ETV Bharat / bharat

'ತೆಲಂಗಾಣ ರೈಸಿಂಗ್'​​ ಅನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ: ಸಿಎಂ ರೇವಂತ್​ ರೆಡ್ಡಿ - TELANGANA RISING

ತೆಲಂಗಾಣ ರೈಸಿಂಗ್​ ಮೂಲಕ ರಾಜ್ಯದ ಆರ್ಥಿಕತೆಯನ್ನು ವೃದ್ಧಿಸುವ ನಮ್ಮ ಯೋಜನೆಯ ಕುರಿತು ಅನೇಕರಿಗೆ ನಂಬಿಕೆ ಇರಲಿಲ್ಲ. ಆದರೆ ಇಡೀ ಜಗತ್ತೇ ಇಂದು ಇದಕ್ಕೆ ಸಾಕ್ಷಿಯಾಗುತ್ತಿದೆ ಸಿಎಂ ರೇವಂತ್​ ರೆಡ್ಡಿ ಹೇಳಿತದ್ದಾರೆ.

Telangana CM Revanth Reddy once again Reiterated Telangana Rising
ತೆಲಂಗಾಣ ಸಿಎಂ ರೇವಂತ್​ ರೆಡ್ಡಿ (ANI)
author img

By ETV Bharat Karnataka Team

Published : Feb 27, 2025, 3:49 PM IST

ಹೈದರಾಬಾದ್​: ತೆಲಂಗಾಣದ ಟ್ರಿಲಿಯನ್​ ಡಾಲರ್​ ಆರ್ಥಿಕತೆ ಗುರಿಯನ್ನು ಪುನರುಚ್ಚರಿಸಿದ ಸಿಎಂ ರೇವಂತ್​ ರೆಡ್ಡಿ, ತೆಲಂಗಾಣ ರೈಸಿಂಗ್ ಅನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.

ದೇಶದಲ್ಲಿ ಹೈದರಾಬಾದ್​ ವೇಗವಾಗಿ ಬೆಳೆಯುತ್ತಿರುವ ನಗರಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ವರ್ಷದೊಳಗೆ ದೇಶ, ವಿದೇಶದಿಂದ ಹೆಚ್ಚಿನ ಹೂಡಿಕೆಯನ್ನು ರಾಜ್ಯ ಆಕರ್ಷಿಸಿದೆ ಎಂದು ಹೇಳಿದ್ದಾರೆ.

ಮಾದಾಪುರದಲ್ಲಿನ ಎಚ್​ಸಿಎಲ್​ ಟೆಕ್ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾ​ತನಾಡಿದ ಅವರು, ತೆಲಂಗಾಣ ರೈಸಿಂಗ್​ ಮೂಲಕ ರಾಜ್ಯದ ಆರ್ಥಿಕತೆಯನ್ನು ವೃದ್ಧಿಸುವ ನಮ್ಮ ಯೋಜನೆಯ ಕುರಿತು ಅನೇಕರಿಗೆ ನಂಬಿಕೆ ಇರಲಿಲ್ಲ. ಆದರೆ ಇಡೀ ಜಗತ್ತೇ ಇಂದು ಇದಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು.

ಇಂದು ಇವಿ ಅಳವಡಿಕೆಯಲ್ಲಿ ಹೈದರಾಬಾದ್​ ನಂಬರ್​​ ಒನ್​ ಆಗಿದೆ. ಗ್ರೀನ್​ ಎನರ್ಜಿ, ಲೈಫ್​ ಸೈನ್ಸ್, ಬಯೋಟೆಕ್ನಾಲಜಿ, ಕೌಶಲ್ಯ ಅಭಿವೃದ್ಧಿ, ಉತ್ಪಾದನೆ ಮತ್ತು ಕೃಷಿ ಅಭಿವೃದ್ಧಿಯಲ್ಲಿ ನಗರ​ ಮುಂಚೂಣಿಯಲ್ಲಿದೆ ಎಂದು ಸಿಎಂ ವಿವರಿಸಿದರು.

ತೆಲಂಗಾಣವನ್ನು ಒಂದು ಟ್ರಿಲಿಯನ್​ ಡಾಲರ್​ ಜಿಡಿಪಿ ರಾಜ್ಯವಾಗಿಸುವ ನಮ್ಮ ಯೋಜನೆಯ ಕುರಿತು ಅನೇಕರಿಗೆ ಭಿನ್ನ ಅಭಿಪ್ರಾಯವಿದೆ. ಕೆಲವರು ಇದನ್ನು ದೊಡ್ಡ ಕನಸು, ಸಾಧ್ಯವಿಲ್ಲ ಎನ್ನುತ್ತಾರೆ. ಎರಡು ದಾವೋಸ್​ ಪ್ರವಾಸದಲ್ಲಿ 41,000 ಕೋಟಿ ಮತ್ತು 1.78 ಲಕ್ಷ ಕೋಟಿ ರೂ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಈ ಗುರಿಯ ಮೌಲ್ಯ ಹೆಚ್ಚಾಗಿದೆ ಎಂದು ಹೇಳಿದರು.

ಕಳೆದ ಕೆಲವು ದಿನಗಳ ಹಿಂದೆ ಹೊಸ ತಂತ್ರಜ್ಞಾನ ಮತ್ತು ಅವಿಷ್ಕಾರದ ಅಮೆಗೆನ್​ ಕೇಂದ್ರಕ್ಕೆ ಚಾಲನೆ ನೀಡಲಾಗಿತ್ತು. ಇದು ದೇಶದ ಅತಿದೊಡ್ಡ ಲೈಫ್​ ಸೈನ್ಸ್​ ಕಂಪನಿಯಾಗಿದ್ದು, ವಿಶ್ವದ ಮಹತ್ವದ ಸಮ್ಮೇಳನಗಳು ಇಲ್ಲಿ ನಡೆಯುತ್ತದೆ ಎಂದು ರೆಡ್ಡಿ ತಿಳಿಸಿದರು. (ಐಎಎನ್​ಎಸ್​)

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಮುಂದುವರಿದ ಭಾರೀ ಮಳೆ, ಮಂಜು: ಯೆಲ್ಲೋ ಅಲರ್ಟ್​ ಘೋಷಣೆ

ಇದನ್ನೂ ಓದಿ: ಹಿಂದಿ ಅಸ್ಮಿತೆಯಿಂದ 25ಕ್ಕೂ ಹೆಚ್ಚು ಪ್ರಾಚೀನ ಮಾತೃಭಾಷೆಗಳು ಕಣ್ಮರೆ': ಸಿಎಂ ಸ್ಟಾಲಿನ್ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.