ಜಮ್ಮು: ಜಮ್ಮು ಕಾಶ್ಮೀರದಾದ್ಯಂತ ಭಾರೀ ಮಳೆ ಮುಂದುವರಿದಿದೆ. ಕಾಶ್ಮೀರ ಕಣಿವೆಯ ಮೇಲ್ಭಾಗ ಮತ್ತು ಜಮ್ಮು ಪ್ರದೇಶದಲ್ಲಿ ಹಿಮಪಾತವೂ ಕಂಡುಬಂದಿದೆ. ಗುರುವಾರ ಹಾಗೂ ಶುಕ್ರವಾರ ಭಾರೀ ಮಳೆ ಮತ್ತು ಹಿಮ ಬೀಳುವ ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಇಡೀ ಜಮ್ಮು ಮತ್ತು ಕಾಶ್ಮೀರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಭಾರೀ ಮಳೆಯಿಂದಾಗಿ ಜಮ್ಮು- ಶ್ರೀನಗರ ಹೆದ್ದಾರಿಯಲ್ಲಿ ಗುಡ್ಡಕುಸಿತ ಹಾಗೂ ಬಂಡೆಗಳು ಉರುಳಿ ಬಿದ್ದು ಹಲವೆಡೆ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆಯಿಂದ ಅವಶೇಷಗಳನ್ನು ತೆರವುಗೊಳಿಸಲು ಜನರು ಹಾಗೂ ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ. ಇದೀಗ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದು, ಎರಡೂ ಕಡೆಯಿಂದ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲಾದ ಮಳೆಯ ಮಾಹಿತಿ ಹೀಗಿದೆ.
ಶ್ರೀನಗರದಲ್ಲಿ 4.4 ಮಿ.ಮೀ., ಖಾಜಿಗುಂಡ್ 9.6 ಮಿ.ಮೀ., ಪಹಲ್ಗಾಮ್ 11.2 ಮಿ.ಮೀ., ಕುಪ್ವಾರಾ 16.7 ಮಿ.ಮೀ., ಕೊಕರ್ನಾಗ್ 38.6 ಮಿಮೀ, ಗುಲ್ಮಾರ್ಗ್ 23.8 ಮಿಮೀ (20.0 ಸೆಂ.ಮೀ ಹಿಮಪಾತ), ಪಂಪೋರ್ 5.5 ಮಿಮೀ, ಶ್ರೀನಗರ ವಿಮಾನ ನಿಲ್ದಾಣ 2.7 ಮಿಮೀ, ಅವಂತಿಪೋರಾ 5.0 ಮಿಮೀ, ಅನಂತ್‌ನಾಗ್ 9.0 ಮಿಮೀ, ಲಾರ್ನೂ 19.5 ಮಿಮೀ, ಪುಲ್ವಾಮಾ 5.0 ಮಿಮೀ, ಟ್ರಾಲ್ 8.0 ಮಿಮೀ, ಬುಡ್ಗಮ್ 5.0 ಮಿಮೀ, ಗಂದೇರ್ಬಲ್ 16.5 ಮಿಮೀ, ಬಾರಾಮುಲ್ಲಾ 24.0 ಮಿಮೀ, ಸೋಪೋರ್ 33.0 ಮಿಮೀ, ಬಂಡಿಪೋರಾ- 43.0 ಮಿಮೀ, ಶೋಪಿಯಾನ್ 3.0 ಮಿಮೀ, ಕುಲ್ಗಮ್ 14.0 ಮಿಮೀ, ಖುದ್ವಾನಿ 13.0 ಮಿಮೀ, ಸಂಗಮ್ - 2.0 ಮಿಮೀ, ಆಶಮ್ 33.5 ಮಿಮೀ, ವುಲರ್ 37.0 ಮಿಮೀ, ಬ್ಯಾಟ್‌ಕೂಟ್ 9.0 ಮಿಮೀ, ಡೋಡರ್‌ಹಾಮಾ 13.5 ಮಿಮೀ, ವೆರಿನಾಗ್ 30.3 ಮಿಮೀ, ಬಾಬಾಪೋರಾ 8.0 ಮಿಮೀ, ಚರರ್-ಐ-ಷರೀಫ್ 2.6 ಮಿಮೀ, ತಂಗ್ಮಾರ್ಗ್ 36.2 ಮಿಮೀ, ನೌಗಮ್ ಹಂದ್ವಾರ 46.6 ಮಿಮೀ, ಲೋಲಾಬ್ 24.2 ಮಿಮೀ ಮತ್ತು ಬುಮ್ಹಾಮಾ ಕುಪ್ವಾರಾ 24.0 ಮಿಮೀ ಮಳೆ ದಾಖಲಾಗಿದೆ.
ಜಮ್ಮು ಪ್ರದೇಶದಲ್ಲಿ, ಜಮ್ಮು 0.1 ಮಿಮೀ, ಬನಿಹಾಲ್ 76.2 ಮಿಮೀ, ಬಟೋಟ್ 6.7 ಮಿಮೀ, ಕತ್ರಾ 0.9 ಮಿಮೀ, ಭದೇರ್ವಾ 6.0 ಮಿಮೀ, ಕಥುವಾ 1.2 ಮಿಮೀ, ಉಧಂಪುರ್ 12.4 ಮಿಮೀ, ರಾಂಬನ್ 5.0 ಮಿಮೀ, ಪೂಂಚ್ 15.0 ಮಿಮೀ, ಕಿಶ್ತ್ವಾರ್ 9.0 ಮಿಮೀ, ರಾಜೌರಿ 2.0 ಮಿಮೀ, ರಿಯಾಸಿ 1.5 ಮಿಮೀ, ಸಾಂಬಾ 1.0 ಮಿಮೀ, ಚಾಥಾ 0.5 ಮಿಮೀ ಮತ್ತು ಬಕೋರ್ 0.5 ಮಿಮೀ ಮಳೆಯಾಗಿದೆ.
ಇದನ್ನೂ ಓದಿ: ನಾಳೆವರೆಗೆ ಬಿಸಿ ಗಾಳಿ : ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ