ETV Bharat / entertainment

ಅನಧಿಕೃತವಾಗಿ ಸೆಟ್ ನಿರ್ಮಾಣ ಆರೋಪ:​ ಯಶ್ 'ಟಾಕ್ಸಿಕ್' ನಿರ್ಮಾಣ ಸಂಸ್ಥೆಗೆ​​ ಹೈಕೋರ್ಟ್ ನೋಟಿಸ್​​ - Toxic Set Issue

author img

By ETV Bharat Karnataka Team

Published : Jul 27, 2024, 3:58 PM IST

ಯಶ್​ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ ''ಟಾಕ್ಸಿಕ್''ಗೆ ಕಾನೂನು ಸಂಕಷ್ಟ ಎದುರಾಗಿದೆ.

Rocking star Yash
ರಾಕಿಂಗ್ ಸ್ಟಾರ್ ಯಶ್​ (ETV Bharat)
ಈಟಿವಿ ಭಾರತದ ಜೊತೆ ವಕೀಲ ಜಿ. ಬಾಲಾಜಿ ಪ್ತತಿಕ್ರಿಯೆ (ETV Bharat)

''ಟಾಕ್ಸಿಕ್'', ರಾಕಿಂಗ್ ಸ್ಟಾರ್ ಯಶ್​ ಮುಖ್ಯಭೂಮಿಕೆಯ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾ. ಕೆಜಿಎಫ್ 2 ನಂತರ ಹಾಗೂ 2 ವರ್ಷಗಳ ಬ್ರೇಕ್​​​ ಬಳಿಕ ಅಭಿನಯಿಸುತ್ತಿರುವ ಚಿತ್ರ. ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದ ಹಾಗೂ ಕನ್ನಡದ ಪತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಬಹುನಿರೀಕ್ಷಿತ ಚಿತ್ರಕ್ಕೀಗ ಸಂಕಷ್ಟ ಎದುರಾಗಿದೆ.

ಹೈಕೋರ್ಟ್ ನೋಟಿಸ್: ಸಿನಿಮಾ ಸೆಟ್ ಸಂಬಂಧ ನಿರ್ಮಾಣ ಸಂಸ್ಥೆಗೆ ಹೈಕೋರ್ಟ್ ನೋಟಿಸ್ ನೀಡಿದೆ. ಅರಣ್ಯ ಭೂಮಿಯಲ್ಲಿ 'ಟಾಕ್ಸಿಕ್' ತಂಡ ದೊಡ್ಡ ಮಟ್ಟದ ಸೆಟ್​​ ಹಾಕುತ್ತಿರುವುದಾಗಿ ಆರೋಪಿಸಿ ವಕೀಲರಾದ ಜಿ. ಬಾಲಾಜಿ ಅವರು ಪಿಐಎಲ್ ಸಲ್ಲಿಸಿದ್ದರು. ಜೊತೆಗೆ ಸೆಟ್ ಅನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಈ ಪಿಐಎಲ್‌ ಸಂಬಂಧ ಹೈಕೋರ್ಟ್ ಕೆವಿಎನ್‌ ಸಂಸ್ಥೆ ಹಾಗೂ ಹೆಚ್​ಎಂಟಿ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.

Toxic set
ಟಾಕ್ಸಿಕ್​​ ಸಿನಿಮಾಗಾಗಿ ನಿರ್ಮಾಣಗೊಳ್ಳುತ್ತಿರುವ​ ಸೆಟ್​​​ (ETV Bharat)

ವಕೀಲ ಜಿ. ಬಾಲಾಜಿ ಹೇಳುವುದೇನು? ಈ ಸಂಬಂಧ ವಕೀಲ ಜಿ. ಬಾಲಾಜಿ ಅವರು ಈಟಿವಿ ಭಾರತದ ಜೊತೆ ಮಾತನಾಡಿದ್ದು, ''ಪೀಣ್ಯ ಪ್ಲಾಂಟೇಶನ್ ಜಮೀನಿನ ಬಳಿ 20 ಎಕರೆ ಜಾಗದಲ್ಲಿ (ಅರಣ್ಯ ಭೂಮಿಯಲ್ಲಿ) ಅನಧಿಕೃತವಾಗಿ ಸೆಟ್ ನಿರ್ಮಾಣ ಮಾಡಲಾಗಿದೆ. ಕೂಡಲೇ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಈ ಸೆಟ್​ ಅನ್ನು ತೆರವುಗೊಳಿಸಲು ಕೋರ್ಟ್​​​ಗೆ ಮನವಿ ಮಾಡಲಾಗಿದೆ. ಈ ಸಂಬಂಧ ವಿಚಾರಣೆಯನ್ನು ಸಿಜೆ ಎನ್.ವಿ.ಅಂಜಾರಿಯಾ, ನ್ಯಾ. ಕೆ.ವಿ.ಅರವಿಂದ್ ಅವರಿದ್ದ ಹೈಕೋರ್ಟ್ ಪೀಠ ಆಗಸ್ಟ್ 19ಕ್ಕೆ ಮುಂದೂಡಿದೆ. ಇನ್ನು ಹೆಚ್ಎಂಟಿ ಸಂಸ್ಥೆ ಈ ಭೂಮಿಯನ್ನು ಕೆನರಾ ಬ್ಯಾಂಕ್​​ಗೆ ಮಾರಾಟ ಮಾಡಿತ್ತು. ಕೆನರಾ ಬ್ಯಾಂಕ್, ಕೆವಿಎನ್ ಸಿನಿಮಾ ನಿರ್ಮಾಣ ಸಂಸ್ಥೆಗೆ ನೀಡಿದೆ'' ಎಂಬುದು ವಕೀಲ ಬಾಲಾಜಿ ಅವರ ಆರೋಪವಾಗಿದೆ.

ಕೆವಿಎನ್ ಸಂಸ್ಥೆ ಪ್ರತಿಕ್ರಿಯೆ: ನೋಟಿಸ್ ಬಗ್ಗೆ ಕೆವಿಎನ್ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಸುಪ್ರೀತ್ ಅವರನ್ನು ಕೇಳಿದ್ರೆ, ''ಸೆಟ್ ಹಾಕಿರುವುದು ಹೆಚ್‌​ಎಂಟಿಗೆ ಸೇರಿದ ಜಾಗದ ಪಕ್ಕದ ಜಾಗದಲ್ಲಿ. ಇನ್ನೂ ಶೂಟಿಂಗ್ ಶುರುವಾಗಿಲ್ಲ. ಸೆಟ್ ನಿರ್ಮಾಣದ ಕೆಲಸಗಳು ನಡೆಯುತ್ತಿದೆ. ಸೆಟ್ ಹಾಕುತ್ತಿರುವ ಜಾಗ ನಮ್ಮ ಆತ್ಮೀಯರದ್ದೇ. ನೋಟಿಸ್ ಆಫೀಸ್‌ಗೆ ಬಂದಿರಬಹುದು ಅಥವಾ ಜಾಗದ ಮಾಲೀಕರಿಗೆ ಹೋಗಿರಬಹುದು'' ಎಂದು ಹೇಳಿದರು.

Yash and Geetu Mohandas
ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಯಶ್​ ಸಿನಿಮಾ (ETV Bharat)

ಟಾಕ್ಸಿಕ್​ ಚಿತ್ರ: ಇದೀಗ ಸೆಟ್​ನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ದೊಡ್ಡಮಟ್ಟದಲ್ಲೇ ಸಿನಿಮಾ ನಿರ್ಮಾಣವಾಗುತ್ತಿರುವುದು ಗೊತ್ತಾಗುತ್ತಿದೆ. ಚಿತ್ರದಲ್ಲಿ 60, 70ರ ದಶಕದ ಕಥೆ ಹೇಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸೆಟ್ ಹಾಕಲಾಗಿದೆ.

ಇದನ್ನೂ ಓದಿ: ಶೂಟಿಂಗ್​ ವೇಳೆ ಕಾರ್​ ಆಕ್ಸಿಡೆಂಟ್​​​: ಇಬ್ಬರು ನಟರು ಸೇರಿ ನಾಲ್ವರಿಗೆ ಗಾಯ - Actors Injured

ಟಾಕ್ಸಿಕ್ ಸಿನಿಮಾ ಕಥೆ ಏನು ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ. ಆದರೆ ಕೆವಿಎನ್ ಸಂಸ್ಥೆಯ ಆಪ್ತರೊಬ್ಬರು ಹೇಳುವ ಹಾಗೇ, ಡ್ರಗ್ ಮಾಫಿಯಾ ಕಥೆಯನ್ನು ಒಳಗೊಂಡ ಚಿತ್ರ ಅಂತಾ ಹೇಳಿದ್ದಾರೆ. ಯಶ್ ಎರಡು ಶೇಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಸಿನಿಮಾ ಬಹುಕೋಟಿ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿದೆ ಎಂಬ ವಿಚಾರ ಸದ್ದು ಮಾಡುತ್ತಿದೆ. ಸದ್ಯ ಸಿನಿಮಾ ಸ್ಟಾರ್ ಕಾಸ್ಟ್ ವಿಚಾರವಾಗಿ ಸಖತ್ ಸುದ್ದಿಯಲ್ಲಿದೆ.

ಟಾಕ್ಸಿಕ್ ಚಿತ್ರಕ್ಕಾಗಿ ನಟ ಯಶ್ ಹೊಸ ಹೇರ್‌ಸ್ಟೈಲ್ ಕೂಡಾ ಟ್ರೈ ಮಾಡುತ್ತಿದ್ದಾರೆ. ಅಂಬಾನಿ ಮಗನ ಮದುವೆ ಸಮಾರಂಭಕ್ಕೆ ಯಶ್ ಹೊಸ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದರು. ರಾಕಿಂಗ್ ಸ್ಟಾರ್​ ನಯಾ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಸುದ್ದಿ ಆಗಿತ್ತು. ಅಲೆಕ್ಸ್ ವಿಜಯ್‌ಕಾಂತ್ ಎಂಬುವವರು ಯಶ್ ಕೂದಲಿಗೆ ಕತ್ತರಿ ಹಾಕಿ ಹೊಸ ಲುಕ್ ಕೊಟ್ಟಿದ್ದಾರೆ. ಇಷ್ಟೆಲ್ಲಾ ವಿಶೇಷತೆ ಮೂಲಕ ಸದ್ದು ಮಾಡುತ್ತಿರುವ 'ಟಾಕ್ಸಿಕ್'ನ ಶೂಟಿಂಗ್ ಸೆಟ್​​ ವಿಚಾರಕ್ಕೆ ಮುಂದಕ್ಕೆ ಹೋಗಿದೆ. ಕೆವಿಎನ್ ಸಂಸ್ಥೆಯ ಆಪ್ತರು ಹೇಳುವ ಹಾಗೇ ಸೆಪ್ಟೆಂಬರ್​ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ. ಸದ್ಯ ಸೆಟ್​​ ವಿಚಾರಕ್ಕೆ ಶೂಟಿಂಗ್ ಪೋಸ್ಟ್ ಪೋನ್ ಆಗಿರುವುದರಿಂದ ಬಿಡುಗಡೆ ದಿನ ಕೂಡ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.