ಸತಾರ (ಮಹಾರಾಷ್ಟ್ರ): ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿ ನಾಯಕರು ಹೇಳಿಕೆ ಮಧ್ಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಕೂಡ ಬಿಜೆಪಿ ನಾಯಕರ ಮಾತಿಗೆ ಪುಷ್ಟಿ ಎಂಬಂತೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಸತಾರ ನಗರದಲ್ಲಿ ಸಿಎಂ ಏಕನಾಥ್ ಶಿಂಧೆ ಮಾತನಾಡುವ ಸಂದರ್ಭದಲ್ಲಿ ಕರ್ನಾಟಕದ ರಾಜಕೀಯದ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ನಾನು ಕರ್ನಾಟಕದ ಒಂದು ಕಾರ್ಯಕ್ರಮಕ್ಕೆ ತೆರಳಿದಾಗ ಅವರು ಹೇಳಿದ್ರು, ಕರ್ನಾಟಕದಲ್ಲಿಯೂ 'ನಾಥ್' ಆಪರೇಷನ್ ಮಾಡೋದಿದೆ ಅಂದ್ರು. ನಾನು ನಾಥ್ ಆಪರೇಷನ್ ಅಂದ್ರೆ ಏನು ಅಂತ ಕೇಳಿದೆ. ನೀವು ಮಹಾರಾಷ್ಟ್ರದ ಮಹಾಘಟಬಂಧನ ಸರ್ಕಾರ ಪತನ ಮಾಡಿದ್ರಿ.. ಹೀಗಾಗಿ ನಿಮ್ಮ ಅನುಭವ ನಮಗೆ ಬಹಳ ಅವಶ್ಯಕವಿದೆ ಎಂದು ಹೇಳಿದರು. ಇದರಿಂದ ಕರ್ನಾಟದಲ್ಲಿ ತುಂಬಾ ದಿನ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ ಎಂದು ಸಿಎಂ ಏಕನಾಥ್ ಶಿಂಧೆ ಹೇಳಿದರು.
ಲೋಕಸಭಾ ಚುನಾವಣೆ ಬಳಿಕ ಕರ್ನಾಟದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ನನಗೆ ಚುನಾವಣೆ ಮುಗಿದ ಬಳಿಕ ಅಲ್ಲಿನ ನಾಯಕರು ಕರ್ನಾಟಕಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ ಎಂದು ತಿಳಿಸಿದ್ದಾರೆ ಅಂತಾ ಸಭೆಯಲ್ಲಿ ಸಿಎಂ ಏಕನಾಥ್ ಸಿಂಧೆ ಹೇಳಿಕೆ ನೀಡಿದರು.
ಓದಿ: ದೆಹಲಿ ಸಿಎಂ ಕಚೇರಿ ಸಿಬ್ಬಂದಿಯಿಂದ ಅನುಚಿತ ವರ್ತನೆ: ಎಎಪಿ ನಾಯಕಿ ಸ್ವಾತಿ ಮಾಲಿವಾಲ್ ಆರೋಪ - Swati Maliwal