ಕೊರೊನಾ ಸೋಂಕಿತ ಸಾವು ಪ್ರಕರಣ: ಸಿರಾದ ಬೇಗಂ ಮೊಹಲ್ಲಾ ಸೀಲ್ ಡೌನ್ - tumakuru latest news
🎬 Watch Now: Feature Video

ಮಹಾಮಾರಿ ಕೊರೊನಾ ಸೋಂಕಿತನ ಸಾವಿನ ಹಿನ್ನೆಲೆ, ಆತ ವಾಸವಿದ್ದ ಸಿರಾ ಪಟ್ಟಣದ ಬೇಗಂ ಮೊಹಲ್ಲಾದ ಮನೆಯ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಈ ಪ್ರದೇಶದಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ತಾಲೂಕಾಡಳಿತದ ವತಿಯಿಂದ ಮನೆ ಮನೆಗೆ ಪಡಿತರ ವಿತರಿಸಲಾಗುತ್ತಿದೆ. ಯಾರೂ ಕೂಡಾ ಮನೆಯಿಂದ ಹೊರಬರದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಜೊತೆಗೆ 100 ಮೀಟರ್ ಸುತ್ತಳತೆಯಲ್ಲಿನ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ಬೇಗಂ ಮೊಹಲ್ಲಾ ಸಂಪೂರ್ಣ ಸ್ತಬ್ಧವಾಗಿದೆ.