ಬೆಟ್ಟ-ಗುಡ್ಡ ಅಲೆದಾಡಿದ್ರೂ ಸಿಗ್ತಿಲ್ಲ ನೆಟ್ವರ್ಕ್, ಆನ್ಲೈನ್ ತರಗತಿ ಕೇಳಲಾಗದೇ ವಿದ್ಯಾರ್ಥಿಗಳ ಸಂಕಟ - No Network in Beltangadi latest
🎬 Watch Now: Feature Video

ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಆನ್ಲೈನ್ ಮೂಲಕ ಪಾಠ ಮಾಡುವಂತೆ ಸೂಚಿಸಿದರೂ ಹಳ್ಳಿ ಪ್ರದೇಶದ ಶಾಲೆಗಳ ಶಿಕ್ಷಕರು ಹಾಗೂ ಮಕ್ಕಳ ಒದ್ದಾಟ ಹೇಳತೀರದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಸುಮಾರು 30 ಕಿಮೀ ದೂರದಲ್ಲಿರುವ ಕಳೆಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಲೆತ್ತಡ್ಕ ಎಂಬ ಶಾಲೆಯ ಹತ್ತನೇ ತರಗತಿಯ ಸುಮಾರು 23 ವಿದ್ಯಾರ್ಥಿಗಳು ನೆಟ್ವರ್ಕ್ಗಾಗಿ ಗುಡ್ಡ ಗಾಡು ಅಲೆದಾಡುವ ಪರಿಸ್ಥಿತಿ ಬಂದೊದಗಿದೆ.