ವಾಹನ ತಪಾಸಣೆಗೆ ಹೋದ RTO ಅಧಿಕಾರಿಗೆ ಅವಾಜ್ ಹಾಕಿದ ವ್ಯಕ್ತಿ: ವಿಡಿಯೋ ವೈರಲ್ - ವಾಹನ ತಪಾಸಣೆಗೆ ಹೋದ ಆರ್ ಟಿಒ ಅಧಿಕಾರಿಗೆ ಅವಾಜ್ ಹಾಕಿದ ವ್ಯಕ್ತಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10468215-thumbnail-3x2-abc.jpg)
ವಾಹನ ತಪಾಸಣೆ ಮಾಡಲು ಹೋದ ಆರ್‌ಟಿಒ ಅಧಿಕಾರಿಗೆ ಜೀಪ್ ಅಡ್ಡಗಟ್ಟಿ ಅವಾಜ್ ಹಾಕಿರುವ ಘಟನೆ ಮೈಸೂರಿನ ರಾಜೀವ್ ನಗರದ ರಿಂಗ್ ರಸ್ತೆ ಬಳಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜೀವ್ ನಗರ ರಸ್ತೆಯಲ್ಲಿ ಟಿಪ್ಪರ್ ವಾಹನ ತಪಾಸಣೆ ಮಾಡುತ್ತಿದ್ದ ಮೈಸೂರಿನ ಪೂರ್ವ ವಲಯ ಆರ್.ಟಿ.ಒ ದೀಪಕ್ ಎಂಬವರಿಗೆ ಇಮ್ರಾನ್ ಎಂಬಾತ ಅವಾಜ್ ಹಾಕಿದ್ದಾನೆ. ಉದಯಗಿರಿ, ಶಾಂತಿನಗರ ಜನ ನಮ್ಮ ಪವರ್ ತೋರಿಸಿ ಎಂದು ಜನರನ್ನು ಕರೆದಿದ್ದಾನೆ. ನಾನು ಆ್ಯಂಟಿ ಕರಪ್ಷನ್ ಬೋರ್ಡ್ ಮೆಂಬರ್ ಎಂದು ಹೇಳಿಕೊಂಡಿರುವ ಇಮ್ರಾನ್, ಆರ್.ಟಿ.ಒ ಅಧಿಕಾರಿ ಜೀಪ್ ಮುಂದೆ ತನ್ನ ಕಾರು ನಿಲ್ಲಿಸಿ ಅಡ್ಡಗಟ್ಟಿ ಅವಾಂತರ ಸೃಷ್ಟಿಸಿದ್ದಾನೆ.
TAGGED:
Threat to RTO officer