ತಿರುವನಂತಪುರಂ (ಕೇರಳ): ಶುಕ್ರವಾರ ಸಂಜೆ ತಿರುವನಂತಪುರಂನಲ್ಲಿ 26 ವರ್ಷದ ಯುವಕನ ತಲೆಗೆ ದುಷ್ಕರ್ಮಿಗಳ ತಂಡವು ಕಬ್ಬಿಣ ರಾಡ್ ಮತ್ತು ಕಲ್ಲು ಎತ್ತು ಹಾಕಿ ಬರ್ಬರವಾಗಿ ಹತ್ಯೆ ಮಾಡಿದೆ. ಮೃತರನ್ನು ಕರಮಾನ ಸ್ಥಳೀಯ ಅಖಿಲ್ ಎಂದು ಗುರುತಿಸಲಾಗಿದೆ. ಕಳೆದ ವಾರ ಬಾರ್‌ನಲ್ಲಿ ನಡೆದ ಗಲಾಟೆಯೇ ಈ ಕೊಲೆಗೆ ಕಾರಣವಾಗಿದೆ ಎಂದು ಕರಮಾನ ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಮೂವರು ಸದಸ್ಯರ ತಂಡ ಅಖಿಲ್‌ನನ್ನು ಆತನ ಮನೆಯಿಂದ ಕಿಡ್ನಾಪ್ ಮಾಡಿ ಇನ್ನೋವಾ ಕಾರಿನಲ್ಲಿ ತಿರುವನಂತಪುರಂನ ಕಿಮನಂಗೆ ಕರೆತಂದಿತ್ತು. ಕ್ಯಾಮನಂ ಜಂಕ್ಷನ್ ತಲುಪಿದ ನಂತರ ಅವರು ವಾಹನವನ್ನು ನಿಲ್ಲಿಸಿ ಕಾರಿನಿಂದ ಹೊರಗೆ ಎಸೆದರು. ಈ ವೇಳೆ, ಆರೋಪಿಗಳ ಕೈಯಿಂದ ತಪ್ಪಿಸಿಕೊಳ್ಳಲು ಅಖಿಲ್ ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ಏಕೆಂದರೆ ಆರೋಪಿಗಳು ಕಬ್ಬಿಣದ ರಾಡ್‌ನಿಂದ ಆತನ ತಲೆ ಸೇರಿದಂತೆ ಸಿಕ್ಕ ಸಿಕ್ಕ ಜಾಗಕ್ಕೆ ಹೊಡೆಯಲು ಪ್ರಾರಂಭಿಸಿದರು. ಅಷ್ಟೇ ಅಲ್ಲ ಮೂವರು ದುಷ್ಕರ್ಮಿಗಳಲ್ಲಿ ಒಬ್ಬನು ಹತ್ತಾರು ಬಾರಿ ಅಖಿಲ್ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಅಖಿಲ್ ಜೀವ ಹೋಗಿದ್ದರೂ ಆರೋಪಿ ಮೃತ ದೇಹದ ಮೇಲೆ ಕಲ್ಲು ಎತ್ತಿ ಹಾಕುತ್ತಲೇ ಇದ್ದ.
ಈ ಭೀಕರ ದಾಳಿಯ ಸಂಪೂರ್ಣ ದೃಶ್ಯ ಪಕ್ಕದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ದೃಶ್ಯಾವಳಿಗಳನ್ನು ಪಡೆದುಕೊಂಡಿದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ. ಹಗಲು ಹೊತ್ತಿನಲ್ಲಿ ಈ ಘೋರ ಘಟನೆ ನಡೆದಿದ್ದು, ಸಿಸಿಟಿವಿ ವಿಡಿಯೋ ಹಿನ್ನೆಲೆಯಲ್ಲಿ ಜನನಿಬಿಡ ರಸ್ತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ದಾಳಿಕೋರರು ಸ್ಥಳದಿಂದ ಪರಾರಿಯಾದ ನಂತರ ಹತ್ತಿರದ ಜನರು ಅಖಿಲ್‌ನೊಂದಿಗೆ ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಧಾವಿಸಿದರು, ಆದರೆ, ವೈದ್ಯರು ಅಖಿಲ್ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು.
ಅಖಿಲ್ ಕರಮಾನದಲ್ಲಿರುವ ತನ್ನ ಮನೆಯ ಸಮೀಪ ಅಲಂಕಾರಿಕ ಮೀನು ಮಾರಾಟದ ಪೆಟ್ ಶಾಪ್ ನಡೆಸುತ್ತಿದ್ದ, ಗೂಂಡಾಗಳ ಗ್ಯಾಂಗ್ ನಡುವಿನ ಪ್ರತೀಕಾರ ಕ್ರೂರ ಹತ್ಯೆಯಲ್ಲಿ ಅಂತ್ಯಗೊಂಡಿದೆ ಎಂದು ಪೊಲೀಸರು ಸುಳಿವು ನೀಡಿದ್ದಾರೆ. ಸಿಸಿಟಿವಿ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ದುಷ್ಕರ್ಮಿಗಳನ್ನು ಪೊಲೀಸರು ಈಗಾಗಲೇ ಗುರುತಿಸಿದ್ದು, ಶೋಧ ಕಾರ್ಯಾಕೈಗೊಂಡಿದ್ದಾರೆ.
ಓದಿ: ಕೊಡಗು: ಹತ್ಯೆಗೈದು ಬಾಲಕಿಯ ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಅರೆಸ್ಟ್ - Kodagu Girl murder case