ETV Bharat / business

2026ಕ್ಕೆ ಭಾರತಕ್ಕೆ ಬೇಕು $100 ಬಿಲಿಯನ್ ಮೌಲ್ಯದ ಸೆಮಿಕಂಡಕ್ಟರ್​ ಚಿಪ್​ಗಳು - Semiconductor Chips - SEMICONDUCTOR CHIPS

2026ರ ವೇಳೆಗೆ ಭಾರತದ ಸೆಮಿಕಂಡಕ್ಟರ್​ ಚಿಪ್​ಗಳ ಬೇಡಿಕೆ 100 ಬಿಲಿಯನ್ ಡಾಲರ್ ದಾಟಬಹುದು ಎಂದು ವರದಿ ತಿಳಿಸಿದೆ.

ಸೆಮಿಕಂಡಕ್ಟರ್​ ಚಿಪ್
ಸೆಮಿಕಂಡಕ್ಟರ್​ ಚಿಪ್ (IANS)
author img

By ETV Bharat Karnataka Team

Published : May 5, 2024, 12:26 PM IST

ನವದೆಹಲಿ: 2026ರ ಹಣಕಾಸು ವರ್ಷದ ಹೊತ್ತಿಗೆ ಭಾರತದ ಎಲೆಕ್ಟ್ರಾನಿಕ್ಸ್​ ಉದ್ಯಮಕ್ಕೆ 90 ರಿಂದ 100 ಬಿಲಿಯನ್ ಡಾಲರ್ ಮೌಲ್ಯದ ಸೆಮಿಕಂಡಕ್ಟರ್​ ಚಿಪ್​ಗಳು ಬೇಕಾಗಬಹುದು ಎಂದು ವರದಿಗಳು ತಿಳಿಸಿವೆ. 2026ರ ಹಣಕಾಸು ವರ್ಷದ ವೇಳೆಗೆ ಭಾರತದ ಎಲೆಕ್ಟ್ರಾನಿಕ್ಸ್​ ಉದ್ಯಮದ ಉತ್ಪಾದನೆಯ ಮೌಲ್ಯವು 300 ಬಿಲಿಯನ್​ ಡಾಲರ್​ಗೆ ತಲುಪುವ ನಿರೀಕ್ಷೆ ಇರುವುದರಿಂದ ಅದೇ ಪ್ರಮಾಣದಲ್ಲಿ ಚಿಪ್​ಗಳ ಬೇಡಿಕೆ ಕೂಡ ಹೆಚ್ಚಾಗಲಿದೆ.

ಸದ್ಯ ದೇಶದ ಎಲೆಕ್ಟ್ರಾನಿಕ್ಸ್​ ಉತ್ಪಾದನಾ ಮೌಲ್ಯವು 103 ಬಿಲಿಯನ್ ಡಾಲರ್ ಆಗಿದ್ದು, ಯಾವುದೇ ಎಲೆಕ್ಟ್ರಾನಿಕ್ಸ್ ಉತ್ಪನ್ನದ ಬಿಲ್ ಆಫ್ ಮೆಟೀರಿಯಲ್ (ಬಿಒಎಂ) ನಲ್ಲಿ ಉದ್ಯಮದ ಸರಾಸರಿ ಶೇಕಡಾ 25 ರಿಂದ 30 ರಷ್ಟು ಚಿಪ್ ಬಳಕೆಯನ್ನು ಪರಿಗಣಿಸಿದರೆ, ಉದ್ಯಮಕ್ಕೆ 26 ರಿಂದ 31 ಬಿಲಿಯನ್ ಡಾಲರ್ ಮೊತ್ತದ ಸೆಮಿಕಂಡಕ್ಟರ್​ ಚಿಪ್​ಗಳು ಅಗತ್ಯವಾಗಿವೆ.

ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಅಂಕಿ ಅಂಶಗಳ ಪ್ರಕಾರ, ಎಲೆಕ್ಟ್ರಾನಿಕ್ಸ್ ಉತ್ಪಾದನೆಯು 2026 ರ ವೇಳೆಗೆ 300 ಬಿಲಿಯನ್ ಡಾಲರ್​ಗೆ ಏರಿಕೆಯಾಗುವ ನಿರೀಕ್ಷೆಯಿದ್ದು, ಚಿಪ್ ಬಳಕೆಯ ಪ್ರಮಾಣ ಕೂಡ ಗಣನೀಯ 90 ರಿಂದ 100 ಬಿಲಿಯನ್ ಡಾಲರ್​ಗೆ ಏರಿಕೆಯಾಗಲಿದೆ.

ಒಟ್ಟಾರೆ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಮೊಬೈಲ್ ಫೋನ್​​ಗಳ ಉತ್ಪಾದನೆಯ ಪಾಲು ಕಳೆದ ಏಳು ವರ್ಷಗಳ ಅವಧಿಯಲ್ಲಿ ಶೇಕಡಾ 10 ರಿಂದ 44 ಕ್ಕೆ ಏರಿದೆ. 2023ರ ಹಣಕಾಸು ವರ್ಷದಲ್ಲಿ ಇಂಟಿಗ್ರೇಟೆಡ್ ಸರ್ಕ್ಯೂಟ್​ಗಳ (ಐಸಿ) ಒಟ್ಟು ಆಮದು 16.14 ಬಿಲಿಯನ್ ಡಾಲರ್ ತಲುಪಿದೆ. ಇದರಲ್ಲಿ 12 ಬಿಲಿಯನ್ ಡಾಲರ್ ಮೌಲ್ಯದ ಐಸಿಗಳನ್ನು ಮೊಬೈಲ್ ಫೋನ್​ಗಳಿಗಾಗಿಯೇ ಬಳಸಲಾಗಿದೆ.

ಐಸಿಇಎ ಪ್ರಕಾರ, ಹೈ ಎಂಡ್ ಫೋನ್​​ಗಳಿಗಾಗಿಯೇ ತಯಾರಿಸಲಾಗುವ ನಿರ್ದಿಷ್ಟವಾಗಿ ಸುಧಾರಿತ ಚಿಪ್​ಗಳಾಗಿರುವ ಪ್ರೊಸೆಸರ್ ಚಿಪ್​ಗಳನ್ನು ಭಾರತವು ಸ್ಪರ್ಧಾತ್ಮಕ ಮಟ್ಟದಲ್ಲಿ ಉತ್ಪಾದಿಸಲು ಸ್ವಲ್ಪ ಸಮಯ ಬೇಕಾಗಬಹುದು. ಆದಾಗ್ಯೂ, ಭಾರತದಲ್ಲಿ ಎಂಟ್ರಿ ಲೆವೆಲ್ ಸ್ಮಾರ್ಟ್​ಫೋನ್​ಗಳಿಗೆ ಅಗತ್ಯವಾಗಿರುವ ಪ್ರೊಸೆಸರ್ ಚಿಪ್​ಗಳನ್ನು ಉತ್ಪಾದಿಸಲು ವಾಣಿಜ್ಯ ಕಾರ್ಯಸಾಧ್ಯತೆ ಇದೆ ಎಂದು ಉದ್ಯಮ ಸಂಸ್ಥೆ ಐಸಿಇಎ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್​ನಲ್ಲಿ 1.25 ಲಕ್ಷ ಕೋಟಿ ರೂ.ಗಳ ಮೂರು ಸೆಮಿಕಂಡಕ್ಟರ್​ ತಯಾರಿಕಾ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಮೊದಲ 'ಮೇಕ್ ಇನ್ ಇಂಡಿಯಾ' ಚಿಪ್ ಈ ವರ್ಷದ ಡಿಸೆಂಬರ್ ನಲ್ಲಿ ಗುಜರಾತ್​ನ ಮೈಕ್ರಾನ್ ಸೆಮಿ ಕಂಡಕ್ಟರ್​ ಸ್ಥಾವರದಿಂದ ಬರಲಿದೆ.

ಇದನ್ನೂ ಓದಿ : ಚೀನಾದ ಚಾಂಗ್'ಇ-6 ಯಶಸ್ವಿ ಉಡಾವಣೆ: ಚಂದ್ರನ ಮಣ್ಣು ಭೂಮಿಗೆ ತರಲಿದೆ ನೌಕೆ - China Lunar Mission

ETV Bharat Logo

Copyright © 2025 Ushodaya Enterprises Pvt. Ltd., All Rights Reserved.