡಿತ್ತು. ಇನ್ನು ಕೋವಿಡ್​ಗೆ ಮುನ್ನ ಬಿಡುಗಡೆಯಾಗಿದ್ದ, ಭೂಲ್​ ಭುಲಯ್ಯ 2 ಚಿತ್ರ 14.11 ಕೋಟಿಯನ್ನು ಮೊದಲ ದಿನ ಗಳಿಸುವ ಮೂಲಕ ಒಟ್ಟಾರೆ 265.5 ಕೋಟಿ ಬಾಚಿ ಕೊಂಡಿತ್ತು.

'ಚಂದು ಚಾಂಪಿಯನ್'​ ಚಿತ್ರಕ್ಕೆ ಟಿಕೆಟ್​ ದರ ಶುಕ್ರವಾರ 150 ರೂ ನಿಗದಿ ಮಾಡಿದ್ದರೂ , ಚಿತ್ರ ಮಂದಿರ ಭರ್ತಿ ಕೇವಲ 16.84 ರಷ್ಟಾಗಿದೆ. ಮುಂಬೈನಲ್ಲಿ 723 ಶೋಗಳು ಆಯೋಜಿಸಿದ್ದು, ಒಟ್ಟಾರೆ, ಭರ್ತಿ 19.25 ಆಗಿದೆ. ದೆಹಲಿ ಮತ್ತು ಎನ್​ಸಿಆರ್​ನಲ್ಲಿ 870 ಶೋ ಪ್ರದರ್ಶನವಾಗಿದ್ದು, 19.50 ಭರ್ತಿ ಆಗಿದೆ.

ಕಬೀರ್​ ಖಾನ್​ ಅವರ ಚಂದು ಚಾಂಪಿಯನ್​ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ನಿರಾಸೆಗೊಳಿಸಿದೆ. ಕಬೀರ್​ ನಿರ್ದೇಶನದ, ರಣವೀರ್​ ಸಿಂಗ್​ ಅಭಿನಯದ '83' ಚಿತ್ರ 12.64 ಕೋಟಿಯನ್ನು ಗಳಿಸುವ ಮೂಲಕ ಚಿತ್ರ ಪ್ರದರ್ಶನ ಆರಂಭಗೊಂಡಿತು. ಜಾಗತಿಕಮಟ್ಟದಲ್ಲಿ ಚಿತ್ರ 193 ಕೋಟಿ ಗಳಿಸಿತ್ತು. ಇದಕ್ಕೆ ಮುನ್ನ ಬಿಡುಗಡೆಯಾಗಿದ್ದ ಸಲ್ಮಾನ್​ ಖಾನ್​ ಅಭಿನಯದ ಭಜರಂಗಿ ಭಾಯ್​ಜಾನ್​, ಎಕ್​ ಥಾ ಟೈಗರ್​, ಟ್ಯೂಬ್​ಲೈಟ್​ ಗಲ್ಲಾ ಪೆಟ್ಟಿಗೆಯಲ್ಲಿ ಸೌಂಡ್​ ಮಾಡಿದ್ದವು.

ಅತಿ ಪ್ರಚಾರದ ಕೊರತೆ, ಜೊತೆಗೆ ಸೂಪರ್​ ಥ್ರಿಲ್ಲರ್​ 'ಮುಂಜ್ಯಾ' ಸಿನಿಮಾದ ಸ್ಪರ್ಧೆಯೊಂದಿಗೆ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿದೆ. ಬಿಡುಗಡೆಯಾಗಿ 8 ದಿನದ ಬಳಿಕವೂ ಮುಂಜ್ಯಾ ಅಂದಾಜು ಕೋಟಿ ಗಳಿಸಿದೆ. ಸೀಮಿತ ಪ್ರಚಾರ ಮತ್ತು ಪ್ರಮುಖ ತಾರೆಯರಿಲ್ಲದೇ 'ಮುಂಜ್ಯಾ', 4 ಕೋಟಿ ಗಳಿಕೆಯೊಂದಿಗೆ ಪ್ರಬಲ ಆರಂಭಿಕ ದಿನವನ್ನು ಹೊಂದಿದ್ದರು.

ಇದನ್ನೂ ಓದಿ: ಅಲ್ಲು ಅರ್ಜುನ್​ನನ್ನು ಅನ್​ಫಾಲೋ ಮಾಡಿದ ಸಾಯಿ ಧರಂ ತೇಜ್​​: ಈ ಬಗ್ಗೆ ನಿಹಾರಿಕಾ ಹೇಳಿದ್ದಿಷ್ಟು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.