ETV Bharat / business

ಆರಂಭಿಕ ಹಂತದ ಉದ್ಯೋಗಕ್ಕೆ 9.57 ಲಕ್ಷ ರೂಗಳ ಭರ್ಜರಿ ಸಂಬಳ: ಇದು ಉದ್ಯೋಗ ಮಾರುಕಟ್ಟೆ ಸದ್ಯದ ಟ್ರೆಂಡ್!.. ಹೆಚ್ಚಳಕ್ಕೆ ಕಾರಣ?

ದೇಶದಲ್ಲಿ ಎಂಟ್ರಿ ಲೆವೆಲ್ ಉದ್ಯೋಗಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಟೀಮ್ ಲೀಸ್ ವರದಿ ಹೇಳಿದೆ.

ದೇಶದಲ್ಲಿ ಎಂಟ್ರಿ ಲೆವೆಲ್ ಉದ್ಯೋಗಗಳ ಸಂಖ್ಯೆ ಹೆಚ್ಚಳ, ವೇತನವೂ ಏರಿಕೆ: ಟೀಮ್ ಲೀಸ್ ವರದಿ
ದೇಶದಲ್ಲಿ ಎಂಟ್ರಿ ಲೆವೆಲ್ ಉದ್ಯೋಗಗಳ ಸಂಖ್ಯೆ ಹೆಚ್ಚಳ, ವೇತನವೂ ಏರಿಕೆ: ಟೀಮ್ ಲೀಸ್ ವರದಿ (Getty Images)
author img

By PTI

Published : 3 hours ago

ಮುಂಬೈ: ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ) ಮತ್ತು ತಂತ್ರಜ್ಞಾನೇತರ ವಲಯಗಳಲ್ಲಿ ಉದ್ಯೋಗಿಗಳ ಬೇಡಿಕೆ ಹೆಚ್ಚಾಗಿರುವುದು ಮತ್ತು ಪ್ರಮುಖ ಕ್ಷೇತ್ರಗಳಲ್ಲಿ ಫ್ರೆಶರ್ಸ್​ಗೆ ಸ್ಪರ್ಧಾತ್ಮಕ ವೇತನ ನೀಡುತ್ತಿರುವ ಕಾರಣಗಳಿಂದ ನಿಧಾನಗತಿಗೆ ಸಾಕ್ಷಿಯಾಗಿದ್ದ ಎಂಟ್ರಿ ಲೆವೆಲ್ ಉದ್ಯೋಗಗಳ ಸಂಖ್ಯೆ ಈಗ ಹೆಚ್ಚಾಗುತ್ತಿದೆ ಎಂದು ವರದಿಯೊಂದು ಗುರುವಾರ ತಿಳಿಸಿದೆ.

ಸಾಫ್ಟ್​ವೇರ್ ಅಪ್ಲಿಕೇಶನ್​ಗಳ ಕೋಡಿಂಗ್, ವಿನ್ಯಾಸ ಮತ್ತು ನಿರ್ವಹಣೆಗಳನ್ನು ಒಳಗೊಂಡಿರುವ ಸಾಫ್ಟ್​ವೇರ್ ಅಭಿವೃದ್ಧಿ ಮತ್ತು ಎಂಜಿನಿಯರಿಂಗ್ ವಲಯವು ಹೆಚ್ಚು ವೇತನದ ಉದ್ಯೋಗವಕಾಶಗಳನ್ನು ಸೃಷ್ಟಿಸಲು ಸಜ್ಜಾಗಿದೆ ಎಂದು ಟೀಮ್ ಲೀಸ್ ಡಿಜಿಟಲ್ ವರದಿ ತಿಳಿಸಿದೆ.

ಉದ್ಯೋಗಗಳ ಹೆಚ್ಚಳಕ್ಕೆ ಈ ಅಂಶಗಳೆಲ್ಲ ಕಾರಣ?: ಉತ್ಪಾದಕತೆ, ನಿಖರತೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ಸಾಫ್ಟ್​ವೇರ್ ಅಭಿವೃದ್ಧಿಯಲ್ಲಿ ಕೃತಕ ಬುದ್ಧಿಮತ್ತೆ / ಯಂತ್ರ ಕಲಿಕೆ (ಎಐ / ಎಂಎಲ್) ಕೌಶಲ್ಯಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದು ಉದ್ಯೋಗಗಳ ಹೆಚ್ಚಳಕ್ಕೆ ಮತ್ತಷ್ಟು ಕೊಡುಗೆ ನೀಡುತ್ತಿದೆ ಎಂದು ಅದು ಹೇಳಿದೆ.

ಸರಾಸರಿ ವಾರ್ಷಿಕ 9.37 ಲಕ್ಷ ರೂ ಸಂಬಳ: ಇದೆಲ್ಲದರ ಪರಿಣಾಮದಿಂದ ಈ ಡೊಮೇನ್​ನಲ್ಲಿ 2024-25ರ ಅಂತ್ಯದ ವೇಳೆಗೆ ಪ್ರವೇಶ ಮಟ್ಟದ ಉದ್ಯೋಗಿಗಳಿಗೆ ಜಿಸಿಸಿಗಳಲ್ಲಿ ವಾರ್ಷಿಕ ಸರಾಸರಿ 9.37 ಲಕ್ಷ ರೂ., ಐಟಿ ಉತ್ಪನ್ನಗಳು ಮತ್ತು ಸೇವಾ ವಲಯದಲ್ಲಿ 6.23 ಲಕ್ಷ ರೂ. ಮತ್ತು ತಂತ್ರಜ್ಞಾನೇತರ ಕ್ಷೇತ್ರಗಳಲ್ಲಿ ವಾರ್ಷಿಕ 6 ಲಕ್ಷ ರೂಪಾಯಿ ಸಂಬಳ ಸಿಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.

15,000 ಉದ್ಯೋಗಗಳ ಪ್ರಾಥಮಿಕ ಡೇಟಾ ಆಧರಿಸಿ ವರದಿ: ಜಿಸಿಸಿಗಳು, ಐಟಿ ಸೇವೆಗಳು ಮತ್ತು ತಂತ್ರಜ್ಞಾನೇತರ ಕ್ಷೇತ್ರಗಳಲ್ಲಿನ 15,000 ಉದ್ಯೋಗಗಳ ಪ್ರಾಥಮಿಕ ಡೇಟಾ ಆಧರಿಸಿ ಟೀಮ್ ಲೀಸ್ ಈ ವರದಿಯನ್ನು ತಯಾರಿಸಿದೆ.

ಸೈಬರ್ ಸೆಕ್ಯುರಿಟಿ ಮತ್ತು ನೆಟ್ ವರ್ಕ್ ನಿರ್ವಹಣೆ ವಲಯಗಳಲ್ಲಿ ಜಿಸಿಸಿಗಳು ವಾರ್ಷಿಕ ಸರಾಸರಿ 9.57 ಲಕ್ಷ ರೂಪಾಯಿ ವೇತನ ನೀಡುವುದನ್ನು ಮುಂದುವರಿಸುವ ನಿರೀಕ್ಷೆಯಿದೆ. ಇದು ಐಟಿ ಕಂಪನಿಗಳಿಗಿಂತ ಶೇಕಡಾ 40.12 ರಷ್ಟು ಹೆಚ್ಚಾಗಿದೆ. ಐಟಿ ಉತ್ಪನ್ನಗಳು ಮತ್ತು ಸೇವಾ ವಲಯದಲ್ಲಿ ವಾರ್ಷಿಕ 6.83 ಲಕ್ಷ ರೂಪಾಯಿ ಮತ್ತು ತಂತ್ರಜ್ಞಾನೇತರ ವಲಯಗಳಲ್ಲಿ ವಾರ್ಷಿಕ 5.17 ಲಕ್ಷ ರೂಪಾಯಿ ವೇತನ ಸಿಗುವ ನಿರೀಕ್ಷೆಯಿದೆ.

ಯಾವ ಯಾವ ವಲಯದಲ್ಲಿ ಆರಂಭಿಕ ಸಂಬಳ ಎಷ್ಟು?: ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಬೆಂಬಲಿಸಲು ಡೇಟಾ ಸಂಗ್ರಹಣೆ ಮತ್ತು ವಿಶ್ಲೇಷಣೆಯನ್ನು ಒಳಗೊಂಡಿರುವ ಡೇಟಾ ನಿರ್ವಹಣೆ ಮತ್ತು ವಿಶ್ಲೇಷಣಾ ವಲಯದ ಜಿಸಿಸಿಗಳಲ್ಲಿ 2025 ರ ಹಣಕಾಸು ವರ್ಷದಲ್ಲಿ ವಾರ್ಷಿಕ ಸರಾಸರಿ 8.73 ಲಕ್ಷ ರೂಪಾಯಿ, ಐಟಿ ಉತ್ಪನ್ನಗಳು ಮತ್ತು ಸೇವಾ ವಲಯದಲ್ಲಿ ವಾರ್ಷಿಕ ಸರಾಸರಿ 7.07 ಲಕ್ಷ ರೂಪಾಯಿ ಮತ್ತು ತಂತ್ರಜ್ಞಾನೇತರ ಕ್ಷೇತ್ರಗಳಲ್ಲಿ ವಾರ್ಷಿಕ ಸರಾಸರಿ 6.37 ಲಕ್ಷ ರೂಪಾಯಿ ವೇತನ ಸಿಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಕ್ಲೌಡ್ ಪ್ಲಾಟ್ ಫಾರ್ಮ್​​ಗಳು ಮತ್ತು ಇಆರ್​ಪಿ ವ್ಯವಸ್ಥೆಗಳ ಮೂಲಕ ಸ್ಕೇಲಬಿಲಿಟಿ ಮತ್ತು ವೆಚ್ಚ-ದಕ್ಷತೆಯ ಮೇಲೆ ಕೇಂದ್ರೀಕರಿಸಲಾದ ಕ್ಲೌಡ್ ಸೊಲ್ಯೂಷನ್ಸ್ ಮತ್ತು ಎಂಟರ್ ಪ್ರೈಸ್ ಅಪ್ಲಿಕೇಶನ್ಸ್ ಮ್ಯಾನೇಜ್ ಮೆಂಟ್ ಡೊಮೇನ್ ಜಿಸಿಸಿಗಳಲ್ಲಿ ವಾರ್ಷಿಕ ಸರಾಸರಿ 7.67 ಲಕ್ಷ ರೂಪಾಯಿ ಮತ್ತು ಐಟಿ ಉತ್ಪನ್ನಗಳು ಮತ್ತು ಸೇವಾ ವಲಯದಲ್ಲಿ ವಾರ್ಷಿಕ ಸರಾಸರಿ 6.07 ಲಕ್ಷ ರೂಪಾಯಿ ಸಂಬಳ ಸಿಗುವ ನಿರೀಕ್ಷೆಯಿದೆ.

ಬಿಎಫ್ಎಸ್ಐ, ಹೆಲ್ತ್ ಕೇರ್ ಮತ್ತು ಉತ್ಪಾದನೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಕ್ಲೌಡ್ ತಂತ್ರಜ್ಞಾನವನ್ನು ಹೆಚ್ಚಾಗಿ ಅಳವಡಿಸಿಕೊಳ್ಳುವುದರಿಂದ ಟೆಕ್ ಅಲ್ಲದ ಉದ್ಯಮವು ಕ್ಲೌಡ್ ಪರಿಹಾರ ಉದ್ಯೋಗಿಗಳಿಗೆ ವಾರ್ಷಿಕ ಸರಾಸರಿ 6.53 ಲಕ್ಷ ರೂಪಾಯಿ ವೇತನ ನೀಡಲು ಸಜ್ಜಾಗಿದೆ. ಇದು ಐಟಿ ವಲಯಕ್ಕಿಂತ ಸುಮಾರು 8 ಪ್ರತಿಶತ ಹೆಚ್ಚಾಗಿದೆ.

ಇದನ್ನೂ ಓದಿ : ಅದಾನಿ ಸಮೂಹದ ಬಳಿ ಸಾಲ, ಬಂಡವಾಳ ವೆಚ್ಚಕ್ಕೆ ಸಾಕಾಗುವಷ್ಟು ನಗದು ಲಭ್ಯ: ಕ್ರಿಸಿಲ್ ರೇಟಿಂಗ್ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.