ರೇವಾ (ಮಧ್ಯಪ್ರದೇಶ) : ಸ್ನೇಹಿತರೊಂದಿಗೆ ಆಟವಾಡುವಾಗ ಜಮೀನಿನಲ್ಲಿದ್ದ ಬಾಲಕನೊಬ್ಬ 60 ಅಡಿ ಆಳದ ತೆರೆದ ಬೋರ್‌ವೆಲ್‌ಗೆ ಬಿದ್ದಿರುವ ಘಟನೆ ಶುಕ್ರವಾರ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಬೋರ್‌ವೆಲ್‌ಗೆ ಬಿದ್ದ ಬಾಲಕನನ್ನು ರೇವಾ ಜಿಲ್ಲೆಯ ಜಾನೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣಿಕಾ ಗ್ರಾಮದ ಮಯೂರ್ (6) ಎಂದು ಗುರುತಿಸಲಾಗಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ಜರುಗಿದೆ.
ಇತ್ತ ಬಾಲಕ ಬೋರ್‌ವೆಲ್‌ಗೆ ಬೀಳುತ್ತಿದ್ದಂತೆ ಜೊತೆಗಿದ್ದ ಮಕ್ಕಳು ಮನೆಗೆ ಓಡಿ ಬಂದು ಪೋಷಕರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಮನೆಯವರು ಹಾಗೂ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಇನ್ನೊಂದೆಡೆ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬಾಲಕನಿಗೆ ಉಸಿರಾಡಲು ಯಾವುದೇ ತೊಂದರೆಯಾಗದಂತೆ ಬೋರ್‌ವೆಲ್ ನೊಳಗೆ ಆಮ್ಲಜನಕವನ್ನು ಪೂರೈಸಲಾಗುತ್ತಿದೆ.
ಮಗು ಬಿದ್ದಿರುವ ಬೋರ್‌ವೆಲ್‌ಗೆ ಸಮಾನಾಂತರವಾಗಿ ಜೆಸಿಬಿ ಮೂಲಕ ಮತ್ತೊಂದು ಬೋರ್‌ವೆಲ್ ಕೊರೆದು ರಕ್ಷಿಸಲು ರಕ್ಷಣಾ ತಂಡ ಮುಂದಾಗಿದೆ. ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಮಗುವನ್ನು ಸುರಕ್ಷಿತವಾಗಿ ಹೊರತರಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಎಸ್‌ಡಿಆರ್‌ಎಫ್, ಪೊಲೀಸ್ ಮತ್ತು ಜಿಲ್ಲಾಡಳಿತ ಒಟ್ಟಾಗಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಮಾರ್ಚ್‌ನಲ್ಲಿ ಪಶ್ಚಿಮ ದೆಹಲಿಯ ಕೇಶೋಪುರ್ ಮಂಡಿ ಪ್ರದೇಶದಲ್ಲಿ ದೆಹಲಿ ಜಲ ಮಂಡಳಿಯ ನೀರು ಶುದ್ಧೀಕರಣ ಘಟಕದಲ್ಲಿ ಮಗುವೊಂದು 40 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿತ್ತು. ಕೂಡಲೇ ಮಗುವನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಇದನ್ನೂ ಓದಿ : ವಿಜಯಪುರ: ಕೊಳವೆಬಾವಿಯಿಂದ ರಕ್ಷಿಸಲ್ಪಟ್ಟ ಸಾತ್ವಿಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್ - ಲಚ್ಯಾಣದಲ್ಲಿ ಸಂಭ್ರಮ - SATVIK RETURNS TO HOME