ಜೈಪುರ್: ಕಾನ್ಸ್ಟೇಬಲ್ವೊಬ್ಬರು ತಮ್ಮ ಮಹಿಳಾ ಸಹೋದ್ಯೋಗಿಯನ್ನು ಗುಂಡಿಕ್ಕಿ ಕೊಂದು ಬಳಿಕ ತಾವು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ. ಸದ್ಯ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಇಬ್ಬರನ್ನು ಚಿತ್ತೋರ್ಗಢದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಬೇಗುನ್ ಉಪ ಪೊಲೀಸ್ ವರಿಷ್ಠಾಧಿಕಾರಿ ಅಂಜಲಿ ಸಿಂಗ್ ಮತ್ತು ಸ್ಟೇಷನ್ ಹೌಸ್ ಆಫೀಸರ್ ರವೀಂದ್ರ ಸಿಂಗ್ ತಿಳಿಸಿದ್ದಾರೆ.
ಬೇಗುನ್ ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲಿರುವ ನಿವಾಸದಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಮಾಹಿತಿ ನೀಡಿದ ಚುತ್ತೋರ್ಗಢ ಎಸ್ಪಿ ಸುಧೀರ್ ಚೌದರಿ, ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಘಟನೆ ಹಿಂದಿನ ಉದ್ದೇಶ ಕುರಿತು ತನಿಖೆಗೆ ಮುಂದಾಗಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ವೈಯಕ್ತಿಕ ಸಮಸ್ಯೆಗಳ ಕಾರಣದಿಂದ ಈ ದಾಳಿ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.
ಇಬ್ಬರು ಕಾನ್ಸ್ಟೇಬಲ್ಗಳು ಪ್ರೊಬೆಷನರಿ ಅವಧಿ ಸೇವೆ ಸಲ್ಲಿಸುತ್ತಿದ್ದರು. ಒಂದೇ ಕಟ್ಟಡದಲ್ಲಿ ಪ್ರತ್ಯೇಕ ರೂಂನಲ್ಲಿ ಅವರು ವಾಸಿಸುತ್ತಿದ್ದರು. ಘಟನೆ ನಡೆದ ದಿನ ಕಾನ್ಸ್ಟೇಬಲ್ ಸಿಯಾರಾಮ್, ನಿತ್ಯದ ರೋಲ್ ಕಾಲ್ ಮುಗಿಸಿ ಬಂದೂಕಿನ ಜೊತೆ ರೂಮ್ಗೆ ಮರಳಿದ ಆತ ಮೂನಂಗಾಗಿ ಕಾದಿದ್ದಾರೆ.
ಪೂನಂ ಕೋಣೆ ಪ್ರವೇಶಿಸುತ್ತಿದ್ದಂತೆ ಆತ ಬಂದೂಕಿನಿಂದ ಎದೆಗೆ ಗುಂಡು ಹಾರಿಸಿದ್ದಾರೆ. ಬಳಿಕ ಅದೇ ಬಂದಕಿನಿಂದ ಸ್ವಯಂ ಗುಂಡು ಹಾರಿಸಿಕೊಂಡಿದ್ದಾರೆ. ಭಾರೀ ಶಬ್ಧ ಹಿನ್ನೆಲೆ ತಕ್ಷಣಕ್ಕೆ ಸುತ್ತಮುತ್ತಲಿನ ಜನ ಸ್ಥಳಕ್ಕೆ ಆಗಮಿಸಿ, ಗಾಯಗೊಂಡಿದ್ದ ಇಬ್ಬರನ್ನು ಬೇಗನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಅವರನ್ನು ಚಿತ್ತೋರ್ಗಢಗೆ ಸ್ಥಳಾಂತರಿಸಲಾಯಿತು. ಅವರಿಬ್ಬರ ಸ್ಥಿತಿ ಚಿಂತಾಜನಜವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಬೆಗನ್ ಉಪ ಜಿಲ್ಲಾ ಆಸ್ಪತ್ರೆ ವೈದ್ಯರಾದ ದಿನೇಶ್ ಧಕರ್ ಮಾತನಾಡಿ, ಮಹಿಳಾ ಕಾನ್ಸ್ಟೇಬಲ್ ಎದೆಯನ್ನು ಬುಲೆಟ್ ಸೀಳಿದ್ದು, ಅವರ ಪರಿಸ್ಥಿತಿ ತೀವ್ರ ಚಿಂತಾಜನಕವಾಗಿದೆ ಎಂದರು.
ಜಿಲ್ಲಾಧಿಕಾರಿ ಅಲೋಕ್ ರಂಜನ್ ಕೂಡ ಆಸ್ಪತ್ರೆಗೆ ಆಗಮಿಸಿ ಪ್ರಕರಣದ ಕುರಿತು ಮಾಹಿತಿ ಪಡೆದರು.
ಇದನ್ನೂ ಓದಿ: ಭಾರತದಲ್ಲಿ ಪ್ರತಿವರ್ಷ 41 ಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ, ತಮಿಳುನಾಡಿನಲ್ಲಿ ಅತ್ಯಧಿಕ