'ಈಟಿವಿ ಭಾರತ'ದೊಂದಿಗೆ ಪೇಜಾವರ ಶ್ರೀಗಳನ್ನು ಸ್ಮರಿಸಿಕೊಂಡ ಸಿದ್ಧಲಿಂಗ ಸ್ವಾಮೀಜಿ - Sri Siddhalinga Swamiji of Siddaganga mutt condolence
🎬 Watch Now: Feature Video
ತುಮಕೂರು: ಇಂದು ವಿಧಿವಶರಾಗಿರುವ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಸಿದ್ದಗಂಗಾ ಮಠದೊಂದಿಗೆ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಅವರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು ಎಂಬುದನ್ನು ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸ್ಮರಿಸಿಕೊಂಡರು.
'ಈಟಿವಿ ಭಾರತ' ದೊಂದಿಗೆ ಮಾತನಾಡಿದ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿನ ಶ್ರೀ ಶಿವಕುಮಾರ ಸ್ವಾಮೀಜಿಯವರ ಸೇವೆಯನ್ನು ಬೇರೆ ಯಾರೂ ಕೂಡ ಮಾಡಲು ಸಾಧ್ಯವಿಲ್ಲ ಎಂಬ ಮಾತನ್ನು ಪೇಜಾವರ ಶ್ರೀಗಳು ಆಗಾಗ್ಗೆ ಹೇಳುತ್ತಿದ್ದರು ಎಂಬುದನ್ನೂ ಈ ವೇಳೆ ನೆನಪು ಮಾಡಿಕೊಂಡರು.