ಧಾರಾಕಾರ ಮಳೆಗೆ ತತ್ತರಿಸಿದ ಹೈದರಾಬಾದ್: ವಿಡಿಯೋ ನೋಡಿ - ಮಳೆಯಿಂದ ಹೈದ್ರಾಬಾದ್ನಲ್ಲಿ ಜನ ಜೀವನ ಅಸ್ತವ್ಯಸ್ತ
🎬 Watch Now: Feature Video
ಹೈದ್ರಾಬಾದ್ (ತೆಲಂಗಾಣ): ನೆರೆ ರಾಜ್ಯ ತೆಲಂಗಾಣದಾದ್ಯಂತ ಬುಧವಾರ ಬೆಳಗಿನ ಜಾವ ಏಕಾಏಕಿ ಧಾರಾಕಾರ ಮಳೆ ಸುರಿಯಿತು. ಇದರಿಂದ ರಾಜಧಾನಿ ಹೈದರಾಬಾದ್ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜನರು ತೊಂದರೆ ಅನುಭವಿಸಿದರು. ಕೆಲವೆಡೆಗಳಲ್ಲಿ ಜಲಾವೃತ್ತಗೊಂಡಿದ್ದ ಮನೆಗಳಿಂದ ಜನರನ್ನು ಬೋಟ್ಗಳ ಮೂಲಕ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಮಂಗಳವಾರ ಸಂಜೆಯಿಂದ ಬೀಸಿದ ಗಾಳಿಗೆ ಮರಗಳು ಧರೆಗುರುಳಿದಿದ್ದು, ಹಲವೆಡೆಗಳಲ್ಲಿ ಬೆಳೆಗಳು ಸಹ ಹಾನಿಗೀಡಾಗಿವೆ. ಕೆಂಡದಂತಹ ಬಿಸಿಲಿಂದ ಬೆಂದ ಭೂಮಿಗೆ ವರುಣ ತಂಪೆರೆದಂತೆಯೂ ಆಗಿದೆ.