ಗಂಗಾವತಿಯಲ್ಲಿ ಭಾರಿ ಮಳೆ; 500ಕ್ಕೂ ಹೆಚ್ಚು ಎಕರೆಯಲ್ಲಿದ್ದ ಭತ್ತ ಜಲಾವೃತ - Heavy Rain In Gangavathi
🎬 Watch Now: Feature Video
ಗಂಗಾವತಿ: ಸೋಮವಾರ ಮಧ್ಯರಾತ್ರಿ ಸುರಿದ ಜೋರು ಮಳೆಯಿಂದಾಗಿ ಗಂಗಾವತಿ, ಕಾರಟಗಿ ತಾಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಶದ ಆತಂಕ ಎದುರಾಗಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಈಗಾಗಲೇ ಭತ್ತದ ನಾಟಿ ಆರಂಭವಾಗಿ ತಿಂಗಳು ಕಳೆದಿದೆ. ಆದರೆ, ಮಂಗಳವಾರ ನಸುಕಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಭತ್ತದ ಗದ್ದೆಗೆ ಮಳೆ ನೀರು ನುಗ್ಗಿದೆ. ಕಾರಟಗಿ ತಾಲೂಕಿನ ಹಾಲಸಮುದ್ರ-ಬೂದಗುಂಪಾ ಮತ್ತು ತಿಮ್ಮಾಪೂರ ಗ್ರಾಮಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಎಕರೆ ಭತ್ತ ಜಲಾವೃತವಾಗಿದೆ. ಭತ್ತ ಸಂಗ್ರಹಿಸುವ ಉದ್ದೇಶಕ್ಕೆ ನಿರ್ಮಾಣ ಮಾಡಲಾಗಿದ್ದ ಗೋದಾಮುಗಳು ಮಳೆ ನೀರಿನಲ್ಲಿ ಮುಳುಗಿವೆ.