ಜನಮನ ಸೆಳೆದ ಮಲೆನಾಡಿನ ಜೋಡೆತ್ತು ಗಾಡಿ ಸ್ಪರ್ಧೆ
🎬 Watch Now: Feature Video
ಚಿಕ್ಕಮಗಳೂರು: ಜನಸಾಮಾನ್ಯರಿಗೆ ಬೇಜಾರಾದ್ರೆ ಸಿನಿಮಾ, ಆಟ, ಪ್ರವಾಸ ಹೀಗೆ ಸುತ್ತಾಡ್ತಾರೆ. ಆದರೆ ವರ್ಷಪೂರ್ತಿ ಹೊಲಗದ್ದೆಗಳಲ್ಲಿ ದುಡಿಯೋ ಮೂಕಪ್ರಾಣಿಗಳು ಏನು ಮಾಡಬೇಕು. ಅದಕ್ಕಾಗಿ, ಹೊಲ-ಗದ್ದೆಗಳಲ್ಲಿ ಉಳುಮೆ ಕಾರ್ಯಗಳೆಲ್ಲಾ ಮುಗಿದ ನಿಮಿತ್ತ ಚಿಕ್ಕಮಗಳೂರಿನಲ್ಲಿ ಎತ್ತುಗಳಿಗಾಗಿಯೇ ಜೋಡೆತ್ತಿನ ಗಾಡಿ ಸ್ಪರ್ಧೆ ಏರ್ಪಡಿಸಲಾಗಿದೆ. ರಾಜ್ಯದ ಮೂಲೆಮೂಲೆಗಳಿಂದ ಬಂದು ಯುದ್ಧಕ್ಕೆ ಸನ್ನದ್ಧರಾದ ಸೈನಿಕರಂತಿದ್ದ ಎತ್ತುಗಳು ನೋಡುಗರ ಮನಸೆಳೆದಿವೆ. ಚಿಕ್ಕಮಗಳೂರಿನ ತೇಗೂರಿನಲ್ಲಿ ನಡೆದ 17ನೇ ವರ್ಷದ ಜೋಡೆತ್ತಿನ ಗಾಡಿ ಸ್ಪರ್ಧೆ ಗ್ರಾಮದಲ್ಲಿ ಹಬ್ಬದ ವಾತಾವರಣವನ್ನೆ ನಿರ್ಮಿಸಿತ್ತು. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ.
Last Updated : Feb 1, 2021, 9:05 PM IST