ETV Bharat / education-and-career

ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಸ್ಕೂಲ್​ನಲ್ಲಿ ನೇಮಕಾತಿ; ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ - TEACHERS JOB RECRUITMENT

ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಿಲಿಟರಿ ಸ್ಕೂಲ್​ನಲ್ಲಿ ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Teachers Job Recruitment in Rashtriya Military School Bengaluru
ಉದ್ಯೋಗ ನೇಮಕಾತಿ (ಈಟಿವಿ ಭಾರತ್​)
author img

By ETV Bharat Karnataka Team

Published : Feb 27, 2025, 1:18 PM IST

ಬೆಂಗಳೂರು : ಕೇಂದ್ರ ರಕ್ಷಣಾ ಇಲಾಖೆ ಅಡಿ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಿಲಿಟರಿ ಸ್ಕೂಲ್​ನಲ್ಲಿ ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರೂಪ್​ ಬಿ ನಾನ್​ ಗೆಜೆಟೆಡ್​​ ಹುದ್ದೆಗಳು ಇವಾಗಿವೆ.

ಹುದ್ದೆ ವಿವರ : ಒಟ್ಟು ಹುದ್ದೆಗಳು 4

  • ಅಸಿಸ್ಟಂಟ್​ ಮಾಸ್ಟರ್​ (ಪಿಸಿಕ್ಸ್​) - 1
  • ಅಸಿಸ್ಟಂಟ್​ ಮಾಸ್ಟರ್​ (ಕೆಮಿಸ್ಟ್ರಿ) - 2
  • ಅಸಿಸ್ಟಂಟ್​ ಮಾಸ್ಟರ್ (ಇಂಗ್ಲಿಷ್​) - 1

ವಿದ್ಯಾರ್ಹತೆ : ಅಭ್ಯರ್ಥಿಗಳು ಸಂಬಂಧಿಸಿದ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಒಂದು ವರ್ಷ ಹುದ್ದೆ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ.

Teachers Job Recruitment in Rashtriya Military School Bengaluru
ಅಧಿಸೂಚನೆ (Rashtriya Military School)

ವೇತನ : ಮಾಸಿಕ 44,900 ರಿಂದ 1,42,400 ರೂ.

ವಯೋಮಿತಿ : ಅಭ್ಯರ್ಥಿಗಳು ಗರಿಷ್ಠ ವಯೋಮಿತಿ 30 ವರ್ಷ ದಾಟಿರಬಾರದು. ಪರಿಶಿಷ್ಟ ಜಾರಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಸಲ್ಲಿಕೆ : ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಲಾಗಿರುವ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ಅದನ್ನು ಅಗತ್ಯ ಪ್ರಮಾಣ ಪತ್ರ ಹಾಗೂ ಅರ್ಜಿ ಶುಲ್ಕದೊಂದಿಗೆ ಕೆಳಗೆ ತಿಳಿಸಿದ ವಿಳಾಸಕ್ಕೆ ಅಂತಿಮ ದಿನಕ್ಕೆ ಮುನ್ನ ಸಲ್ಲಿಕೆ ಮಾಡಬೇಕು.

ಅರ್ಜಿ ಸಲ್ಲಿಕೆ ವಿಳಾಸ : ದಿ ಪ್ರಿನ್ಸಿಪಾಲ್​, ರಾಷ್ಟ್ರೀಯ ಮಿಲಿಟರಿ ಸ್ಕೂಲ್​, ಬಿಪಿ ನಂ 25040, ಮ್ಯೂಸಿಯಂ ರೋಡ್​ ಪಿಒ, ಜಾನ್ಸನ್​ ಮಾರ್ಕೆಟ್​ ಮುಂಭಾಗ, ಹೊಸೂರು ರೋಡ್​​, ಬೆಂಗಳೂರು 560025

ಅರ್ಜಿ ಶುಲ್ಕ : ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗ 100 ರೂ. ಹಾಗೂ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 50 ರೂ. ನಿಗದಿಸಲಾಗಿದೆ.

ಈ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮಾರ್ಚ್​​ 7 ಆಗಿದೆ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ rashtriyamilitaryschools.edu.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ಬೀದರ್​ ಡಿಸಿಸಿ ಬ್ಯಾಂಕ್​ನಲ್ಲಿ ಉದ್ಯೋಗ: ಸ್ನಾತಕೋತ್ತರ ಪದವೀಧರರಿಗೆ ಅವಕಾಶ

ಇದನ್ನೂ ಓದಿ: ಬ್ಯಾಂಕ್​ ಆಫ್​ ಬರೋಡದಲ್ಲಿ 4000 ಅಪ್ರೆಂಟಿಸ್​ ಹುದ್ದೆಗಳು; ಕರ್ನಾಟಕದಲ್ಲಿ 537 ಹುದ್ದೆ ಭರ್ತಿಗೆ ಕ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.