ETV Bharat / entertainment

97ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 3ರಂದು: ಯಾವೆಲ್ಲ OTTಗಳಲ್ಲಿ ನೇರಪ್ರಸಾರ? - 97TH ACADEMY AWARDS

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 3ರಂದು ನಡೆಯಲಿದೆ.

97ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 3 ರಂದು: ಯಾವೆಲ್ಲ OTT ಗಳಲ್ಲಿ ನೇರಪ್ರಸಾರ?
97ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ (ANI)
author img

By ANI

Published : Feb 27, 2025, 4:49 PM IST

ಮುಂಬೈ: ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 97ನೇ ಅಕಾಡೆಮಿ ಅವಾರ್ಡ್ ಸಮಾರಂಭ ಮಾರ್ಚ್ 3ರ ಭಾನುವಾರದಂದು ಅಮೆರಿಕದ ಕ್ಯಾಲಿಫೋರ್ನಿಯಾದ ಹಾಲಿವುಡ್​ನಲ್ಲಿರುವ ಡಾಲ್ಬಿ ಥಿಯೇಟರ್​ನಲ್ಲಿ ನಡೆಯಲಿದೆ.

ಭಾರತದಲ್ಲಿನ ವೀಕ್ಷಕರು ಭಾರತೀಯ ಕಾಲಮಾನ ಸಂಜೆ 5.30ರಿಂದ ಸ್ಟಾರ್ ಮೂವೀಸ್ ಮತ್ತು ಜಿಯೊಹಾಟ್‌ಸ್ಟಾರ್​ನಲ್ಲಿ ಸಮಾರಂಭದ ನೇರ ಪ್ರಸಾರವನ್ನು ನೋಡಬಹುದು.

ಆಸ್ಕರ್ ಪ್ರಶಸ್ತಿ ಕಾರ್ಯಕ್ರಮವನ್ನು ಎಮ್ಮಿ ಪ್ರಶಸ್ತಿ ವಿಜೇತ ದೂರದರ್ಶನ ನಿರೂಪಕ, ಬರಹಗಾರ, ನಿರ್ಮಾಪಕ ಮತ್ತು ಹಾಸ್ಯನಟ ಕೊನನ್ ಒ'ಬ್ರಿಯಾನ್ ನಿರ್ವಹಿಸಲಿದ್ದಾರೆ. ಅಕಾಡೆಮಿ ಅವಾರ್ಡ್​ ಅನ್ನು ಒ'ಬ್ರಿಯಾನ್ ನಿರ್ವಹಿಸುತ್ತಿರುವುದು ಇದೇ ಮೊದಲು. ಈ ಹಿಂದೆ 2002 ಮತ್ತು 2006 ರಲ್ಲಿ ಎಮ್ಮಿಸ್ ಅನ್ನು ನಿರ್ವಹಿಸಿದ್ದ ಒ'ಬ್ರಿಯಾನ್ ವೇದಿಕೆಯಲ್ಲಿ ತಮ್ಮ ಬುದ್ಧಿವಂತಿಕೆಯ ಹಾಸ್ಯವನ್ನು ಪ್ರಸ್ತುತಪಡಿಸುವ ನಿರೀಕ್ಷೆಯಿದೆ. ಇದು ಚಲನಚಿತ್ರ ಅಭಿಮಾನಿಗಳಿಗೆ ಮರೆಯಲಾಗದ ಅನುಭವವಾಗಲಿದೆ.

ರ್ಯಾಪರ್ ಮತ್ತು ಗಾಯಕಿ ಕ್ವೀನ್ ಲತೀಫಾ ಅವರು ಅಕಾಡೆಮಿ ಪ್ರಶಸ್ತಿಗಳಲ್ಲಿ ದಂತಕಥೆ ಕ್ವಿನ್ಸಿ ಜೋನ್ಸ್ ಅವರಿಗೆ ವಿಶೇಷ ಗೌರವ ಸಲ್ಲಿಸಲಿದ್ದಾರೆ. ಹಾಡುಗಳ ನಿರ್ಮಾಪಕ, ಸಂಯೋಜಕ, ನಿರ್ವಾಹಕ, ಟ್ರಂಪೆಟರ್ ಮತ್ತು ಬ್ಯಾಂಡ್ ಲೀಡರ್ ಆಗಿರುವ ಜೋನ್ಸ್ 28 ಗ್ರ್ಯಾಮಿ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಂಸೆಗಳನ್ನು ಪಡೆದಿದ್ದಾರೆ. ಕಾರ್ಯಕಾರಿ ನಿರ್ಮಾಪಕ ರಾಜ್ ಕಪೂರ್ ಮಾಧ್ಯಮಗೋಷ್ಠಿಯಲ್ಲಿ ಈ ಸುದ್ದಿಯನ್ನು ಹಂಚಿಕೊಂಡರು.

"ಈ ವರ್ಷ ನಾವು ಆಯೋಜಿಸಿರುವ ಅತ್ಯಂತ ರೋಮಾಂಚಕಾರಿ ಕಾರ್ಯಕ್ರಮವೆಂದರೆ ಅದು ಕ್ವಿನ್ಸಿ ಜೋನ್ಸ್ ಅವರಿಗೆ ಗೌರವ ಸಲ್ಲಿಸುವ ಸಂಗೀತ ಪ್ರದರ್ಶನ" ಎಂದು ಅವರು ಹೇಳಿದರು. ಕ್ವೀನ್ ಲತೀಫಾ ಕೂಡ ಪ್ರದರ್ಶನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವೆರೈಟಿ ವರದಿ ಮಾಡಿದೆ. ಆಸ್ಕರ್ ಸಮಾರಂಭದಲ್ಲಿ ಅರಿಯಾನಾ ಗ್ರಾಂಡೆ ಮತ್ತು ಸಿಂಥಿಯಾ ಎರಿವೊ ಅವರ 'ವಿಕೆಡ್' ಪ್ರದರ್ಶನವನ್ನು ಸಹ ಒಳಗೊಂಡಿರುತ್ತದೆ.

ಲಾಸ್ ಏಂಜಲೀಸ್​ನಲ್ಲಿ ಕಾಡ್ಗಿಚ್ಚಿನ ಪರಿಣಾಮವಾಗಿ ಕನಿಷ್ಠ 28 ಜನರ ಸಾವು ಮತ್ತು ಆಸ್ತಿಪಾಸ್ತಿ ಹಾನಿಯಿಂದಾಗಿ ಮತದಾನದ ದಿನಾಂಕವನ್ನು ಎರಡು ಬಾರಿ ವಿಸ್ತರಿಸಿದ ನಂತರ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಗಳನ್ನು ಜನವರಿಯಲ್ಲಿ ಅನಾವರಣಗೊಳಿಸಲಾಯಿತು.

'ಡ್ಯೂನ್' ಮತ್ತು 'ವೊಂಕಾ' ಚಿತ್ರಗಳೊಂದಿಗೆ ತನ್ನ ಬಾಕ್ಸ್ ಆಫೀಸ್​ನಲ್ಲಿ ಅತ್ಯುತ್ತಮ ಗಳಿಕೆಯನ್ನು ಸಾಬೀತುಪಡಿಸಿದ ಟಿಮೋಥಿ ಚಲಾಮೆಟ್, 'ಎ ಕಂಪ್ಲೀಟ್ ಅನ್ ನೋನ್' ಚಿತ್ರದಲ್ಲಿ ಡೈಲನ್ ಪಾತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರು 2003ರ 'ದಿ ಪಿಯಾನಿಸ್ಟ್'ಗಾಗಿ 29 ನೇ ವಯಸ್ಸಿನಲ್ಲಿ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ಅತ್ಯುತ್ತಮ ನಟ ಪ್ರಶಸ್ತಿ ವಿಜೇತರಾದ 'ದಿ ಬ್ರೂಟಲಿಸ್ಟ್' ತಾರೆ ಆಡ್ರಿಯನ್ ಬ್ರಾಡಿ ವಿರುದ್ಧ ಸೆಣಸಲಿದ್ದಾರೆ. ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರಲ್ಲಿ ಕೋಲ್ಮನ್ ಡೊಮಿಂಗೊ ('ಸಿಂಗ್ ಸಿಂಗ್'), ರಾಲ್ಫ್ ಫಿಯೆನ್ನೆಸ್ ('ಕಾನ್ಕ್ಲೇವ್') ಮತ್ತು ಸೆಬಾಸ್ಟಿಯನ್ ಸ್ಟಾನ್ ('ದಿ ಅಪ್ರೆಂಟಿಸ್') ಸೇರಿದ್ದಾರೆ.

ಇದನ್ನೂ ಓದಿ: ರಜನಿಕಾಂತ್ ಮುಖ್ಯಭೂಮಿಕೆಯ 'ಕೂಲಿ' ಚಿತ್ರದಲ್ಲಿ ಮೈಬಳುಕಿಸಲಿರುವ ಪೂಜಾ ಹೆಗ್ಡೆ - POOJA HEGDE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.