watch video: ತುಂಗಾ ನದಿಯಲ್ಲಿ ತೇಲಿಬಂತು ಗುಡ್ಡದ ಭಾಗ, ಅಷ್ಟಕ್ಕೂ ಘಟನೆ ನಡೆದದ್ದು ಎಲ್ಲಿ? - floating hill
🎬 Watch Now: Feature Video

ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮನೆ ಮಠ ಕುಸಿದು ಜನ, ಜಾನುವಾರುಗಳು ತೇಲಿಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಆದರೆ ಇಲ್ಲಿ ಅರ್ಧ ಮುಳುಗಿದ ಸ್ಥಿತಿಯಲ್ಲಿ ತೇಲಿ ಸಾಗುತ್ತಿರುವುದು ಕುಸಿದಿರುವ ಗುಡ್ಡದ ಭಾಗ. ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಹರಿಯುತ್ತಿರುವ ತುಂಗಾ ನದಿಯಲ್ಲಿ ಕುಸಿದ ಗುಡ್ಡದ ಭಾಗವೇ ಅರ್ಧ ಮುಳುಗಿದ ಸ್ಥಿತಿಯಲ್ಲಿ ತೇಲಿಕೊಂಡು ಹೋಗುತ್ತಿದ್ದ ದೃಶ್ಯ ನೂಡುಗರನ್ನು ಆಶ್ಚರ್ಯ ಪಡಿಸುವಂತಿತ್ತು.