ETV Bharat / education-and-career

ನಾಗರಿಕ ಸೇವಾ ಪರೀಕ್ಷೆಗಳಿಗೆ ಯುಪಿಎಸ್​ಸಿ ಅಧಿಸೂಚನೆ - ಕೇಂದ್ರ ನಾಗರಿಕ ಸೇವಾ ಪರೀಕ್ಷೆ

ನಾಗರಿಕ ಸೇವಾ ಪರೀಕ್ಷೆಯ ಜೊತೆಗೆ ಐಎಫ್​ಎಸ್​ ಹುದ್ದೆಗಳ ಭರ್ತಿಗೂ ಯುಪಿಎಸ್‌ಸಿ ಅಧಿಸೂಚನೆ ಪ್ರಕಟಿಸಿದೆ.

UPSC Notification For IFS and civil service Exam

author img

By ETV Bharat Karnataka Team

Published : Feb 16, 2024, 4:05 PM IST

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್​ಸಿ) ದೇಶದ ಅತ್ಯುನ್ನತ ಪರೀಕ್ಷೆಯಾಗಿರುವ ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ. ಪ್ರಸಕ್ತ ಸಾಲಿನ ಅಂದರೆ 2024ನೇ ಸಾಲಿನ ಗ್ರೂಪ್​ ಎ ನಾಗರಿಕ ಸೇವಾ ಪರೀಕ್ಷೆ ಮತ್ತು ಭಾರತೀಯ ಅರಣ್ಯ ಸೇವಾ ಪರೀಕ್ಷೆ(ಐಎಫ್‌ಎಸ್‌) ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಹುದ್ದೆಗಳ ವಿವರ:

ಕೇಂದ್ರ ನಾಗರಿಕ ಸೇವಾ ಪರೀಕ್ಷೆ- 1,056 ಹುದ್ದೆಗಳು

ಭಾರತೀಯ ಅರಣ್ಯ ಸೇವಾ ಪರೀಕ್ಷೆ -150 ಹುದ್ದೆಗಳು

ವಿದ್ಯಾರ್ಹತೆ: ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು. ಅರಣ್ಯ ಸೇವೆ ಪರೀಕ್ಷೆ ತೆಗೆದುಕೊಳ್ಳಲು ಬಯಸುವ ಅಭ್ಯರ್ಥಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಭೂವಿಜ್ಞಾನ, ಗಣಿತ, ಭೌತಶಾಸ್ತ್ರ, ಕೃಷಿ ಪದವಿ, ಅರಣ್ಯಶಾಸ್ತ್ರವನ್ನು ಪದವಿಯಲ್ಲಿ ಒಂದು ವಿಷಯವಾಗಿ ಅಭ್ಯಾಸ ಮಾಡಿರಬೇಕು.

ಅಧಿಸೂಚನೆ
ಅಧಿಸೂಚನೆ

ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 32 ವರ್ಷ ವಯೋಮಿತಿ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿ ಇದೆ.

ಅರ್ಜಿ ಸಲ್ಲಿಕೆ, ಶುಲ್ಕ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಮಹಿಳಾ, ಪ.ಜಾ, ಪ.ಪಂ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ಇದೆ. ಇತರೆ ಅಭ್ಯರ್ಥಿಗಳಿಗೆ 100 ರೂ ಅರ್ಜಿ ಶುಲ್ಕ ನಿಗದಿಸಲಾಗಿದೆ.

ಆಯ್ಕೆ: ಪ್ರಿಲಿಮ್ಸ್,​ ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ. ಫೆಬ್ರವರಿ 14ರಿಂದ ಅರ್ಜಿ ಸಲ್ಲಿಕೆ ಮಾಡಬೇಕಿದ್ದು, ಮಾರ್ಚ್​​ 6 ಕಡೇಯ ದಿನ. ಒಟಿಆರ್​ (ಒಂದು ಬಾರಿ ನೋಂದಾಣಿ) ತಿದ್ದುಪಡಿಗೆ ಕಡೆಯ ದಿನಾಂಕ ಮಾರ್ಚ್​ 12 ಕಡೇಯ ದಿನ. ಈ ಹುದ್ದೆಗೆ ಮೇ.26ರಂದು ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ upsc.gov.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ಬೀದರ್​ನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗಾವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.