ಎರ್ನಾಕುಲಂ (ಕೇರಳ) : ಜಗತ್ತಿನ ಅತ್ಯಂತ ದೊಡ್ಡ ಮಸೀದಿ ಬಗ್ಗೆ ತಿಳಿದಿರುವುದು ಸಾಮಾನ್ಯ. ಆದರೆ, ವಿಶ್ವದ ಅತಿ ಚಿಕ್ಕ ಮಸೀದಿ ಎಲ್ಲಿದೆ. ಹೇಗಿದೆ ಎಂಬುದು ಗೊತ್ತೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಆಲ್ ಮುಬಾಶೀರಿನ್ ಮಸೀದಿ ಇದು ಜಗತ್ತಿನ ಅತಿ ಸಣ್ಣ ಮಸೀದಿ ಜೊತೆಗೆ ಇದನ್ನು ಕೇರಳದ ಎರ್ನಾಕುಲಂನ ಕೊತಮಂಗಲಂನ ನೆಲದಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದೇ ಕಾರಣಕ್ಕೆ ಇದು ಕುತೂಹಲ ಮತ್ತು ಅಚ್ಚರಿಯನ್ನು ಮೂಡಿಸಿದೆ. ಇದು ಕೇವಲ ಪ್ರಾರ್ಥನಾ ಮಂದಿರವಾಗಿರದೇ ಧಾರ್ಮಿಕ ಸಾಮರಸ್ಯದ ಕೇಂದ್ರವಾಗಿಯೂ ಇದನ್ನು ಮಸೀದಿ ನಿರ್ವಹಣಾ ಸಮಿತಿ ರೂಪಿಸಿದೆ. ಎಂಎಜಿಎಸ್ ಚಾರಿಟಬಲ್ ಸೊಸೈಟಿ ಅಧ್ಯಕ್ಷ ಯೂನಸ್ ಶಾ ಖಾದ್ರಿ ಚಿಸ್ತಿ ನಾಯಕತ್ವದಲ್ಲಿ ಈ ಮಸೀದಿ ನಿರ್ಮಾಣ ಮಾಡಲಾಗಿದ್ದು, ಕೊತ್ತಮಂಗಲಮ್ನ ಪಚೆತಿಯಲ್ಲಿರುವ ಸೂಫಿ ಕೇಂದ್ರದಿಂದ ಇದನ್ನು ನಡೆಸಲಾಗುತ್ತಿದೆ. ಈ ಮಸೀದಿಯು ಭಕ್ತರಿಗೆ 2024ರ ಫೆ. 3ರಿಂದ ಪ್ರವೇಶಕ್ಕೆ ಮುಕ್ತವಾಗಿದೆ.
60 ದಿನಗಳಲ್ಲಿ ನಿರ್ಮಾಣವಾದ ಈ ಮಸೀದಿ ನೆಲದಡಿಯಲ್ಲಿ 80 ಚದರ್ ಮೀಟರ್ ಇದೆ. ನೆಲದಿಂದ 65 ಅಡಿ ಆಳದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಜನರ ನಂಬಿಕೆಗೆ ಅನುಗುಣವಾಗಿ ಎಲ್ಲಾ ಧರ್ಮದ ಗುಂಪುಗಳಿಗೂ ಇಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಇಲ್ಲಿ ಧ್ಯಾನಕ್ಕೆ ಬೆಂಚ್ ಹಾಗೂ ವಿಶೇಷ ಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ.
ಈ ಮಸೀದಿ ದ್ವಾರ ತೆರೆಯುತ್ತಿದ್ದಂತೆ, ನೆಲ ಮಾಳಿಗೆಗೆ ಹೋಗಲು ಮೆಟ್ಟಿಲುಗಳಿವೆ. ಮೆಟ್ಟಿಲು ಇಳಿದು ಸಾಗಿದಾಗ ಎಡ ಮತ್ತು ಬಲ ಭಾಗದಲ್ಲಿ ಸುರಂಗವನ್ನು ಕಾಣಬಹುದಾಗಿದೆ. ಇದು ಧ್ಯಾನಕ್ಕಾಗಿ ಇಟ್ಟಿರುವ ಬೆಂಚ್ಗಳನ್ನು ಕಾಣಬಹುದಾಗಿದೆ. ಈ ಸುರಂಗವನ್ನು ದೊಡ್ಡ ಬಂಡೆಯನ್ನು ಡ್ರಿಲ್ ಮಾಡಿ ನಿರ್ಮಾಣ ಮಾಡಲಾಗಿದೆ. ಈ ಹಿನ್ನೆಲೆ ಈ ಮಸೀದಿ ಸುರಕ್ಷಿತ ವಿನ್ಯಾಸವನ್ನು ಹೊಂದಿದೆ.
ಎಡ ಸುರಂಗದಲ್ಲಿ ಸಾಗಿದಾಗ ವಿಶ್ವದ ಸಣ್ಣ ಮಸೀದಿಗೆ ನೀವು ತಲುಪುತ್ತೀರಿ. ಇದು ಪ್ರತಿಯೊಬ್ಬರಲ್ಲೂ ಕುತೂಹಲ ಮೂಡಿಸುತ್ತದೆ. ಮಸೀದಿಯು ಪ್ರತಿಯೊಬ್ಬರಿಗೂ ವಿಶೇಷ ಅದ್ಭುತ ಅನುಭವ ನೀಡುತ್ತದೆ. ಅನೇಕರು ಇದರ ಸುಂದರ ವಿನ್ಯಾಸ ನೋಡಲು ಎಂದು ಆಗಮಿಸುತ್ತಾರೆ, ಇದು ನಿಮಗೆ ಹೊಸ ಸಂತಸ ಮೂಡಿಸುತ್ತದೆ.
ಎಲ್ಲ ಧರ್ಮದವರು ಒಂದೇ ಸೂರಿನಡಿ ಪ್ರಾರ್ಥನೆ ಸಲ್ಲಿಸುವ ಮೂಲಕ ನಮ್ಮ ನಡುವಿನ ಪೈಪೋಟಿಯನ್ನು ಹೋಗಲಾಡಿಸಿ, ಆ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆ ಎಂಬ ನಂಬಿಕೆಯೇ ಈ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಸೂಫಿ ಆಧ್ಯಾತ್ಮಿಕ ಮಾಸ್ಟರ್ ಹಾಗೂ ಸೊಸೈಟಿ ಅಧ್ಯಕ್ಷರಾಗಿರುವ ಯೂನಸ್ ಶಾ ಖಾದ್ರಿ ಚಿಸ್ತಿ ತಿಳಿಸಿದ್ದಾರೆ.
ಇದನ್ನೂ ಓದಿ: ಏಕತೆಯ 'ಮಹಾಯಜ್ಞ' ಮುಕ್ತಾಯಗೊಂಡಿದೆ: ಐತಿಹಾಸಿಕ ಬೃಹತ್ ಮಹಾಕುಂಭಮೇಳದ ಬಗ್ಗೆ ಪ್ರಧಾನಿ ಮೋದಿ ಬಣ್ಣನೆ
ಇದನ್ನೂ ಓದಿ: ಮಹಾಕುಂಭ ಮೇಳದಿಂದ 3 ಲಕ್ಷ ಕೋಟಿ ರೂ. ಆದಾಯ ; ಉತ್ತರ ಪ್ರದೇಶಕ್ಕೆ ಆರ್ಥಿಕ ಬಲ