ETV Bharat / bharat

ರಾಜಸ್ಥಾನ: ನಿರ್ಮಾಣ ಹಂತದ ಕಟ್ಟಡದ ಮೇಲ್ಚಾವಣಿ ಕುಸಿದು ನಾಲ್ವರು ಸಾವು - Roof Collapse - ROOF COLLAPSE

ಸಮುದಾಯ ಭವನ ಕಟ್ಟಡದ ಮೇಲ್ಚಾವಣಿ ಕುಸಿದು ನಾಲ್ವರು ಪ್ರಾಣ ಕಳೆದುಕೊಂಡ ಘಟನೆ ಕಳೆದ ರಾತ್ರಿ 9.30ರ ಸುಮಾರಿಗೆ ರಾಜಸ್ಥಾನದಲ್ಲಿ ನಡೆದಿದೆ.

under construction building Collapses in Rajsamand 4 died 9 in Critical Condition
ರಕ್ಷಣಾ ಕಾರ್ಯಾಚರಣೆ (ETV Bharat)
author img

By ETV Bharat Karnataka Team

Published : Jul 30, 2024, 10:52 AM IST

ರಾಜಸಮಂದ್(ರಾಜಸ್ಥಾನ): ನಿರ್ಮಾಣ ಹಂತದ ಸಮುದಾಯ ಭವನ ಕಟ್ಟಡದ ಮೇಲ್ಚಾವಣಿ ಕುಸಿದು ನಾಲ್ವರು ಸಾವನ್ನಪ್ಪಿದ ಘಟನೆ ರಾಜಸಮಂದ್‌ ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿತು. ಸತತ ಐದು ಗಂಟೆಗಳ ಕಾರ್ಯಾಚರಣೆಯ ಬಳಿಕ ಅವಶೇಷಗಳಡಿ ಸಿಲುಕಿದ್ದ 9 ಜನರನ್ನು ರಕ್ಷಿಸಲಾಯಿತು. ಗಾಯಾಳುಗಳನ್ನು ನಾಥದ್ವಾರದ ಗೋವರ್ಧನ್ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಭನ್ವರ್ಲಾಲ್​ ತಿಳಿಸಿದರು.

ಚಿಕ್ಲ್ವಾಸ್ ಗ್ರಾಮದಲ್ಲಿ ಮೇಘವಾಲ್ ಸಮುದಾಯದವರು ಸಮುದಾಯ ಭವನ ನಿರ್ಮಿಸುತ್ತಿದ್ದರು. ಮೇಲ್ಚಾವಣಿಯ ನೆರವಿಗೆ ಇಟ್ಟಿದ್ದ ಬಿದಿರಿನ ಕಂಬವನ್ನು ತೆಗೆದು ಹಾಕಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಕಟ್ಟಡದಲ್ಲಿ ಸ್ವಚ್ಛತೆ ಮತ್ತು ಪೈಂಟಿಂಗ್​​ಗಾಗಿ 13 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಸಾಯಂ ಕಾ ಖೇಡಾ ಪಂಚಾಯತ್‌ ಸಮುದಾಯ ಭವನದ ಕಟ್ಟಡ ನಿರ್ಮಾಣ ಕಾರ್ಯ ನೋಡಲು ತೆರಳಿದ್ದ ವಾರ್ಡ್​ ಪಂಚ್​​ (ಗ್ರಾಮದ ಮುಖ್ಯಸ್ಥ) ಹರಿಲಾಲ್​ ಕೂಡ ಸಿಲುಕಿದ್ದು, ತಮ್ಮ ಫೋನ್​ನಿಂದ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದರು. ಬಳಿಕ ಸ್ಥಳಕ್ಕೆ ಬಂದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿ ಭನ್ವರ್‌ಲಾಲ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ತ್ರಿಪಾಠಿ ಸ್ಥಳಕ್ಕಾಗಮಿಸಿ ಕಾರ್ಯಾಚರಣೆಗೆ ವೇಗ ನೀಡಿದರು.

ಇದನ್ನೂ ಓದಿ: ಹಳಿ ತಪ್ಪಿದ ಹೌರಾ-ಮುಂಬೈ ಮೇಲ್​ ಎಕ್ಸ್​ಪ್ರೆಸ್‌ನ 18 ಬೋಗಿಗಳು; ಇಬ್ಬರು ಸಾವು, 18 ಪ್ರಯಾಣಿಕರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.