ರಾಜ್ಯ ಸರ್ಕಾರದ ಬಜೆಟ್ ರೈತರ ಪರವಾಗಿದೆ, ಇದು ಸ್ವಾಗತಾರ್ಹ: ಮಹೇಂದ್ರ ಲದ್ದಡ - ಈ ಬಾರಿ ಬಜೆಟ್ ಪೂರಕ ಹಾಗೂ ರೈತ ಪರವಾಗಿದೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6304848-thumbnail-3x2-ygfgy.jpg)
ಹುಬ್ಬಳ್ಳಿ: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಇಂದು ಮಂಡನೆ ಮಾಡಿರುವ ಬಜೆಟ್ ರೈತರ ಪರವಾದ ಬಜೆಟ್ ಆಗಿದ್ದು, ಇದು ಸ್ವಾಗತಾರ್ಹವಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ ಹೇಳಿದರು. ಬಜೆಟ್ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಯಡಿಯೂರಪ್ಪ ಅವರು ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಕನಸನ್ನು ಇಟ್ಟುಕೊಂಡು ಬಜೆಟ್ ಮಂಡನೆ ಮಾಡಿದ್ದಾರೆ ಎಂದರು. ಮಹದಾಯಿ ಯೋಜನೆಗೆ 500 ಕೋಟಿ ರೂ. ಬಜೆಟ್ನಲ್ಲಿ ನೀಡಿರುವುದು ವಿಶೇಷವಾಗಿದೆ. ಶಿಕ್ಷಣ, ಸಾರ್ವಜನಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಒಟ್ಟಾರೆಯಾಗಿ ಈ ಬಾರಿ ಬಜೆಟ್ ಪೂರಕ ಹಾಗೂ ರೈತ ಪರವಾಗಿದೆ ಎಂದರು.